spot_img
Thursday, January 29, 2026
spot_img

ಅಪಘಾತದಲ್ಲಿ ಚೇತರಿಸಿಕೊಳ್ಳುತ್ತಿರುವ ಅರ್ಚನ ದೇವಾಡಿಗ ಇವರ ಚಿಕಿತ್ಸೆಗೆ ಮಿಡಿದ ದೇವಾಡಿಗರ ಹೃದಯಗಳು

ಕುಂದಾಪುರ: ಇತ್ತೀಚಿಗೆ ಕುಂದಾಪುರದ ಶೆಟ್ರಕಟ್ಟೆಯಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಜೀವನ್ಮರಣ ಸ್ಥಿತಿಯಿಂದ ಪಾರಾಗಿ ಪ್ರಸ್ತುತ ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರ್ಚನಾ ದೇವಾಡಿಗ ಇವರ ಆರೋಗ್ಯವನ್ನು ವಿಚಾರಿಸಿ ಅವರ ಕುಟುಂಬಕ್ಕೆ ದೇವಾಡಿಗ ಸಮಾಜದಿಂದ ಸಂಗ್ರಹಿಸಿದ ರೂ.೧,೫೪,೦೦೦ ಹಣವನ್ನು ಅವರ ತಾಯಿ ಗಿರಿಜಾ ದೇವಾಡಿಗ ಇವರಿಗೆ ಹಸ್ತಾಂತರಿಸಲಾಯಿತು.

ಆ ಹುಡುಗಿಯನ್ನು ನೋಡಿದರೆ ಯಾರಿಗಾದರೂ ಕರುಳು ಹಿಂಡಿ ಬರುತ್ತದೆ. ಅಷ್ಟೊಂದು ನೋವಿನಲ್ಲಿ ತನಗೆ ಮಾತನಾಡಲು ಸಾಧ್ಯ ಆಗದೆ ಇದ್ದರೂ ಬಂದ ಪ್ರತಿಯೊಬ್ಬರನ್ನು ತನ್ನ ಕೈ ಸನ್ನೆ ಮೂಲಕ ವಿಚಾರಿಸಿದ ಪ್ರೀತಿ ನಿಜಕ್ಕೂ ಅವಳಲ್ಲಿರುವ ಆತ್ಮಸ್ಥೈರ್ಯವನ್ನು ತೋರಿಸಿತು. ತಾನು ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡ ಅವಳ ತಲೆಯಲ್ಲಿ ಕಾಲೇಜಿನ ಪರೀಕ್ಷೆ ತುಂಬಿಕೊಂಡಿದ್ದು ಅವಳನ್ನು ವಿಚಾರಿಸಲು ಬಂದ ತನ್ನ ಕಾಲೇಜಿನ ಸಹಪಾಠಿಗಳ ಜೊತೆ ಆ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದು ಅವಳು ತನ್ನ ವಿದ್ಯಾಭ್ಯಾಸದ ಬಗ್ಗೆ ಎಷ್ಟೊಂದು ಪರಿಶ್ರಮ ವಹಿಸುತ್ತಾಳೆ ಎಂದು ಎಲ್ಲರಿಗೂ ತಿಳಿಯುತ್ತದೆ. ತನ್ನ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಹಗಲಿರುಳು ಆಸ್ಪತ್ರೆಯಲ್ಲಿ ಇದ್ದು ಪ್ರತಿಯೊಂದು ವಿಚಾರದಲ್ಲಿ ಕೂಡ ಜವಾಬ್ದಾರಿ ವಹಿಸಿ ನಿಂತಿರುವ ಅರ್ಚನಾ ಅವರ ಮಾವ ದೇವರಾಜ್ ಅವರ ಕುಟುಂಬಿಕ ಕಳಕಳಿ ಕೂಡಾ ಶ್ಲಾಘನೀಯ. ಈ ಕುಟುಂಬಕ್ಕೆ ದೇವಾಡಿಗ ಸಮಾಜದ ಜೊತೆ ಇತರ ಸಮಾಜದ ಮಾನವೀಯ ಸೇವೆಯೂ ಕೂಡಾ ದೊರಕಿದೆ.

ಈ ಸಂದರ್ಭದಲ್ಲಿ ಕುಂದಾಪುರ, ಬೈಂದೂರು, ಬ್ರಹ್ಮಾವರ ತಾಲೂಕು ದೇವಾಡಿಗ ಒಕ್ಕೂಟದ ಅಧ್ಯಕ್ಷರಾದ ರಘುರಾಮ್ ದೇವಾಡಿಗ, ಕಾರ್ಯಾಧ್ಯಕ್ಷರಾದ ರಮೇಶ್ ದೇವಾಡಿಗ ವಂಡ್ಸೆ, ಸಂಚಾಲಕರಾದ ಶಂಕರ್ ಅಂಕದಕಟ್ಟೆ ಪ್ರಧಾನ ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಸಮಾಜದ ಪ್ರಮುಖರಾದ ಶೀನ ದೇವಾಡಿಗ ಕದಂ ದುಬೈ, ಬಿ ಆರ್ ದೇವಾಡಿಗ ಬೆಂಗಳೂರು (ಬೈಂದೂರು), ನಾರಾಯಣ ದೇವಾಡಿಗ ಕುಂದಾಪುರ, ಚಂದ್ರ ದೇವಾಡಿಗ ಕಟ್ಟಿನ ಮಕ್ಕಿ, ಮಹಾಲಿಂಗ ದೇವಾಡಿಗ ಬೈಂದೂರು, ಪುರುಷೋತ್ತಮ್ ದಾಸ್ ಉಪ್ಪುಂದ, ರವಿ ತಲ್ಲೂರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!