spot_img
Saturday, June 13, 2026
spot_img

ಆತ್ರಾಡಿ ಶ್ರೀ ಬ್ರಹ್ಮಲಿಂಗೇಶ್ವರ, ಚಿಕ್ಕು ಪರಿವಾರ ದೇವಸ್ಥಾನ ಚಿತ್ತೇರಿ, ಕಂಬಳಗದ್ದೆ ಹೋರ್ ಬೊಬ್ಬರ್ಯ ದೈವಸ್ಥಾನ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಕೃಷ್ಣಮೂರ್ತಿ ಮಂಜರು ಶಿಲಾನ್ಯಾಸ ನೆರವೇರಿಸಿದರು.
ಶ್ರೀ ಚಿಕ್ಕಮ್ಮ ದೇವಸ್ಥಾನಕ್ಕೆ ಆನಂದ ಸಿ ಕುಂದರ್ ಶಿಲಾನ್ಯಾಸ ನೆರವೇರಿಸಿದರು.
ಶ್ರೀ ಹಳೆಯಮ್ಮ ದೇವಸ್ಥಾನಕ್ಕೆ ಆತ್ರಾಡಿ ನಾರಾಯಣ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.
ಶ್ರೀ ಕುದ್ರ ಬ್ರಹ್ಮ ದೈವಸ್ಥಾನಕ್ಕೆ ಹಿರಿಯರಾದ ಕಲ್ಮಾಡಿ ಮರ್ಲಪೂಜಾರಿ ಶಿಲಾನ್ಯಾಸ ನೆರವೇರಿಸಿದರು.
ಕಂಬಳಗದ್ದೆ ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನಕ್ಕೆ ಡಾ.ದಿನೇಶ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.

ಕುಂದಾಪುರ, ಎ.24: ವಂಡ್ಸೆ ಗ್ರಾಮದ ಆತ್ರಾಡಿ ಶ್ರೀ ಬ್ರಹ್ಮಲಿಂಗೇಶ್ವರ, ಚಿಕ್ಕು ಪರಿವಾರ ದೇವಸ್ಥಾನ ಚಿತ್ತೇರಿ ಹಾಗೂ ಶ್ರೀ ಹೋರ್‌ಬೊಬ್ಬರ್ಯ ದೈವಸ್ಥಾನ ಕಂಬಳಗದ್ದೆ ಜೀರ್ಣೋದ್ಧಾರಗೊಳ್ಳುತ್ತಿದ್ದು ಆ ಪ್ರಯುಕ್ತ ಶಿಲಾನ್ಯಾಸ ಕಾರ್ಯಕ್ರಮ ಎ.24 ಶುಕ್ರವಾರ ಬೆಳಿಗ್ಗೆ ನಡೆಯಿತು.

ಹೈದರಬಾದ್ ಸುಪ್ರಭಾತ್ ಗ್ರೂಫ್‌ನ ಮುಖ್ಯಸ್ಥರಾದ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಇವರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ, ಅತ್ಯಂತ ಶೀಘ್ರವಾಗಿ ದೇವಸ್ಥಾನಗಳ ನಿರ್ಮಾಣವಾಗಲಿ, ದೇವಸ್ಥಾನ ಜೀರ್ಣೋದ್ದಾರ ಮಹಾತ್ಕಾರ್ಯದಲ್ಲಿ ಪ್ರತಿಯೊಬ್ಬರೂ ಶ್ರಮಿಸುವ ಮೂಲಕ ಶ್ರೀದೇವರ ಕೃಪೆಗೆ ಪಾತ್ರರಾಗಬೇಕು ಎಂದರು.

ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ.ಕುಂದರ್ ಅವರು ಶ್ರೀ ಚಿಕ್ಕಮ್ಮ ದೈವಸ್ಥಾನ (ಚಿತ್ತೇರಿ) ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಹಳೆಯಮ್ಮ ದೇವಸ್ಥಾನ ನಿರ್ಮಾಣಕ್ಕೆ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ನಾರಾಯಣ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು. ಶ್ರೀ ಕುದ್ರ ಬ್ರಹ್ಮ ದೈವಸ್ಥಾನ (ಚಿತ್ತೇರಿ)ಕ್ಕೆ ಹಿರಿಯರಾದ ಕಲ್ಮಾಡಿ ಮರ್ಲಪೂಜಾರಿ ಶಿಲಾನ್ಯಾಸ ನೆರವೇರಿಸಿದರು. ಕಂಬಳಗದ್ದೆ ಶ್ರೀ ಹೋರ್ ಬೊಬ್ಬರ್ಯ ದೈವಸ್ಥಾನ ನಿರ್ಮಾಣಕ್ಕೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಎಲುಬು ಮತ್ತು ಕೀಲು ರೋಗ ತಜ್ಞರಾದ ಡಾ.ದಿನೇಶ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರು, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರಾದ ಕೆ.ಗೋಪಾಲ ಪೂಜಾರಿ, ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಕುಸುಮಾಕರ ಶೆಟ್ಟಿ, ನಿವೃತ್ತ ಶಸ್ತ್ರಚಿಕಿತ್ಸಕ ತಜ್ಞರಾದ ಡಾ.ಅಂಪಾರು ವಸಂತ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಕುಟುಂಬಸ್ಥರು, ಸ್ಥಳೀಯ ಗಣ್ಯರು, ಅರ್ಚಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆನಂದ ಸಿ.ಕುಂದರ್, ಡಾ.ದಿನೇಶ ಶೆಟ್ಟಿ ಅವರನ್ನು ಜೀರ್ಣೋದ್ಧಾರ ಸಮಿತಿಯ ವತಿಯಿಂದ ಗೌರವಿಸಲಾಯಿತು.
ಎ.ಜಯಕರ ಶೆಟ್ಟಿ ಸ್ವಾಗತಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!