spot_img
Saturday, April 25, 2026
spot_img

ಕರಾವಳಿ ಭಾಗದಲ್ಲಿ ಪ್ರಥಮ ಬಾರಿಗೆ ಬಳ್ಕೂರಿನಲ್ಲಿ ಖ್ಯಾತ ಚಲನಚಿತ್ರ ಗಾಯಕಿ ಮಂಗ್ಲಿ ಸಂಗೀತ ಸಂಭ್ರಮ

ಕುಂದಾಪುರ, ಎ.25: ಕುಂದಾಪುರ ತಾಲೂಕು ಬಳ್ಕೂರು ಮೂರಾನೆಮರ ಶ್ರೀ ಬೊಬ್ಬರ್ಯ ಹಾಗೂ ನಾಗ ದೇವರ ಸನ್ನಿಧಿ ಜೀರ್ಣೋದ್ಧಾರ ಲೋಕಾರ್ಪಣೆಯ ಅಂಗವಾಗಿ ಇಂದು ರಾತ್ರಿ (ಎ.25 ಶನಿವಾರ) 9 ಗಂಟೆಯಿಂದ ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ಗಾಯಕಿ ಮಂಗ್ಲಿ ಮತ್ತು ತಂಡದವರಿಂದ ಸಂಗೀತ ಸಂಭ್ರಮ ನಡೆಯಲಿದೆ. ಮಂಗ್ಲಿ ಅವರು ಇದೇ ಪ್ರಥಮ ಬಾರಿಗೆ ಕರ್ನಾಟಕದ ಕರಾವಳಿ ಭಾಗದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾರೆ ಎಂದು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು.

ಅವರು ಬಸ್ರೂರುವಿನಲ್ಲಿರುವ ತಮ್ಮ ಸ್ಟುಡಿಯೋದ ಆವರಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮಂಗ್ಲಿ ಅವರು ಕನ್ನಡ ಸಹಿತ ತೆಲುಗು, ತಮಿಳು ಭಾಷೆಗಳಲ್ಲಿ ಸಾಕಷ್ಟು ಜನಪ್ರಿಯ ಗೀತೆಗಳನ್ನು ಕೊಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಈ ಹಿಂದೆ ಎರಡು ಬಾರಿ ಅವರು ನಮ್ಮ ಸ್ಟುಡೀಯೋ ತೆಲುಗು ಚಲನಚಿತ್ರದ ಗೀತೆಯನ್ನು ಹಾಡಲು ಬಂದಿದ್ದರು. ಬಳ್ಕೂರಿನಲ್ಲಿ ವಿಭಿನ್ನವಾಗಿ ಸಂಗೀತ ಕಾರ್ಯಕ್ರಮ ಆಯೋಜಿಸುವ ಸಂದರ್ಭದಲ್ಲಿ ಪ್ರಥಮವಾಗಿ ಶೋ ಕಾರ್ಯಕ್ರಮಕ್ಕೆ ಮಂಗ್ಲಿ ಅವರನ್ನು ಕರೆಸುವ ವಿಚಾರ ತಿಳಿಸಿದೆ. ಅವರು ಅದಕ್ಕೆ ಒಪ್ಪಿಕೊಂಡು ಇವತ್ತು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಎಂದರು.

ಇವರು ಕನ್ನಡದಲ್ಲೂ ಸಾಕಷ್ಟು ಚಿತ್ರಗಳಲ್ಲಿ ಹಾಡಿದ್ದಾರೆ. ಇತ್ತೀಚೆಗೆ ನನ್ನ ಸಂಗೀತ ನಿರ್ದೇಶನ ತಮಿಳು ಚಿತ್ರದಲ್ಲೂ ಹಾಡಿದ್ದಾರೆ. ಇವರು ಶಿವನ ಬಗ್ಗೆ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಅಭಿನಯವನ್ನು ಮಾಡಿದ್ದಾರೆ. ಮೇಲಾಗಿ ಆಂಜನೇಯನ ಪರಮ ಭಕ್ತೆ. ತನ್ನ ಸ್ವಂತ ದುಡಿಮೆಯಲ್ಲಿ ಆಂಜನೇಯನ ದೇವಸ್ಥಾನವನ್ನು ನಿರ್ಮಿಸಿದ್ದಾರೆ ಎಂದರು.

ಕಲಾವಿದರಿಗೆ ವಿಶೇಷ ಗೌರವ ನೀಡುವ ಪ್ರದೇಶವಿದು. ಈ ಭಾಗಕ್ಕೆ ಇಂಥಹ ಕಲಾವಿದರು ಆಗಾಗ ಬರುತ್ತಾ ಇರಲಿ. ಮೂರಾನೆಮನೆ ದೇವಸ್ಥಾನ ಅದ್ಭುತವಾಗಿ ಜೀರ್ಣೋದ್ದಾರವಾಗಿದೆ. ಈ ಭಾಗದ ಎಲ್ಲಾ ದೇವಸ್ಥಾನಗಳು ಜೀರ್ಣೋದ್ದಾರವಾಗಲಿ ಎಂದರು.
ಗಾಯಕಿ ಮಂಗ್ಲಿ ಮಾತನಾಡಿ, ನಾನು ಪ್ರಥಮವಾಗಿ ಈ ಭಾಗದಲ್ಲಿ ಕಾರ್ಯಕ್ರಮ ನೀಡಲು ಬಂದಿದ್ದೇನೆ. ಈ ಪ್ರದೇಶ ಮನಸ್ಸಿಗೆ ಅತ್ಯಂತ ಖುಷಿ ಕೊಟ್ಟಿದೆ ಎಂದರು.

ಮಹೇಶ ಮಾತನಾಡಿ ಬಳ್ಕೂರು ಗ್ರಾಮದಲ್ಲಿ 66 ಬೊಬ್ಬರ್ಯ, 66 ನಾಗ ದೇವರು, 66 ಕೆರೆಗಳು ಇರುವುದು ವಿಶೇಷ. ಈ 66 ಬೊಬ್ಬರ್ಯ ದೇವಸ್ಥಾನಗಳಿಗೆ ಮೂರಾನೆಮರ ಬೊಬ್ಬರ್ಯ ಪ್ರಧಾನವಾಗಿದೆ. ಮೂರಾನೆಮರ ಶ್ರೀ ಬೊಬ್ಬರ್ಯ ಹಾಗೂ ನಾಗದೇವರ ಸನ್ನಿಧಿ ಜೀರ್ಣೋದ್ದಾರಗೊಂಡಿದ್ದು ಈ ಸಂದರ್ಭದಲ್ಲಿ ವಿಶೇಷವಾದ ಸಂಗೀತ ಕಾರ್ಯಕ್ರಮ ಆಯೋಜಿಸಬೇಕು ಎಂದು ರವಿ ಬಸ್ರೂರು ಅವರಲ್ಲಿ ಕೇಳಿದಾಗ ಅವರು ಮಂಗ್ಲಿ ಅವರನ್ನು ಹೆಸರು ಸೂಚಿಸಿದರು. ಅದೇ ರೀತಿ ಖ್ಯಾತ ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಸಾರಥ್ಯದಲ್ಲಿ ಕರಾವಳಿ ಭಾಗದಲ್ಲಿ ಪ್ರಥಮ ಬಾರಿಗೆ ಖ್ಯಾತ ಚಲನಚಿತ್ರ ಗಾಯಕಿ ಮಂಗ್ಲಿ ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿರುವುದು ಸಂಭ್ರಮದ ವಿಚಾರ. ಭಕ್ತಿಗೆ ಸಂಬಂಧಪಟ್ಟಂತೆ ಇವರು ತುಂಬಾ ಅದ್ಭುತವಾಗಿ ಹಾಡುತ್ತಾರೆ. ಶಿವನ ಕುರಿತಾಗಿ ತುಂಬಾ ಅರ್ಥಗರ್ಭಿತವಾಗಿ ಹಾಡುವುದನ್ನು ನಾನು ಸ್ವತಃ ಕೇಳಿದ್ದೇನೆ. ನಮ್ಮೂರಿನ ಜನರಿಗೂ ಇವರ ಹಾಡುಗಳು ಇಷ್ಟವಾಗಲಿದೆ ಎಂದರು.

ಈ ಸಂದರ್ಭದಲ್ಲಿ ದಿನಕರ , ಡಿಜೆ ರಂಜು, ಹಾಗೂ ಮಂಗ್ಲಿ ಅವರ ಸಂಗೀತ ತಂಡದ ಸದಸ್ಯರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!