spot_img
Tuesday, March 24, 2026
spot_img

ರೆಡ್‌ಕ್ರಾಸ್ ಕುಂದಾಪುರ ಶಾಖೆಯಿಂದ ಕೋವಿಡ್ ಆಸ್ಪತ್ರೆಗೆ 5 ಅಕ್ಸಿಜನ್ ಕಾನ್ಸನ್‌ಟ್ರೇಟರ್ ಕೊಡುಗೆ

ಕುಂದಾಪುರ: ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ಶಾಖೆಯ ವತಿಯಿಂದ ಕುಂದಾಪುರದ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ಐದು 5 ಅಕ್ಸಿಜನ್ ಕಾನ್ಸನ್‌ಟ್ರೇಟರ್ ಕೊಡುಗೆಯಾಗಿ ನೀಡಲಾಯಿತು.


ಕೊಡುಗೆ ಸ್ವೀಕರಿಸಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು, ಉಡುಪಿ ಜಿಲ್ಲೆಯಲ್ಲಿ ದಾನಿಗಳು ಅಕ್ಸಿಜನ್ ಕಾನ್ಸನ್‌ಟ್ರೇಟರ್ ನೀಡುವ ಮೂಲಕ ಜೀವ ರಕ್ಷಣೆಗೆ ನೆರವಾಗುತ್ತಿದ್ದಾರೆ. ರೆಡ್‌ಕ್ರಾಸ್ ಸಂಸ್ಥೆ ನೀಡಿರುವ ಈ ಕೊಡುಗೆ ಕುಂದಾಪುರ ಕೋವಿಡ್ ಆಸ್ಪತ್ರೆಗೆ ಅಮೂಲ್ಯವಾಗಲಿದೆ. ಅದೆಷ್ಟೋ ಜನರ ಪ್ರಾಣ ಉಳಿಸಲು ನೆರವಾಗುತ್ತದೆ ಎಂದರು.


ಜಿ.ಶಂಕರ್ ಅವರು 10, ರೆಡ್‌ಕ್ರಾಸ್‌ನಿಂದ 5, ಇನ್ನಿತರ ಆನೇಕರು ತಮ್ಮಿಂದಾದ ಪ್ರಮಾಣದಲ್ಲಿ ನೀಡುತ್ತಿದ್ದಾರೆ. ಸರಕಾರದಿಂದ ೨೦ ಉಪಕರಣಗಳು ದೊರೆಯುತ್ತಿವೆ ಎಂದರು.


ಕೊರೋನಾ 3 ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ತಜ್ಞರ ವರದಿಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 25 ಐಸಿಯು ಬೆಡ್‌ಗಳ ಮಕ್ಕಳ ಆಸ್ಪತ್ರೆ ನಿರ್ಮಾಣ ನಡೆಯಲಿದೆ. ನಿರ್ಮಿತಿ ಕೇಂದ್ರದ ಲಾಭಾಂಶ ಹಣದಲ್ಲಿ ಉಡುಪಿಯಲ್ಲಿ 15, ಕುಂದಾಪುರದಲ್ಲಿ 10 ಐಸಿಯು ಹಾಸಿಗೆಗಳ ಮಕ್ಕಳ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.


ಅಮೇರಿಕಾದಲ್ಲಿರುವ ಡಾ|ದಿನಕರ ಶೆಟ್ಟಿ, ಪ್ರತಿಮಾ ಶೆಟ್ಟಿ ಅವರು 2, ಜನೌಷಧ ಕೇಂದ್ರದ ಮೂಲಕ ೩ ಉಪಕರಣಗಳನ್ನು ರೆಡ್‌ಕ್ರಾಸ್ ಸಂಸ್ಥೆ ನೀಡಿದೆ.


ಈ ಸಂದರ್ಭದಲ್ಲಿ ಸಹಾಯಕ ಕಮಿಷನರ್ ಕೆ.ರಾಜು, ತಾಲೂಕು ಆರೋಗ್ಯಾಧಿಕಾರಿ ಡಾ|ನಾಗಭೂಷಣ ಉಡುಪ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|ರಾಬರ್ಟ್ ರೆಬೆಲ್ಲೋ, ಕೋವಿಡ್ ನೋಡೆಲ್ ಅಧಿಕಾರಿ ಡಾ|ನಾಗೇಶ್, ರೆಡ್‌ಕ್ರಾಸ್ ಸಭಾಪತಿ ಎಸ್.ಜಯಕರ ಶೆಟ್ಟಿ, ಉಪಾಧ್ಯಕ್ಷ ಡಾ|ಉಮೇಶ ಪುತ್ರನ್, ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಶಿವರಾಮ ಶೆಟ್ಟಿ, ಸದಸ್ಯರಾದ ಗಣೇಶ ಆಚಾರ್ಯ, ಸೀತಾರಾಯ ನಕ್ಕತ್ತಾಯ, ಸಂತೋಷ್ ಕುಮಾರ್ ಶೆಟ್ಟಿ, ನಾರಾಯಣ ದೇವಾಡಿಗ, ಡಾ|ಸೋನಿ ಡಿಕೋಸ್ಟಾ, ಡಾ|ವಿಜಯ ಶಂಕರ್, ಡಾ|ಅಶಿತ್, ಹಿರಿಯ ಶುಶ್ರೂಷಕಿ ಅನ್ನಪೂರ್ಣ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!