spot_img
Monday, March 23, 2026
spot_img

500 ಎಕ್ರೆ ಭತ್ತದ ಸಸಿಮಡಿ ನರ್ಸರಿ ತಯಾರಿಗೆ ಚಾಲನೆ


ಕುಂದಾಪುರ, ಮೇ.27: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ – ಕೃಷಿ ವಿಭಾಗದ ಶ್ರೀ ಸಿದ್ಧವನ ನರ್ಸರಿ ಉಜಿರೆ ಇದರ ಸಂಯುಕ್ತ ಆಶ್ರಯದೊಂದಿಗೆ ಸಿದ್ಧವನ ಉಪ ನರ್ಸರಿಯ ಮೂಲಕ ಕಾಳಾವರ ಸುಜಿತ್ ಕುಮಾರ್ ಶೆಟ್ಟಿ ಯವರ 1ಎಕರೆ ಜಾಗದಲ್ಲಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಮಹತ್ವಕಾಂಕ್ಷಿ ಕಾರ್ಯಕ್ರಮವಾದ ಯಂತ್ರ ಶ್ರೀ ಯೋಜನೆಗೆ ಕುಂದಾಪುರ ತಾಲ್ಲೂಕು ಹಾಗೂ ಆಸುಪಾಸಿನ ತಾಲ್ಲೂಕುಗಳ ರೈತರಿಗೆ ಈ ಯೋಜನೆಯ ಮೂಲಕ ಭತ್ತದ ನಾಟಿ ಮಾಡಲು ಅನುಕೂಲವಾಗುವಂತೆ 500 ಎಕ್ರೆ ಗೆ ಬೇಕಾದ 50,000 ನರ್ಸರಿ ಟ್ರೇ ಸಸಿ ಮಡಿ ತಯಾರಿಗೆ ಈ ದಿನ ಉಡುಪಿ ವಿಭಾಗೀಯ ಸಿ.ಎಚ್.ಎಸ್.ಸಿ ಯೋಜನಾಧಿಕಾರಿ ಅಶೋಕ್ ರವರು ಬಿತ್ತನೆ ಬೀಜವನ್ನು ಟ್ರೇ ಗೆ ಬಿತ್ತನೆ ಬೀಜವನ್ನು ತುಂಬುವ ಮೂಲಕ ಚಾಲನೆ ಮಾಡಿದರು.

ಈ ನರ್ಸರಿಯಲ್ಲಿ ರೈತರಿಗೆ ಯಂತ್ರದ ಮೂಲಕ ಭತ್ತದ ಬೇಸಾಯ ಮಾಡಲು 1ಎಕ್ರೆ ಜಾಗಕ್ಕೆ ಬೇಕಾಗುವ ಎಂಓ 4 ತಳಿಯ 70 ರಿಂದ 80 ಟ್ರೇ(2×1 ಉದ್ಧ-ಅಗಲದ)ಗಳನ್ನು ರೈತರು ಮುಂಚಿತವಾಗಿ ಬುಕ್ಕಿಂಗ್ ಮಾಡಿದಲ್ಲಿ ಕ್ಲಪ್ತ ಸಮಯದಲ್ಲಿ ತಯಾರಿಸಿ ನೀಡಲಾಗುವುದು ಎಂದರು.

ಈ ಸಂದರ್ಭ ತಾಲ್ಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್, ವಲಯ ಮೇಲ್ವಿಚಾರಕರಾದ ನಾಗರಾಜ್ ಹೆಚ್, ಲೆಕ್ಕಪರಿಶೋಧಕರಾದ ಮದನ್, ಸೇವಾಪ್ರತಿನಿಧಿ ಶೇಖರ್ ದೇವಾಡಿಗ, ಯಂತ್ರ ಶ್ರೀ ಯೋಧರಾದ ಸುಜಿತ್ ಕುಮಾರ್ ಶೆಟ್ಟಿ, ಯಂತ್ರ ಚಾಲಕರಾದ ರಾಜಶೇಖರ್, ರೈತರಾದ ಭಾಸ್ಕರ್, ಆನಂದ್, ಸುಶೀಲಾ, ವನಜಾ, ಸರೋಜಾ ಮತ್ತು ಮತ್ತಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!