spot_img
Thursday, July 16, 2026
spot_img

ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ಮೆಗಾ ಪ್ಲೇಸ್ಮೆಂಟ್ ಡ್ರೈವ್

ಕುಂದಾಪುರ (ಜೂನ್.03):ಇಲ್ಲಿನಡಾ| ಬಿ. ಬಿ.ಹೆಗ್ಡೆ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ವಿಭಾಗ ಮೆಗಾ ಪ್ಲೇಸ್ಮೆಂಟ್ ಡ್ರೈವ್ 2026ನ್ನು ಆಯೋಜಿಸಿತು. ಈ ಕಾರ್ಯಕ್ರಮವನ್ನು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳ  ಪ್ರಮುಖ ಕಂಪೆನಿಗಳೊ0ದಿಗೆ ಕಾಲೇಜು ಕ್ಯಾಂಪಸ್‌ನಲ್ಲಿ ಸಂದರ್ಶನ ಎದುರಿಸಿ ಉದ್ಯೋಗ ಪಡೆಯವ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಕುಂದಾಪುರದ ಸೃಷ್ಟಿ ಇನ್ಫೋಟೆಕ್‌ನ ಆಡಳಿತ ನಿರ್ದೇಶಕ ಶ್ರೀಹರ್ಷವರ್ಧನ ಶೆಟ್ಟಿ ಉದ್ಘಾಟಿಸಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯವ ಪೂರ್ವದಲ್ಲಿ ವಿದ್ಯಾರ್ಥಿಗಳು ಸೃಜನಶೀಲ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕಂಪೆನಿಯ ಮುಖ್ಯ ಉದ್ದೇಶವನ್ನು ಅರಿತು ವ್ಯವಹರಿಸಿದರೆ ಒಳ್ಳೆಯ ಉದ್ಯೋಗಿಗಳಾಗಲು ಸಾಧ್ಯ. ಬಿ.ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಲು ನಡೆಸುತ್ತಿರುವ ತರಬೇತಿ ಕಾರ್ಯಕ್ರಮ ಕ್ಯಾಂಪಸ್ ನೇಮಕಾತಿ ಶ್ಲಾಘನೀಯ ಎಂದರು.
500ಕ್ಕಿಂತ ಹೆಚ್ಚು ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಡ್ರೆವ್‌ನಲ್ಲಿ ಭಾಗವಹಿಸಿದರು. ಉತ್ಪಾದನಾ, ಮಾಹಿತಿ ತಂತ್ರಜ್ಞಾನ, ಹಣಕಾಸು ಲೆಕ್ಕಾಚಾರ ಮತ್ತು ಮಾರಾಟಕ್ಷೇತ್ರಗಳ ಪ್ರಮುಖ ಕಂಪನಿಗಳು ಪಾಲ್ಗೊಂಡಿದ್ದರಿಂದ ಹಲವು ವಿದ್ಯಾರ್ಥಿಗಳು ಆಯ್ಕೆ ಅಥವಾ ಶಾರ್ಟ್ಲಿಸ್ಟ್ ಆಗುವ ಅವಕಾಶವನ್ನುಪಡೆದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ.ಕೆ.ಉಮೇಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿ ತರಬೇತಿ ಹಾಗೂ ಪ್ಲೇಸ್ಮೆಂಟ್ ಚಟುವಟಿಕೆಗಳತ್ತ ಕಾಲೇಜು ನೀಡುತ್ತಿರುವ ಮಹತ್ವವನ್ನು ಉಲ್ಲೇಖಿಸಿದರು. ಉಪ-ಪ್ರಾಂಶುಪಾಲರಾದ ಡಾ.ಚೇತನ್ ಶೆಟ್ಟಿ ಕೋವಾಡಿ, ಪ್ಲೇಸ್ಮೆಂಟ್ ಸಂಯೋಜಕ ರಜತ್ ಬಂಗೇರ ಉಪಸ್ಥಿತರಿದ್ದರು.
ಪ್ಲೇಸ್‌ಮೆಂಟ್ ಅಧಿಕಾರಿ ತಿಮ್ಮಪ್ಪ ಡಿ.ಎಸ್. ಸ್ವಾಗತಿಸಿ, ಅಂತಿಮ ವರ್ಷದ ಬಿ.ಕಾಂ.ವಿದ್ಯಾರ್ಥಿ ಶ್ರೀಷಾ ಪ್ರಾರ್ಥಿಸಿದರು. ಪ್ಲೇಸ್ಮೆಂಟ್ ಸಂಯೋಜಕ ಮಹೇಶ್ ಕುಮಾರ್ ವಂದಿಸಿದರು. ಪ್ಲೇಸ್ಮೆಂಟ್ ಸಂಯೋಜಕಿ ಪ್ರೀತಿಹೆಗ್ಡೆ ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಪ್ರಥ್ವಿಶ್ರೀ ಜಿ.ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!