Sunday, September 8, 2024

ಕೃಷಿ ಸಾಲ ಮರುಪಾವತಿ: ಗಡುವು ಸರಿಪಡಿಸಲು ಕೆ.ಪ್ರತಾಪಚಂದ್ರ ಶೆಟ್ಟಿ ಆಗ್ರಹ

ಕುಂದಾಪುರ: ಕೋವಿಡ್ ಎರಡನೆ ಅಲೆಯ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯವರು ರೈತರಿಗೆ ಕೃಷಿ ಸಾಲ ಮರುಪಾವತಿ ಮಾಡಲು ಸಮಯವನ್ನು ನೀಡಿದೆ. ಸಹಕಾರ ಸಂಘಗಳ ಮೂಲಕ ಜಾರಿಗೊಳಿಸಲಾದ ಈ ಬೆಂಬಲ ಪ್ಯಾಕೇಜ್ ಯೋಜನೆಯಲ್ಲಿ ದಿನಾಂಕದ ಗೊಂದಲವಿದೆ ಅದನ್ನು ಸರಿ ಪಡಿಸಬೇಕೆಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು ಹಾಲಿ ಸದಸ್ಯರು ಆದ ಕೆ. ಪ್ರತಾಪ ಚಂದ್ರ ಶೆಟ್ಟಿ ಆಗ್ರಹಿಸಿದ್ದಾರೆ.


ಈ ಬಗ್ಗೆ ಅವರು ರಾಜ್ಯದ ಸಹಕಾರ ಸಚಿವರಾದ ಎಸ್. ಟಿ. ಸೋಮಶೇಖರವರಿಗೆ ಪತ್ರ ಬರೆದಿದ್ದಾರೆ. ರೈತರು ಶೂನ್ಯ ಬಡ್ಡಿದರದಲ್ಲಿ ಪಡೆದ 3 ಲಕ್ಷ ರೂಪಾಯಿಗಳವೆರಗಿನ ಸಾಲ ಮತ್ತು ಶೇಕಡಾ 3 ಬಡ್ಡಿದರದಲ್ಲಿ ಪಡೆದ 10 ಲಕ್ಷ ರೂಪಾಯಿಗಳವರೆಗೆ ಪಡೆದ ಸಾಲದ ದೀರ್ಘಾವಧಿ ಮತ್ತು ಮದ್ಯಮಾವಧಿ ಕೃಷಿಸಾಲವನ್ನು ಮರುಪಾವತಿ ಮಾಡಲು ಮತ್ತು ಕಂತು ತುಂಬಲು ಜುಲೈ 31 ವರೆಗೆ ಸಮಯಾವಕಾಶವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಆದರೆ ಸಹಕಾರ ಇಲಾಖೆ ಜೂನ್ 30 ವರೆಗೆ ಮಾತ್ರ ಕಾಲಾವಕಾಶ ಎಂದು ಆದೇಶ ಹೊರಡಿಸಿದೆ. ಇದರಿಂದ ರೈತರಲ್ಲಿ ಗೊಂದಲವಿದ್ದು ಇದನ್ನು ಸರಿಪಡಿಸಬೇಕಾಗಿದೆ. ಈಗಾಗಲೆ ಜನತಾ ಕರ್ಪ್ಯೂ ಮತ್ತು ಲಾಕ್‌ಡೌನ್‌ನಿಂದಾಗಿ ರೈತರು ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ. ಈ ರೀತಿಗೊಂದಲ ಉಂಟಾದರೆ ರೈತರು ಬೆಂಬಲ ಪ್ಯಾಕೇಜಿನಿಂದ ವಂಚಿತರಾಗುತ್ತಿದ್ದಾರೆ. ಮುಖ್ಯಮಂತ್ರಿಯವರು ಘೋಷಿಸಿದಂತೆ ಸಹಕಾರ ಸಂಸ್ಥೆಗಳ ಮೂಲಕ ಪಡೆದ ಸಾಲದ ಮರುಪಾವತಿ ಗಡುವಿನ ದಿನಾಂಕವನ್ನು ಸರಿ ಪಡಿಸುವಂತೆ ಕೆ. ಪ್ರತಾಪಚಂದ್ರ ಶೆಟ್ಟಿಯವರು ಸಹಕಾರ ಸಚಿವರಲ್ಲಿ ಮನವಿ ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!