Sunday, September 8, 2024

ಜಡ್ಕಲ್: ಸಿದ್ಧೇಶ್ವರ ಮರಾಠಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ


ಸಮುದಾಯದ ಏಳಿಗೆಗೆ ಸಹಕಾರ ಸಂಘ ಸಹಕಾರಿಯಾಗಲಿ-ಮಾಜಿ ಸಚಿವ ಸೊರಕೆ

ಕುಂದಾಪುರ: ಸಮಾಜದ ಸರ್ವತೋಮುಖ ಅಭಿವೃದ್ದಿ ಸಾಮಾಜಿಕ ಧಾರ್ಮಿಕ, ಆರ್ಥಿಕ ಶೈಕ್ಷಣಿಕ ಮತ್ತು ರಾಜಕೀಯ, ಅಭಿವೃದ್ಧಿಯ ಮೂಲಕ ಸಾಧ್ಯವಿದೆ. ಮರಾಠಿ ಸಮುದಾಯ ಸಾಮಾಜಿಕ ಮತ್ತು ಸಾಂಸ್ಕøತಿಕವಾಗಿ ಸಮೃದ್ಧಿಯನ್ನು ಹೊಂದಿದ್ದರು, ಇದುವರೆಗೂ ಆರ್ಥಿಕವಾಗಿ ತನ್ನದೇ ಆದ ಸಂಸ್ಥೆಯನ್ನು ಕಟ್ಟಿಕೊಳ್ಳುವುದರಲ್ಲಿ ಹಿಂದುಳಿದಿದ್ದು, ಸಿದ್ಧೇಶ್ವರ ಮರಾಠಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ, ಜಡ್ಕಲ್ ಸಮುದಾಯದ ಅಭಿವೃದ್ದಿಗೆ ಮತ್ತು ಗಟ್ಟಿತನಕ್ಕೆ ಸಾಕ್ಷಿಯಾಗಿದೆ ಎಂದು ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಹೇಳಿದರು.


ಜಡ್ಕಲ್‍ನ ಶಾಲೂಮ್ ಕಾಂಪ್ಲೆಕ್ಸ್‍ನಲ್ಲಿ ಸಿದ್ಧೇಶ್ವರ ಮರಾಠಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ, ಜಡ್ಕಲ್ ಉದ್ಘಾಟಿಸಿ ಮಾತನಾಡಿದರು.


ಮರಾಠಿ ಸಮುದಾಯದವರ ಕನಸಿನ ಶಿಶು, ಸುಮಾರು ಮೂವತ್ತು ವರ್ಷಗಳ ಆಶಯ, ಸಹಕಾರಿ ಸಂಸ್ಥೆಯನ್ನು ಹುಟ್ಟು ಹಾಕುವುದಾಗಿತ್ತು. ಅದು ಇಂದು ವಿದ್ಯುಕ್ತವಾಗಿ ಉದ್ಘಾಟನೆಗೊಂಡಿದೆ. ತನ್ಮೂಲಕ ಮರಾಠಿ ಸಮುದಾಯದವರು ಒಗ್ಗಟ್ಟು ಮತ್ತು ಆರ್ಥಿಕ ಸ್ಥಿತಿಯ ಅರಿವಿನ ಅಭಿವೃದ್ಧಿಯ ಸಂಕೇತವನ್ನು ಇದು ಸಾರಿದೆ ಮತ್ತು ಸಮುದಾಯದ ಅಭಿವೃದ್ಧಿಗೆ ಇದು ಪೂರಕ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಗೋಪಾಲ ಪೂಜಾರಿಯವರು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ಧೇಶ್ವರ ಮರಾಠಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಪ್ರವರ್ತಕರಾದ ಮಹಾಲಿಂಗ ನಾಯ್ಕ ಜೋಗಿ ಜಡ್ಡು ಗೋರ್ಕಲ್ ರವರು ಮಾತನಾಡಿ, ಸಂಸ್ಥೆಯ ಬೆಳವಣಿಗೆಗೆ ಸರ್ವರ ಸಹಕಾರ ಅಗತ್ಯ, ರಾಜಕೀಯ ಮುಖಂಡರು, ಸಮಾಜದ ಬಾಂಧವರು ಹಾಗೂ ಅಧಿಕಾರಿ ವರ್ಗದವರ ಮಾರ್ಗದರ್ಶನ ಈ ಸಂಸ್ಥೆಯ ಹುಟ್ಟಿಗೆ ಕಾರಣ ಮತ್ತು ಸರ್ವರ ಪ್ರಯತ್ನ ಶ್ಲಾಘನೀಯ ಎಂದರು.


ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ನಿರ್ದೇಶಕ ಎಸ್.ರಾಜು ಪೂಜಾರಿ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ಕಮಲಶಿಲೆಯ ಇದರ ಉಪಾಧ್ಯಕ್ಷ ನಾಗಪ್ಪ ಪೂಜಾರಿ, ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರ ಸಂಘ ನಿ, ಕುಂದಾಪುರದ ಅಧ್ಯಕ್ಷ ರಮೇಶ್ ಗಾಣಿಗ ಕೊಲ್ಲೂರು, ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮೊಕ್ತೇಸರ ಸೂರ್ಯನಾರಾಯಣ ಭಟ್, ಸೈಂಟ್ ಜಾರ್ಜ್ ಫೋರನ್ ಚರ್ಚ್ ಜಡ್ಕಲ್ ಧರ್ಮಗುರುಗಳಾದ ರೆ ಫಾ ವರ್ಗಿಸ್ ಪುದಿಯೇಡತ್, ಛತ್ರಪತಿ ಯುವಸೇನೆ ಉಪಾಧ್ಯಕ್ಷ ಚಂದ್ರಶೇಖರ್ ನಾಯ್ಕ್ ಹರ್‍ಕೋಡು, ಬೈಂದೂರು ವಲಯ ಮರಾಠಿ ಸಮಾಜ ಸುಧಾರಕ ಸಂಘದ ಗೌರವಾಧ್ಯಕ್ಷ ನಾರಾಯಣ ನಾಯ್ಕ್ ಹಾಗೂ ಹಾಲಿ ಅಧ್ಯಕ್ಷರಾದ ಬೋಜು ನಾಯ್ಕ್, ಪ್ರವರ್ತಕರಾದ ಶ್ರೀಮತಿ ವನಿತಾ ವಿ ಕನ್ಕಿಮಡಿ ಉಪಸ್ಥಿತರಿದ್ದರು.ಸೊಸೈಟಿಯ ಪ್ರವರ್ತಕರಾದ ಸದಾಶಿವ ನಾಯ್ಕ ನಂದಿಗದ್ದೆ, ಸುರೇಶ್ ನಾಯ್ಕ ಬೆಳ್ಳಾಲ, ಮಂಜುನಾಥ್ ನಾಯ್ಕ ದಳಿ, ದೇವಪ್ಪ ನಾಯ್ಕ ಮುತ್ತಾಬೆರು, ಮಂಜುನಾಥ್ ನಾಯ್ಕ ವಾಟೆಬಚ್ಚಲು, ಶಂಕರ ನಾಯ್ಕ್ ಕೊಡಿಯಾಳ್‍ಕೇರಿ, ರವೀಂದ್ರ ನಾಯ್ಕ್ ಮಾರಣಕಟ್ಟೆ ರಾಮನಾಯ್ಕ ಯಳಜಿತ, ಜಯಂತ ನಾಯ್ಕ್ ಹೊಸೂರು, ಶ್ರೀಮತಿ ಮಲ್ಲಿಕಾ ಜೋಗಿಜಿಡ್ಡು ಹಾಗೂ ಗೌರವ ಸಲಹೆಗಾರರಾದ ಡಾ.ರಘು ನಾಯ್ಕ ಮತ್ತು ಉದಯ ನಾಯ್ಕ ಗೋಳಿಹೊಳೆ ಉಪಸ್ಥಿತರಿದ್ದರು.


ಸದಾಶಿವ ನಾಯಕ್ ನಂದಿಗದ್ದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಘು ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವನಿತಾ ವಿ ಕನ್ಕಿಮಡಿ ಸ್ವಾಗತಿಸಿದರು. ಉಪನ್ಯಾಸಕರಾದ ಪಾಂಡುರಂಗ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!