spot_img
Thursday, February 19, 2026
spot_img

ಕುಂದಾಪುರ-ಬೈಂದೂರು ವಲಯ: ಸೌತ್‌ಕೆನರಾ ಫೋಟೋಗ್ರಾಫರ್ಸ್ ಪದಪ್ರದಾನ

ಕುಂದಾಪುರ: ಸೌತ್‌ಕೆನರಾ ಫೊಟೋಗ್ರಾಫರ್ಸ್ ಆಸೋಸಿಯೇಶನ್ (ರಿ.) ದ.ಕ.-ಉಡುಪಿ ಜಿಲ್ಲೆ, ಕುಂದಾಪುರ-ಬೈಂದೂರು ವಲಯದ ೨೦೨೫-೨೭ ನೇ ಸಾಲಿನ ಪದಪ್ರದಾನ ಸಮಾರಂಭ ವಂಡ್ಸೆಯ ಶ್ರಿಯಾ ಕನ್ವೆನ್ಷನ್ ಹಾಲ್ ಇಲ್ಲಿ ಫೆ.17 ರಂದು ನಡೆಯಿತು.

ಉಧ್ಯಮಿ ಸಂಪತ್‌ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಛಾಯಾಗ್ರಾಹಕರು ಇಲ್ಲದೆ ಇದ್ದರೆ ನಮ್ಮ ಯಾವುದೇ ನೆನಪುಗಳನ್ನು ಸ್ಮರಿಸಿಕೊಳ್ಳಲು ಸಾಧ್ಯವಿಲ್ಲ, ಜೀವನದ ಯಾವುದೇ ಸಿಹಿ ಘಟನೆಗಳನ್ನು ನೀವು ತೆಗೆದಿರುವ ಛಾಯಾಚಿತ್ರ ನೆನಪಿಸಿಡುತ್ತದೆ, ಜೀವನದಲ್ಲಿ ಯಾವುದೇ ಕೆಲಸವು ನಿಕೃಷ್ಟವಲ್ಲ, ಇಂದು ಸಮಾಜದಲ್ಲಿ ತಾವು ಮಾಡುವ ಕೆಲಸದಿಂದ ಸಮಾಜದಲ್ಲಿ ಎತ್ತರದ ಸ್ಥಾನಕ್ಕೆ ಹೋಗಲು ಸಾಧ್ಯ, ವೃತ್ತಿಯನ್ನು ಪ್ರೀತಿಸಿದರೆ ವ್ಯಕ್ತಿಯಾವ ಸ್ಥಾನಕ್ಕೂ ಹೋಗಬಹುದು. ನಾವು ಜೀವನದಲ್ಲಿ ನಾವು ಏನಾಗಬೇಕು ಅಂತ ಬಯಸಿದ್ದೇವೋ ಹಾಗೇ ನಮ್ಮ ಜೀವನ ಆಗಲಿಕ್ಕೆ ಆರಂಭವಾಗುತ್ತದೆ. ಯಾವ ವ್ಯಕ್ತಿಯಲ್ಲಿ ಅದ್ಬುತವಾದ ಚಿಂತನೆಗಳು, ಆತ್ಮಾಭಿಮಾನ, ಪರಿಶ್ರಮ ಇದ್ದರೆ ಅವನು ಜೀವನದಲ್ಲಿ ಅತ್ಯುತ್ತಮ ಸ್ಥಾನಕ್ಕೆ ಏರುತ್ತಾನೆ. ಕಠಿಣ ಪರಿಶ್ರಮ ಹಾಕಿ ಕೆಲಸ ಮಾಡಿದಾಗ ಯಾವ ಕೆಲಸದಲ್ಲಿದ್ದರೂ ಜೀವನದಲ್ಲಿ ಗೆಲ್ಲಲು ಸಾಧ್ಯ ಎಂದರು.

ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ದ.ಕ-ಉಡುಪಿ ಜಿಲ್ಲೆ ಜಿಲಾಧ್ಯಕ್ಷ ನವೀನ್ ರೈ ಪಂಜಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಉದ್ಯಮಿ ಜೆ. ರತ್ನಾಕರ ಶೆಟ್ಟಿ, ವಕೀಲರಾದ ಕೆ. ರಾಜಾರಾಮ್ ಶೆಟ್ಟಿ, ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಜಿಲ್ಲಾ ಸಂಚಾಲಕ ಗೋಪಾಲ ಸುಳ್ಯ, ಉಡುಪಿ ಜಿಲ್ಲಾ ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಎನ್. ಬಂಟ್ವಾಳ್, ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವರಾವ್, ಉಡುಪಿ ಜಿಲ್ಲಾ ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಅಜಯ್‌ಕುಮಾರ್, ಕುಂದಾಪುರ ಛಾಯಾಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ಜಿ.ಕೆ., ಸೌತ್‌ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಹಾಗೂ ಕಟ್ಟಡ ಸಮಿತಿ ಸದಸ್ಯ ಗಣೇಶ್ ಬೆನಕ, ಉಡುಪಿ ಜಿಲ್ಲಾ ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಜೊತೆ ಕಾರ್ಯದರ್ಶಿ ಅಮೃತ್ ಬೀಜಾಡಿ, ಕುಂದಾಪುರ-ಬೈಂದೂರು ವಲಯದ ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಸಲಹಾ ಸಮಿತಿ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಕುಂದಾಪುರ-ಬೈಂದೂರು ವಲಯದ ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಸುರೇಶ್ ಸುರಭಿ, ಕುಂದಾಪುರ-ಬೈಂದೂರು ವಲಯದ ನಿಕಟಪೂರ್ವ ಅಧ್ಯಕ್ಷ ದಿವಾಕರ ಶೆಟ್ಟಿ, ಕುಂದಾಪುರ-ಬೈಂದೂರು ವಲಯದ ನಿಕಟ ಪೂರ್ವ ಕಾರ್ಯದರ್ಶಿ ದಿನೇಶ್ ರಾಯಪ್ಪನಮಠ, ಕುಂದಾಪುರ-ಬೈಂದೂರು ವಲಯದ ನಿಕಟಪೂರ್ವ ಕೋಶಾಧಿಕಾರಿ ಹರೀಶ್ ಪೂಜಾರಿ ಹಂಗಳೂರು, ನೂತನ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷರುಗಳಾದ ಚಂದ್ರಕಾಂತ್, ಪ್ರಸಾದ್ ನೇರಳಕಟ್ಟೆ, ರಮೇಶ್ ಹೆಂಗವಳ್ಳಿ, ಉಪಸ್ಥಿತರಿದ್ದರು.

ನಿಕಟ ಪೂರ್ವ ಅಧ್ಯಕ್ಷರು ಹಾಗೂ ಕಾರ್ಯದರ್ಶಿ, ಕೋಶಾಧಿಕಾರಿ ನೂತನವಾಗಿ ಆಯ್ಕೆಯಾದವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳನ್ನು ಮತ್ತು ಸಾಧನೆ ಮಾಡಿದ ಛಾಯಾಗ್ರಾಹಕರನ್ನು ಈ ಸಂದರ್ಭ ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ, ನಿಕಟಪೂರ್ವ ಅಧ್ಯಕ್ಷ ದಿವಾಕರ ಶೆಟ್ಟಿ ಸ್ವಾಗತ ಮಾಡಿ, ನೂತನ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಹರೀಶ್ ಪೂಜಾರಿ ಹಂಗಳೂರು ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!