spot_img
Monday, June 15, 2026
spot_img

ಕುಂದಾಪುರದಲ್ಲಿ ಬಿಜೆಪಿ ಶಕ್ತಿಕೇಂದ್ರಗಳಿಗೆ ಹೊಸ ಹುರುಪು: ಬೂತ್ ಗೆದ್ದರೆ ದೇಶ ಗೆದ್ದಂತೆ : ಶಾಸಕ ಕೊಡ್ಗಿ

ಕುಂದಾಪುರ, ಜೂ. 08: ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಕ್ತಿಕೇಂದ್ರಗಳಿಗೆ ಹೊಸ ನಾಯಕತ್ವ ಬಂದಿದೆ. ಮಡಮಕ್ಕಿ, ಆರ್ಡಿ ಮತ್ತು ಬೆಳ್ವೆ ಗ್ರಾ.ಪಂ ವ್ಯಾಪ್ತಿಯ ಶಕ್ತಿಕೇಂದ್ರಗಳ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಆಯ್ಕೆ ಸೋಮವಾರ ನಡೆಯಿತು.
ಕ್ಷೇತ್ರಾಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ನೇತೃತ್ವದ ಸಭೆಯಲ್ಲಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ ಶಕ್ತಿಕೇಂದ್ರ ಅಂದರೆ ಪಕ್ಷದ ಪವರ್‌ಹೌಸ್. ಬೂತ್ ಗೆದ್ದರೆ ದೇಶ ಗೆದ್ದಂತೆ. ನೂತನ ತಂಡ ತಕ್ಷಣ ಫೀಲ್ಡ್ಗಿಳಿದು ಮೋದಿ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗೂ ತಲುಪಿಸಬೇಕು. ಕಾರ್ಯಕರ್ತರ ಬೆವರಿಗೆ ಬೆಲೆ ಸಿಗುವಂತೆ ಕೆಲಸ ಮಾಡಿ_ ಎಂದು ಕರೆ ನೀಡಿದರು.
ಸುರೇಶ್ ಶೆಟ್ಟಿ ಗೋಪಾಡಿ ಮಾತನಾಡಿ, ಇನ್ನು ಮೀಟಿಂಗ್‌ಗಷ್ಟೇ ಸೀಮಿತವಾಗದೆ, ವಾರ್ಡ್ ವಾರ್ಡ್ನಲ್ಲಿ ಪಕ್ಷ ಕಟ್ಟಿ. ಮತದಾರರ ಪಟ್ಟಿ ಪರಿಶೀಲನೆಯಿಂದ ಹಿಡಿದು ಪ್ರತಿ ಮನೆಯ ಸಂಪರ್ಕದವರೆಗೆ ಶಕ್ತಿಕೇಂದ್ರದ ರೋಲ್ ಮುಖ್ಯ. ಮುಂದಿನ ಎಲ್ಲ ಚುನಾವಣೆಗಳಿಗೂ ಈಗಿಂದಲೇ ಸಜ್ಜಾಗಿ ಎಂದು ಸಲಹೆ ನೀಡಿದರು.
ಆರ್ಡಿ ಶಕ್ತಿಕೇಂದ್ರ ಅಧ್ಯಕ್ಷ ನಾಗೇಶ್ (ವಿನಯ್) ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಪೂಜಾರಿ,,ಬೆಳ್ವೆ ಶಕ್ತಿಕೇಂದ್ರ ಅಧ್ಯಕ್ಷ ಕೃಷ್ಣ ನಾಯಕ್, ಕಾರ್ಯದರ್ಶಿ ಸುದೀಪ್ ಶೆಟ್ಟಿ, ಮಡಮಕ್ಕಿ ಶಕ್ತಿ ಕೇಂದ್ರದ ಅಧ್ಯಕ್ಷ ಮದನ್ ಮೋಹನ್, ಕಾರ್ಯದರ್ಶಿ ರಾಜೇಶ್ ಆಯ್ಕೆ ಮಾಡಲಾಯಿತು ಜೊತೆಗೆ ಮೂರು ಶಕ್ತಿಕೇಂದ್ರಗಳ ವ್ಯಾಪ್ತಿಯ ಬೂತ್ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ವೇದಿಕೆಯಲ್ಲಿ ಮಂಡಲ ನಿಕಟಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್., ಮಡಮಕ್ಕಿ ಶಕ್ತಿಕೇಂದ್ರದ ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಷಾ ಪ್ರಕಾಶ್ ಶೆಟ್ಟಿ ಹಾಗೂ ಮೂರು ಭಾಗದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!