spot_img
Tuesday, March 24, 2026
spot_img

ರೋಜರಿ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾ ನಿಧನ


ಕುಂದಾಪುರ: ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಂಗೀತಗಾರ ಪಾಸ್ಕಲ್ ಡಿಸೋಜಾ (53ವ) ಮೇ.16ರಂದು ನಿಧನರಾದರು.


ಇವರು ಹಲವಾರು ವರ್ಷಗಳಿಂದ ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಾಗೇ ಸಂಗೀತಗಾರನಾಗಿ ಗುರುತಿಸಿ ಕೊಂಡಿದ್ದರು, ಹಲವಾರು ಗೀತೆಗಳನ್ನು ರಚಿಸಿ ಸಂಗೀತ ಸಿ.ಡಿ.ಗಳನ್ನು ಹೊರತಂದಿದ್ದರು. ಕೊಂಕಣಿ ರಸಮಂಜರಿ ಕಾರ್ಯಕ್ರಮಗಳನ್ನು ನೀಡಿದ್ದರು.ಸುದೀರ್ಘ ಕಾಲ ಕುಂದಾಪುರ ಚರ್ಚಿನಲ್ಲಿ ಭಕ್ತಿಗಾಯನಗಳಿಗೆ ಸಂಗೀತ ನೀಡಿ ಅಮೂಲ್ಯ ಸೇವೆ ನೀಡಿದ್ದರು.


ಮೃತರು ಪತ್ನಿ ವಿನೀತಾ, ಪುತ್ರಿ ಪ್ರಮೀತಾ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಪಾಸ್ಕಲ್ ಡಿಸೋಜಾ ನಿಧನಕ್ಕೆ ಕುಂದಾಪುರ ಚರ್ಚ್‌ನ ಪ್ರಧಾನ ಧರ್ಮಗುರು ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಿಜಯ್ ಡಿಸೋಜಾ, ಪ್ರಾಂಶುಪಾಲರಾದ ಪ್ರವೀಣ್ ಅಮೃತ್ ಮಾರ್ಟಿಸ್, ಕುಂದಾಪುರ ಚರ್ಚ್ ಸಂಗೀತ ತಂಡದ ಅಧ್ಯಕ್ಷೆ, ವಿನಯಾ ಡಿಕೋಸ್ತಾ, ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷ ಜೋನ್ಸನ್ ಡಿ‌ಆಲ್ಮೇಡಾ, ಕುಂದಾಪುರ ಕಥೋಲಿಕ್ ಸಭಾ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಮುಂತಾದವರು ಕಂಬನಿ ಮಿಡಿದಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!