spot_img
Tuesday, March 24, 2026
spot_img

ಕುಂದಾಪುರ ಕೋವಿಡ್ ಆಸ್ಪತ್ರೆಗೆ ತುರ್ತು ಅಗತ್ಯ ಔಷಧಗಳ ಕೊಡುಗೆ ನೀಡಿದ ಪ್ರದೀಪ್ ಕುಮಾರ್ ಶೆಟ್ಟಿ

ಕುಂದಾಪುರ, ಮೇ.22: ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು ಕುಂದಾಪುರ ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸುಮಾರು 50 ಸಾವಿರ ಮೌಲ್ಯದ ತುರ್ತು ಅಗತ್ಯ ಔಷಧಗಳನ್ನು ಕೊಡುಗೆಯಾಗಿ ನೀಡಿದರು.
ಶನಿವಾರ ಕುಂದಾಪುರ ಸರಕಾರಿ ಕೋವಿಡ್ ಆಸ್ಪತ್ರೆಯ ಕೋವಿಡ್ ನೋಡೆಲ್ ಅಧಿಕಾರಿ ಡಾ|ನಾಗೇಶ್ ಅವರಿಗೆ ಹಸ್ತಾಂತರಿಸಿದರು.


ಕೊಡುಗೆ ಸ್ವೀಕರಿಸಿ ಮಾತನಾಡಿದ ಡಾ|ನಾಗೇಶ್, ತುರ್ತು ಅಗತ್ಯವಿರುವ ಜೀವರಕ್ಷಕ ಔಷಧಗಳನ್ನು ನೀಡಿದ್ದಾರೆ. ಪ್ರದೀಪ್ ಶೆಟ್ಟಿಯವರ ಸೇವಾ ಮನೋಭಾವ ಇನ್ನಷ್ಟು ಸಹೃದಯಿ ದಾನಿಗಳಿಗೆ ಪ್ರೇರಣೆಯಾಗಲಿ. ಅವರು ಈ ಹಿಂದೆಯೂ ಕೂಡಾ ಇಂತಹ ಸಂದರ್ಭದಲ್ಲಿ ಸಹಕಾರ ನೀಡಿದ್ದಾರೆ. ಕುಂದಾಪುರದಲ್ಲಿ ಸಹೃದಯಿ ದಾನಿಗಳ ಸಂಖ್ಯೆ ಹೆಚ್ಚಿದೆ. ಕೋವಿಡ್‌ನ ಈ ಸಂದರ್ಭದಲ್ಲಿ ತಮ್ಮದೆಯಾದ ಕೊಡುಗೆಯನ್ನು ನೀಡುತ್ತಿದ್ದಾರೆ. ಇಂಥಹ ಕೊಡುಗೆಗಳು ಆನೇಕರ ಜೀವ ಉಳಿಸುತ್ತದೆ. ಮತ್ತೆ ಕೊಡುಗೆ ನೀಡುವವರಿಗೆ ಉತ್ತೇಜನವಾಗುತ್ತದೆ ಎಂದರು.


ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಮಾತನಾಡಿ, ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಡಾ|ನಾಗೇಶ್ ನೇತೃತ್ವದ ವೈದ್ಯರ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸರಕಾರಿ ಆಸ್ಪತ್ರೆಗಳಿಗೆ ಸಾರ್ವಜನಿಕ ಸಹಭಾಗಿತ್ವ ದೊರೆತಾಗ ಇನ್ನಷ್ಟು ಉತ್ತಮ ಸೇವೆ ಸಿಗಲು ಸಾಧ್ಯವಾಗುತ್ತದೆ. ಆ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಕಳೆದ ಒಂದು ವಾರದಿಂದ ವಿವಿಧೆಡೆಗಳಿಂದ ತುರ್ತು ಅಗತ್ಯ ಔಷಧಗಳನ್ನು ಖರೀದಿಸಿ ಇವತ್ತು ಆಸ್ಪತ್ರೆಗೆ ಹಸ್ತಾಂತರ ಮಾಡಲಾಗುತ್ತಿದೆ. ಇತ್ತೀಚೆಗೆ ನನ್ನ ನೂತನ ಮನೆಯ ಪ್ರವೇಶೋತ್ಸವ, ಕೊರೋನಾ ಕಾರಣದಿಂದ ಅತೀ ಸರಳವಾಗಿ ನಡೆಯಿತು. ಯಾವುದೇ ದುಂಧುವೆಚ್ಚ ಆಗಲಿಲ್ಲ. ಆ ಹಣದಿಂದ ಕೊರೋನಾ ರೋಗಿಗಳಿಗೆ ಅನುಕೂಲವಾಗಲಿ ಎನ್ನುವ ನೆಲೆಯಲ್ಲಿ ಅಗತ್ಯ ಔಷಧಗಳನ್ನು ನೀಡಲು ತೀರ್ಮಾನಿಸಿದೆ ಎಂದರು.


ಈ ಸಂದರ್ಭದಲ್ಲಿ ಡಾ|ವಿಜಯ ಶಂಕರ್, ಅಂಪಾರು ಗ್ರಾಮ ಪಂಚಾಯತ್ ಸದಸ್ಯ ಗಣೇಶ ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.

ಸರಳವಾಗಿ ನಡೆದ ಪ್ರದೀಪ ಕುಮಾರ್ ಶೆಟ್ಟಿ ಅವರ ನೂತನ ಮನೆ ಪ್ರವೇಶೋತ್ಸವ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!