spot_img
Saturday, May 23, 2026
spot_img

ಬಸ್ರೂರು: ಯೋಧ ಕರುಣಾಕರ ಗಾಣಿಗ ಇವರಿಗೆ ನಾಗರಿಕ ಸನ್ಮಾನ

ಕುಂದಾಪುರ: ಸುದೀರ್ಘ 24 ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ಕರುಣಾಕರ ಗಾಣಿಗ ಬಸ್ರೂರು ಇವರಿಗೆ ಮೇ.23 ಶನಿವಾರ ಬಸ್ರೂರು ಶ್ರೀ ಶಾರದ ಕಾಲೇಜು ಸಭಾಂಗಣದಲ್ಲಿ ನಾಗರಿಕ ಸನ್ಮಾನ ನಡೆಯಿತು. ಯುವಾ ಬ್ರಿಗೇಡ್ ಹಾಗೂ ಶ್ರೀ ಶಾರದಾ ಕಾಲೇಜು ಬಸ್ರೂರು ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಧ ಕರುಣಾಕರ ಗಾಣಿಗ ಬಸ್ರೂರು ಅವರು, ಒಬ್ಬ ಸೈನಿಕ ಗಡಿಯಲ್ಲಿ ಕರ್ತವ್ಯ ನಿಭಾಯಿಸಬೇಕಾಗಿದ್ದರೆ ಆತನ ಕುಟುಂಬ, ಮನೆಯವರು ಹಾಗೂ ಊರವರ ಸಹಕಾರ ಅಗತ್ಯ. ನನ್ನಂತೆ ತಾಯಿ ತಂದೆಗೆ ಒಬ್ಬನೆ ಮಗನಿದ್ದು 24 ವರ್ಷ ಕರ್ತವ್ಯ ನಿರ್ವಹಿಸುವುದು ತುಂಬಾ ಕಷ್ಟವಾಗುತ್ತದೆ. ನನ್ನ ತಾಯಿ ತುಂಬಾ ಪ್ರೋತ್ಸಾಹ ನೀಡಿದ್ದರು. ಪತ್ನಿ ತುಂಬಾ ಸಾಥ್ ನೀಡಿದ್ದರು. ಎಲ್ಲರ ಸಹಕಾರ, ಪ್ರೋತ್ಸಾಹದಿಂದ ಸುದೀರ್ಘವಧಿಗೆ ದೇಶಸೇವೆ ಮಾಡುವಂತಾಯಿತು ಎಂದರು.
ಶ್ರೀ ಶಾರದಾ ಕಾಲೇಜು ಟ್ರಸ್ಟ್ ಸಂಚಾಲಕರಾದ ಅನುಪಮ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಚಿಂತಕ ಪ್ರಕಾಶ್ ಮಲ್ಪೆ ಭಾರತೀಯ ಸೈನಿಕರ ಯಶೋಗಾಥೆ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ದೇಶದ ಗಡಿಗಳನ್ನು ನಮ್ಮ ಸೈನಿಕರು ಕಾಯುತ್ತಾ ಇರುವುದರಿಂದ ನಾವು ಸುಖವಾಗಿದ್ದೇವೆ. ಮುಖ್ಯವಾಗಿ ವಿದ್ಯಾರ್ಥಿಗಳು ಯೋಧರ ತ್ಯಾಗವನ್ನು ಅರ್ಥಮಾಡಿಕೊಳ್ಳಬೇಕು, ಪದವಿ ಪಡೆಯುವುದು ಮಾತ್ರ ಮುಖ್ಯವಲ್ಲ ನಮ್ಮ ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕು. ಮಾದಕ ವ್ಯಸನಗಳಿಗೆ ಬಲಿಯಾಗದೆ ದೇಶದ ಸತ್ಪ್ರಜೆಗಳಾಗಿ ಬದುಕಿದಾಗ ಅದಕ್ಕೊಂದು ಅರ್ಥ ಬರುತ್ತದೆ. ಎಲ್ಲರಿಗೂ ಸೈನಿಕರಾಗಲು ಸಾಧ್ಯವಿಲ್ಲವಾದರೂ ಸೈನಿಕರ ಸೇವೆ, ತ್ಯಾಗವನ್ನು ಗೌರವಿಸುವ ಮೂಲಕ ಸಾರ್ಥಕತೆ ಪಡೆದುಕೊಳ್ಳೋಣ ಎಂದರು.

ದೇಶ ರಕ್ಷಣೆಯಲ್ಲಿ ಸೈನಿಕರು ಎಲ್ಲ ತ್ಯಾಗಕ್ಕೂ ಸಿದ್ಧವಾಗಿ ಇರುತ್ತಾರೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಅವರು ಅಂಜದೆ, ಅಳುಕದೆ ದೇಶ ಸೇವೆ ಮಾಡುತ್ತಾರೆ. ಒಬ್ಬೊಬ್ಬ ಯೋಧರ ಹಿಂದೆಯೋ ಒಂದೊಂದು ತ್ಯಾಗ ಸಾಹಸದ ಕಥೆ ಇರುತ್ತದೆ. ಚೀನಾ ಭಾರತ ಯುದ್ದದಲ್ಲಿ ಹುತಾತ್ಮನಾದ ಅರುಣಚಲ ಪ್ರದೇಶದ ಜಶ್ವಂತ್ ಸಿಂಗ್ ರಾವಂತ್ ಎನ್ನುವ ವೀರ ಯೋಧ ಇಂದಿಗೂ ಅಲ್ಲಿ ದೇವರಂತೆ ಕಾಣುತ್ತಾನೆ. ಇಂದಿಗೂ ಆತ ಸೈನಿಕಗೆ ಪ್ರೇರಣಾಶಕ್ತಿಯಾಗಿದ್ದಾನೆ . ಇಂಥಹ ಅದೆಷ್ಟೋ ಸಾಹಸದ ಕಥೆಗಳು ನಮ್ಮ ದೇಶದಲ್ಲಿ ಇವೆ. ಗಡಿಯಲ್ಲಿ ನಮ್ಮನ್ನು ಕಾಯುವ ಸೈನಿಕರನ್ನು ನಾವು ಪ್ರತಿದಿನವೂ ಗೌರವಿಸಬೇಕು ಎಂದರು.

ಶ್ರೀಶಾರದಾ ಕಾಲೇಜಿನ ಪ್ರಾಂಶುಪಾಲರಾದ ದಯಾನಂದ ಎನ್, ಯುವಾ ಬ್ರಿಗೇಡ್ ಅಧ್ಯಕ್ಷರಾದ ಸಂದೀಪ ಗಾಣಿಗ ಆಜ್ರಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಬೇಳೂರು ಅಭಿನಂದನಾ ಮಾತುಗಳನ್ನಾಡಿದರು.

ಗುಂಡಿಗೋಳಿಯ ಕರುಣಾಕರ ಗಾಣಿಗರ ಮನೆಯಿಂದ ತೆರೆದ ವಾಹನದ ಮೂಲಕ ಅವರನ್ನು ಶ್ರೀ ಶಾರದ ಕಾಲೇಜಿಗೆ ಕರೆ ತರಲಾಯಿತು. ಕರುಣಾಕರ ಗಾಣಿಗ ದಂಪತಿಯನ್ನು ಗೌರವಿಸಲಾಯಿತು. ಬಸ್ರೂರು ಸ್ಪೋರ್ಟ್ಸ್ ಕ್ಲಬ್, ಗಾಣಿಗ ಸಂಘ ಕುಂದಾಪುರ, ಬಸ್ರೂರು ಬಿಲ್ಲವ ಸಂಘ, ಕೊಂಕಣ ಖಾರ್ವಿ ಸಂಘ, ಶಾರದಾ ಕಾಲೇಜು, ಬಸ್ರೂರಿನ ಮಾಜಿ ಸೈನಿಕರು ಹಾಗೂ ವಿವಿಧ ಸಂಘಸಂಸ್ಥೆಗಳು ಕರುಣಾಕರ ಗಾಣಿಗರನ್ನು ಗೌರವಿಸಿದರು. ಕರುಣಾಕರ ಗಾಣಿಗರ ತಾಯಿಯನ್ನು ಗೌರವಿಸಲಾಯಿತು.

ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾರ್ಯಕ್ರಮ ಸಂಚಾಲಕಯ ಪ್ರದೀಪ ಕುಮಾರ್ ಬಸ್ರೂರು ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಅನುಶ್ರೀ ಜಡ್ಕಲ್ ಕಾರ್ಯಕ್ರಮ ನಿರ್ವಹಿಸಿ, ರಾಜೇಶ ಗಾಣಿಗ ಬಸ್ರೂರು ವಂದಿಸಿದರು. ರೂಪ ಬಿ ಪೈ ವಂದೇ ಮಾತರಂ ಹಾಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!