spot_img
Friday, May 1, 2026
spot_img

ಐ.ಸಿ.ಎಸ್.ಇ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಹಟ್ಟಿಯಂಗಡಿ ಶಾಲೆಗೆ ದಾಖಲೆಯ ಫಲಿತಾಂಶ:  23ನೇ ಬಾರಿ ಶೇಕಡಾ 100 ಫಲಿತಾಂಶ ಪಡೆದ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ

ಕುಂದಾಪುರ: ಶಿಕ್ಷಣದ ಗುಣಮಟ್ಟ, ಶಿಸ್ತಿನ ವಾತಾವರಣ ಹಾಗೂ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಹೆಸರುವಾಸಿಯಾದ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ಐಸಿಎಸ್‍ಇ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಈ ಶಾಲೆ, 23 ವರ್ಷದಿಂದ ನೂರಕ್ಕೆ ನೂರು ಫಲಿತಾಂಶ ದಾಖಲಿಸಿರುವ ಸಾಧನೆ ಮಾಡಿರುವುದು ಕುಂದಾಪುರ ತಾಲ್ಲೂಕಿನ ಏಕೈಕ ಐಸಿಎಸ್‍ಇ ಪಠ್ಯಕ್ರಮದ ಶಾಲೆ ಇದಾಗಿದೆ.

ಈ ವಿದ್ಯಾ ಸಂಸ್ಥೆಯಲ್ಲಿ ರಾಜ್ಯ ಮತ್ತು ಹೊರರಾಜ್ಯಗಳ ಸುಮಾರು 1839 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ 683 ಮಕ್ಕಳಿಗೆ ಸುಸಜ್ಜಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಸತಿ, ಪಾಠಶಾಲೆ, ಶೈಕ್ಷಣಿಕ ನೆರವು, ಶಿಸ್ತು, ಎಲ್ಲವನ್ನೂ ಒಟ್ಟಿಗೆ ನೀಡುತ್ತಿರುವ ಈ ಸಂಸ್ಥೆ ಈ ಭಾಗದ ಮಾದರಿ ವಸತಿ ಶಾಲೆಯಾಗಿ ಹೊರಹೊಮ್ಮಿದೆ.

ಈ ವರ್ಷ 270 ವಿದ್ಯಾರ್ಥಿಗಳು ಐಸಿಎಸ್‍ಇ 10ನೇ ವರ್ಗದ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದು, 180 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 88 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಗ್ರೀಷ್ಮಾ ಬಿ. ಮತ್ತು ಅಹನಿ ಜಿ. 98.00% ಅಂಕದೊಂದಿಗೆ ಪ್ರಥಮ ಸ್ಥಾನ, ಶಮಿತ್ ದೇವಾಡಿಗ, ಪೃಥ್ವಿರಾಜ್ ಶೆಟ್ಟಿ, ಚಿನ್ಮಯ್ ದೀಕ್ಷಿತ್, 97.20% ದ್ವಿತೀಯ ಸ್ಥಾನ ಹಾಗೂ ಅದಿತಿ ಪೂಜಾರಿ, ಆದಿತ್ಯ, ಅನನ್ಯ ಸಿ ಹಿರೇಮಠ, ಅರ್ಪಿತಾ ಮೂಲಿಮನೆ, ಅವನಿ ಎ ಶೆಟ್ಟಿ 97.00% ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳ ನಿರಂತರ ಸಾಧನೆ ಶಾಲೆಯ ಮಾದರಿಯ ಶಿಕ್ಷಣ ತಂತ್ರ, ಶಿಸ್ತಿನ ಪರಿಸರ ಹಾಗೂ ಶಿಕ್ಷಕರ ದಿಟ್ಟ ಸಮರ್ಪಣೆಯ ಫಲದಿಂದ ಈ ಸಾಧನೆ ಸಾಧ್ಯವಾಗಿದೆ. ಇಂತಹ ಫಲಿತಾಂಶವು ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ, ಈ ಸಾಧನೆಯ ಹಿಂದೆ ನಿಂತಿರುವುದು ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ನಿರಂತರ ಸಹಕಾರ ನೀಡಿದ ಪೆÇೀಷಕರ ಭರವಸೆಯೇ ಕಾರಣವೆಂದು ಶಾಲೆಯ ಪ್ರಾಂಶುಪಾಲರೂ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳೂ ಆದ ಶರಣ ಕುಮಾರ ಅವರು ಈ ಗೌರವವನ್ನು ತಂದುಕೊಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!