spot_img
Thursday, April 23, 2026
spot_img

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ವಿದ್ಯಾರಣ್ಯ ಶಾಲೆ; ನೂರಕ್ಕೆ ನೂರು ಫಲಿತಾಂಶ: ಸಮೀಕ್ಷಾ ರಾಜ್ಯಕ್ಕೆ 5ನೇ RANK

ಕುಂದಾಪುರ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಿದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಕುಂದಾಪುರದ ಯಡಾಡಿ-ಮತ್ಯಾಡಿಯ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯು ಅಭೂತಪೂರ್ವ ಸಾಧನೆ ಮಾಡಿದೆ. ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ಒಟ್ಟು 625 ಅಂಕಗಳಿಗೆ 621 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ 5ನೇ RANK ಪಡೆದು ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.ಈ ಬಾರಿ ಪರೀಕ್ಷೆಗೆ ಹಾಜರಾದ ಶಾಲೆಯ ಒಟ್ಟು 129 ವಿದ್ಯಾರ್ಥಿಗಳ ಪೈಕಿ ಎಲ್ಲರೂ ಉತ್ತೀರ್ಣರಾಗುವ ಮೂಲಕ ಶಾಲೆಗೆ ಶೇ. 100ರಷ್ಟು ಫಲಿತಾಂಶ ಲಭಿಸಿದೆ.
ಶ್ರೇಯಸ್ ಎಸ್ ಚಿಕ್ಕಮಠ (615) ಆಯಿಷ ಆನಾಮ್ (611) ಮನ್ವಿತ್ ಬಿ (611) ಅಭಿಕ್ಷಾ(610) ಸೂರ್ಯಪ್ರಕಾಶ್ ಬಿ.ಗಾಣಿಗ (610) ನಿವೇದಿತಾ ಚಂದ್ರ ಮೌಳೇಶ್ವರ ಬಾದಾಮಿ (609) ಶ್ರೀಹರಿ ಮನೀಷ್ (607) ಸನ್ವಿತ್ ಜಿ ಪೂಜಾರಿ (607) ಚಾರ್ವಿ ಪಿ ಶೆಟ್ಟಿ (605) ಕೌಶಿಕ್ ಶೆಣೈ (600) ಶ್ರೇಯಾ (599) ನಿಹಾರಿಕಾ ರೆಡ್ಡಿ(596) ಸಂಚಿತಾ ಆರ್ ಶೆಟ್ಟಿ (596) ಸಿ.ಎಂ. ಧೀರಜ್ ಗೌಡ (595) ದಶಮಿ (595) ಶ್ರೀಶಾ ಎಸ್ ಶೆಟ್ಟಿ (594)ಪ್ರಜ್ವಲ್ ಎಸ್ .ಕುಲಾಲ್ (593) ಬ್ರಾಹ್ಮಿ ಆರ್ ಶೆಟ್ಟಿ (592) ಸಾಯಿನಿಧಿ ಸಿ ಶೆಟ್ಟಿ (592) ಅನುಜ್ ಈಶ್ವರ್ ಅಂಬಲಿ(591) ಬಿ.ಎ ಶಾಹಿಲ್ (588) ಎಚ್.ವಿಜಯಾ ಪೈ(588) ಪ್ರತೀಕ್ಷಾ ಮಡಿವಾಳ (588) ಪ್ರಕೃತಿ ಶೆಟ್ಟಿ (586)ಪೃಥ್ವಿ ರಮೇಶ್ ಶಿರೆಣ್ಣವರ್ (586) ಪ್ರಥಮ ಆಚಾರ್ (585) ಪ್ರೀತಮ್ ಕುಲಾಲ್(585) ವೈಷ್ಣವಿ ಮಾಧವ ಪ್ರಭು(584) ನವ್ಯಶ್ರೀ (583) ಸಂಪತ್ ಶೆಟ್ಟಿ (580). ಪರೀಕ್ಷೆ ಬರೆದ 129 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ, 17 ವಿದ್ಯಾರ್ಥಿಗಳು 95%ಕ್ಕಿಂತ ಅಧಿಕ ಅಂಕ ಪಡೆದರೆ ,67 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಮತ್ತು ಖಜಾಂಚಿ ಭರತ್ ಶೆಟ್ಟಿ ಅವರು ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ, ಬೋಧಕ ಸಿಬ್ಬಂದಿ ಹಾಗೂ ಎಲ್ಲಾ ವಿದ್ಯಾರ್ಥಿಗಳನ್ನು  ಅಭಿನಂದಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!