spot_img
Monday, March 16, 2026
spot_img

21ರಂದು ಹಾಲಾಡಿಯಲ್ಲಿ ‘ಕಲಿಯುಗದ ಮಾಯಾಗಾರ ಪಂಜುರ್ಲಿ’ ನಾಟಕ ಪ್ರದರ್ಶನ

ಕುಂದಾಪುರ: ತಾಲೂಕಿನ ಶ್ರೀ ಕ್ಷೇತ್ರ ಹಾಲಾಡಿಯ ಶ್ರೀ ಆದಿ ಮರಳುಚಿಕ್ಕು ದೈವಸ್ಥಾನದ ಹಾಲುಹಬ್ಬ ಹಾಗೂ ಗೆಂಡೋತ್ಸವದ ಪ್ರಯುಕ್ತ ಜನವರಿ 21ರಂದು ರಾತ್ರಿ 10 ಕ್ಕೆ ’ಕಲಿಯುಗದ ಮಾಯಾಗಾರ ಪಂಜುರ್ಲಿ’ ನಾಟಕ ಪ್ರದರ್ಶನಗೊಳ್ಳಲಿದೆ.

ಮಂಜೇಶ್ವರದ ಶಾರದಾ ಅರ್ಟ್ಸ್ ತಂಡದ ಐಸಿರಿ ಕಲಾವಿದರು ಅಭಿನಯಿಸುವ ಈ ನಾಟಕದಲ್ಲಿ ತುಳುನಾಡ ರಂಗ ಬೊಳ್ಳಿ ರವಿಕಾಮಕುಂಬ, ತುಳುನಾಡ ರಂಗಭೂಷಣ ಮಷ್ಪರಾಜ್ ಬೊಳ್ಳಾರ್ ಮತ್ತು ಅನಿಲ್ ರಾಜ್ ಉಪ್ಪಳ, ಅಶೋಕ್ ಬೇಕೂರು ಅಭಿನಯಿಸುತ್ತಿದ್ದು, ’ಸು ಫ್ರಮ್ ಸೋ’ ಚಲನಚಿತ್ರ ನಿರ್ದೇಶಕ ಜೆ ಪಿ ತುಮಿನಾಡು ಮತ್ತು ಮೈಮ್ ರಾಮದಾಸ್ ಅವರ ನಿರ್ದೇಶನವಿದೆ. ಹಾಲಾಡಿ ಮೂಲದ ಹೋಟೆಲ್ ಉದ್ಯಮಿ ಕವನ ನರಸಿಂಹ ಶೆಟ್ಟಿ ಈ ನಾಟಕವನ್ನು ಆಯೋಜಿಸಿದ್ದಾರೆ.

ಇದಕ್ಕೂ ಮೊದಲು ರಾತ್ರಿ 7:00 ಗಂಟೆಯಿಂದ ಬಿದ್ದರ್‌ ಕಟ್ಟೆ ಹವ್ಯಾಸಿ ಕಲಾವಿದರಿಂದ ಪೌರಾಣಿಕ ಪ್ರಸಂಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಜ 20ರಂದು ಮಂಗಳವಾರ ಸಂಜೆ ಗಂಟೆ 6-00 ರಿಂದ ಶ್ರೀ ಆದಿಮರಳುಚಿಕ್ಕು ದೈವಕ್ಕೆ ಪಂಚವಿಂಶತಿ ಕಲಶ ಸ್ಥಾಪನಾಪೂರ್ವಕ ಪ್ರಧಾನ ಕಲಾತತ್ವ ಹೋಮ ನಡೆಯಲಿದೆ. ಜ 21ರಂದು ಬುಧವಾರ ಬೆಳಿಗ್ಗೆ ಗಂಟೆ 9-00 ರಿಂದ ಶ್ರೀ ನಾಗ ದೇವರಿಗೆ ನವಕ ಪ್ರದಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಶ್ರೀ ಆದಿಮರಳುಚಿಕ್ಕು ದೈವಕ್ಕೆ ಕಲಶಾಭಿಷೇಕಪೂರ್ವಕ ಮಹಾಪೂಜೆ ಜರುಗುವುದು. ಮಧ್ಯಾಹ್ನ ಗಂಟೆ 1-00ರಿಂದ “ಅನ್ನಸಂತರ್ಪಣೆ” ಹಮ್ಮಿಕೊಳ್ಳಲಾಗಿದೆ. ರಾತ್ರಿ ಗಂಟೆ 12ಕ್ಕೆ ಗೆಂಡಸೇವೆ ನಡೆಯಲಿದೆ.

ಜ 22ರಂದು ಗುರುವಾರ ಬೆಳಿಗ್ಗೆ 3-00 ಗಂಟೆಗೆ ಸ್ವಾಮಿ ಸೇವೆ, ನಾಗನಿಗೆ ಹಾಲಿಟ್ಟು ಸೇವೆ. ಬೆಳಿಗ್ಗೆ 4-00 ಗಂಟೆಗೆ ಡಮರು ಸೇವೆ, ಮಧ್ಯಾಹ್ನ ಗಂಟೆ 12-00ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ ಮಾಡಲಾಗುವುದು ಎಂದು ಅಧ್ಯಕ್ಷ ಡಾ. ಶ್ರೀನಿವಾಸ ಶೆಟ್ಟಿ, ಹಾಲಾಡಿ, ಕುದ್ರುಮನೆ ಮತ್ತು ಕಾರ್ಯದರ್ಶಿ ಉದಯ ಕುಮಾರ ಶೆಟ್ಟಿ, ಕೊಯ್ಕಾಡಿಮನೆ, ಆದಿಮರಳುಚಿಕ್ಕು, ಹಾಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!