spot_img
Tuesday, March 24, 2026
spot_img

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್: ವಿಶ್ವ ಶ್ರೇಷ್ಠ ನಾಯಕರಾಗುವವರು ಯಾರು?


-ಎಸ್.ಜಗದೀಶಚಂದ್ರ ಅಂಚನ್ ಸೂಟರ್ ಪೇಟೆ


ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ರದ್ದಾದ ನಂತರ ಭಾರತೀಯ ಕ್ರಿಕೆಟ್ ತಂಡ ಮಹತ್ವದ ಕ್ರಿಕೆಟ್ ಸರಣಿಗೆ ಈಗ ಸಜ್ಜಾಗಿದೆ. ಆಂಗ್ಲರ ನಾಡಿನಲ್ಲಿ ಈ ಕ್ರಿಕೆಟ್ ಸರಣಿ ಆಯೋಜನೆಯಾಗಿದ್ದು ಈ ಮಹತ್ವದ ಸರಣಿ ಭಾರೀ ಕುತೂಹಲವನ್ನು ಕೆರಳಿಸಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಫೈನಲ್ ಪಂದ್ಯವು ಇಂಗ್ಲೆಂಡಿನಲ್ಲಿ ಜೂನ್ -18ರಂದು ನಡೆಯಲಿದೆ. ವಿಶ್ವದ ಎರಡು ಅತ್ಯುತ್ತಮ ಟೆಸ್ಟ್ ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಸ್ಪರ್ಧಿಸುತ್ತಿದೆ. ಇಂಗ್ಲೆಂಡಿನ ಸೌತಾಂಪ್ಟನ್‍ನಲ್ಲಿ ನಡೆಯುವ ಈ ಫೈನಲ್ ಪಂದ್ಯ ಬಹು ಕುತೂಹಲ ಕೆರಳಿಸಿದ್ದು, ಫೈನಲ್ ಪಂದ್ಯದಲ್ಲಿ ಜಯಿಸುವ ತಂಡ ಯಾವುದು ಎನ್ನುವ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಹೌದು, ಮೊದಲ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಇಂತಹ ಪೈಪೆÇೀಟಿಯ ವಾತಾವರಣ ನಿರ್ಮಾಣವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಎನ್ನುವ ಈ ಮಹಾಸಂಗ್ರಾಮದಲ್ಲಿ ‘ದಿಗ್ವಿಜಯ’ ಸಾಧಿಸುವ ತಂಡದ ಬಗ್ಗೆ ಭಾರೀ ಚರ್ಚೆ ಈಗ ಆರಂಭವಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲುವ ಪ್ರಯತ್ನದ ಜೊತೆಗೆ ತನ್ನ ಹಳೆಯ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳುವ ಸಂಕಲ್ಪವನ್ನು ಹೊಂದಿದೆ. ಅತ್ತ ನ್ಯೂಜಿಲೆಂಡ್ ತಂಡ ಕೂಡ ಈ ಪಂದ್ಯವನ್ನು ಗೆದ್ದು ಟೆಸ್ಟ್ ಚಾಂಪಿಯನ್ ಪಟ್ಟಕ್ಕೇರುವ ಸಾಹಸದಲ್ಲಿದೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಭಾರತ 18ರನ್ ಗಳ ಸೋಲನ್ನು ಕಂಡಿರುವುದನ್ನು ಇನ್ನೂ ಮರೆತಿಲ್ಲ. ಈ ಸೋಲಿನ ಸೇಡನ್ನು ತೀರಿಸಿಕೊಳ್ಳುವುದಕ್ಕೆ ಈ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಭಾರತೀಯ ತಂಡಕ್ಕೆ ಸರಿಯಾದ ವೇದಿಕೆಯಾಗಿದೆ . ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈಗಾಗಲೇ ಪ್ರಕಟಿಸಿರುವ ವಿಶ್ವ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿದ್ದು, ನ್ಯೂಜಿಲೆಂಡ್ ತಂಡ ದ್ವಿತೀಯ ಸ್ಥಾನದಲ್ಲಿದೆ.


ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2019 -21ನೇ ಸಾಲಿನ ಅತ್ಯಂತ ಮಹತ್ವಪೂರ್ಣ ಪಂದ್ಯಾಟವಾಗಿದೆ. ಉಭಯತಂಡಗಳು ಈ ಪಂದ್ಯಾಟದಲ್ಲಿ ಸ್ಪರ್ಧಾತ್ಮಕ ರೀತಿಯಲ್ಲಿ ಸೆಣಸಾಟ ನಡೆಸಿವೆ. ಉಭಯತಂಡಗಳು ತಲಾ ಐದು ಕ್ರಿಕೆಟ್ ಸರಣಿಗಳನ್ನು 2019-21ನೇ ಸಾಲಿನಲ್ಲಿ ಆಡಿವೆ. ಭಾರತ ಕ್ರಿಕೆಟ್ ತಂಡ ಆಡಿದ 5 ಸರಣಿಗಳ 17 ಟೆಸ್ಟ್ ಪಂದ್ಯಗಳಲ್ಲಿ 12ರಲ್ಲಿ ಗೆಲುವು, 4ರಲ್ಲಿ ಸೋತು, 1 ಪಂದ್ಯ ಡ್ರಾ ಗೊಂಡು 520 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಕೂಡ 5 ಟೆಸ್ಟ್ ಸರಣಿಗಳಲ್ಲಿ 11 ಟೆಸ್ಟ್ ಪಂದ್ಯಗಳನ್ನು ಆಡಿದೆ. 7ರಲ್ಲಿ ಗೆಲುವು, 4ರಲ್ಲಿ ಸೋಲು ಕಂಡು 420 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಹಾಗಾಗಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಈ ಭಾರೀ ಅತ್ಯಂತ ಸ್ಪರ್ಧಾತ್ಮಕವಾಗಿ ಕಂಡು ಬಂದಿದೆ.


ನಾಯಕರ ಹೋಲಿಕೆ :
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಹೋರಾಟಕ್ಕೆ ಇಂಗ್ಲೆಂಡ್ ನಲ್ಲಿ ವೇದಿಕೆ ನಿರ್ಮಾಣವಾಗುತ್ತಿದ್ದಂತೆ ಉಭಯತಂಡಗಳ ಬಲಾಬಲದ ನಂತರ ಎರಡೂ ತಂಡಗಳ ನಾಯಕರುಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭಾರತ ತಂಡವನ್ನು ಹಾಗೂ ಕೆನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇವರಿಬ್ಬರೂ ಕೂಡ ಕ್ರಿಕೆಟ್ ಜಗತ್ತಿನಲ್ಲಿ ಪ್ರಸ್ತುತ ಅತ್ಯುತ್ತಮ ನಾಯಕರಾಗಿದ್ದಾರೆ. ಇವರಿಬ್ಬರೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ತಮ್ಮ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸಿದ್ದು ದೊಡ್ಡ ಸಾಹಸವೇ ಸರಿ. ಹಾಗಾಗಿ, ಇವರಿಬ್ಬರೂ ಫೈನಲ್ ಪಂದ್ಯದಲ್ಲಿ ತಾವು ವಿಶ್ವ ಶ್ರೇಷ್ಠ ನಾಯಕರು ಎನ್ನುವುದನ್ನು ಪ್ರಚುರ ಪಡಿಸಿಕೊಳ್ಳಬೇಕಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಇವರಿಬ್ಬರೂ ಯಾವ ರೀತಿ ತಮ್ಮ ನಾಯಕತ್ವವನ್ನು ಪ್ರದರ್ಶಿಸುತ್ತಾರೆ ಎಂಬುದರ ಮೇಲೆ ಕ್ರಿಕೆಟ್ ಜಗತ್ತು ಕಣ್ಣಿಟ್ಟಿದೆ.


ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಈಗಾಗಲೇ ಉಭಯತಂಡಗಳು ಸಜ್ಜುಗೊಂಡು ಬಲಾಢ್ಯ ತಂಡದೊಂದಿಗೆ ಆಂಗ್ಲರ ನಾಡಿಗೆ ಪ್ರಯಾಣ ಬೆಳಸಲಿದೆ.ಈ ನಡುವೆ ಬಹು ಚರ್ಚಿತ ವಿಷಯವೆಂದರೆ, ವಿರಾಟ್ ಕೊಹ್ಲಿ ಮತ್ತು ಕೆನ್ ವಿಲಿಯಮ್ಸನ್ ನಡುವೆ ಯಾರು ಶ್ರೇಷ್ಠ ಬ್ಯಾಟ್ಸ್ ಮನ್ ಎನ್ನುವುದು ಕೂಡ ಸೇರಿದೆ. ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಇಬ್ಬರೂ ತಮ್ಮ ತಂಡಗಳಿಗೆ ಬಹಳ ಮುಖ್ಯವಾದ ಬ್ಯಾಟ್ಸ್‍ಮನ್‍ಗಳು ಮತ್ತು ಅವರು ಗಳಿಸುವ ರನ್ ತಂಡಕ್ಕೆ ಹೆಚ್ಚಿನ ಲಾಭ ಪಡೆಯುತ್ತದೆ. ಮುಖ್ಯವಾಗಿ ಕೆನ್ ವಿಲಿಯಮ್ಸನ್, ವಿರಾಟ್ ಕೊಹ್ಲಿಯಷ್ಟೇ ಅತ್ಯುತ್ತಮ ಆಟಗಾರ. ಕೊಹ್ಲಿಗಿಂತ ವಿಲಿಯಮ್ಸನ್ ಯಾವುದರಲ್ಲೂ ಕಡಿಮೆ ಇಲ್ಲ . ಇಬ್ಬರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ತಮ್ಮ ತಮ್ಮ ತಂಡದ ಆಧಾರಸ್ತಂಭ ಬ್ಯಾಟ್ಸ್ ಮನ್ನರು.


ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆನ್ ವಿಲಿಯಮ್ಸನ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವವರು. ಟೆಸ್ಟ್ ಚಾಂಪಿಯನ್ ಶಿಪ್‍ನಲ್ಲಿ ಯಾರು ಪ್ರಾಬಲ್ಯ ಹೊಂದಿದ್ದಾರೆಂದು ಅಂಕಿ ಅಂಶಗಳತ್ತ ಗಮನ ಹರಿಸಿದಾಗ, ವಿರಾಟ್ ಕೊಹ್ಲಿ 2019-21ನೇ ಸಾಲಿನಲ್ಲಿ ಒಟ್ಟು 14 ಪಂದ್ಯಗಳನ್ನು ಆಡಿದ್ದಾರೆ ಮತ್ತು ಇದರಲ್ಲಿ ಅವರು ಎರಡು ಶತಕಗಳನ್ನು ಒಳಗೊಂಡಂತೆ 43.85 ಸರಾಸರಿಯಲ್ಲಿ ಒಟ್ಟು 877 ರನ್ ಗಳಿಸಿದ್ದಾರೆ. ಈ ಶತಕಗಳನ್ನು ವಿರಾಟ್ ಕೊಹ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಬಾರಿಸಿದ್ದರು. ಕೆನ್ ವಿಲಿಯಮ್ಸನ್ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ 9 ಪಂದ್ಯಗಳನ್ನು ಆಡಿದ್ದಾರೆ ಮತ್ತು ಇದರಲ್ಲಿ ಅವರು 817 ರನ್ ಗಳಿಸಿದ್ದಾರೆ. ಈ ಪಂದ್ಯಗಳಲ್ಲಿ ಕೇನ್ ವಿಲಿಯಮ್ಸನ್ ಸರಾಸರಿ 58.35. ಈ ಪಂದ್ಯಗಳಲ್ಲಿ ಕೇನ್ ಮೂರು ಶತಕಗಳನ್ನು ಗಳಿಸಿದ್ದಾರೆ. ಅಂದರೆ, ರನ್ ಸರಾಸರಿ ದೃಷ್ಟಿಯಿಂದ ಕೆನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ ಮೇಲೆ ಪ್ರಾಬಲ್ಯ ಸಾಧಿಸಿದ್ದು ಸ್ಪಷ್ಟವಾಗಿದೆ. ವಿರಾಟ್ ಕೊಹ್ಲಿ ರನ್ ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೂ ಆಡಿದ ಟೆಸ್ಟ್ ಪಂದ್ಯಗಳ ಸಂಖ್ಯೆ ಹೆಚ್ಚಿದೆ.
ಅಂಕಿಅಂಶಗಳು ವಿರಾಟ್ ಕೊಹ್ಲಿ ಹಾಗೂ ಕೆನ್ ವಿಲಿಯಮ್ಸನ್ ಅವರ ಬ್ಯಾಟಿಂಗ್ ಲೆಕ್ಕಾಚಾರವನ್ನು ತೋರಿಸಿದರೂ ಕೂಡ ಸಮಕಾಲೀನ ಕ್ರಿಕೆಟಿನಲ್ಲಿ ಇವರಿಬ್ಬರೂ ಸಮನಾದ ಕ್ರಿಕೆಟ್ ಆಟಗಾರರು. ಅದರಲ್ಲೂ ಟೆಸ್ಟ್ ಕ್ರಿಕೆಟಿನಲ್ಲಿ ಅವರಿಬ್ಬರೂ ಒಬ್ಬರಿಗೊಬ್ಬರು ಪೈಪೆÇೀಟಿಯ ಬ್ಯಾಟಿಂಗ್ ಪ್ರದರ್ಶನ ನೀಡಬಲ್ಲ ನಿಸ್ಸೀಮರು. ಟೆಸ್ಟ್ ಕ್ರಿಕೆಟಿನಲ್ಲಿ ಸಮರ್ಥ ನಾಯಕರಾಗಿ ಗುರುತಿಸಿಕೊಂಡಿರುವ ಇವರು ಸಮರ್ಥ ಬ್ಯಾಟ್ಸ್ ಮನ್ನರು. ಹಾಗಾಗಿ ಫೈನಲ್ ಪಂದ್ಯದಲ್ಲಿ ಇವರಿಬ್ಬರ ಬ್ಯಾಟಿಂಗ್ ಪರಾಕ್ರಮವೇ ತಂಡಕ್ಕೆ ಪ್ರಮುಖ ಆಧಾರವಾಗಿದೆ . ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಜಯ ಗಳಿಸುವ ತಂಡದ ನಾಯಕ ವಿಶ್ವ ಶ್ರೇಷ್ಠ ನಾಯಕರಾಗುತ್ತಾರೆ . ತನ್ನ ಪ್ರಬುದ್ಧ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟಿನಲ್ಲಿ ರಾರಾಜಿಸುತ್ತಿರುವ ವಿರಾಟ್ ಕೊಹ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ವಿಜಯಿಯಾಗಿ ವಿಶ್ವ ಶ್ರೇಷ್ಠ ನಾಯಕರಾಗಿ ಮೂಡಿ ಬರಲಿ ಎನ್ನುವುದೇ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!