spot_img
Saturday, March 7, 2026
spot_img

ಜನವರಿ 14: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಉತ್ಸವ

ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರ,  ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಮಕರ ಸಂಕ್ರಮಣ ಉತ್ಸವ ಜನವರಿ 14-2026ರಿಂದ ಜನವರಿ 16-2026ರ ತನಕ ಜರಗಲಿದೆ.

ಜನವರಿ 14 ಬುಧವಾರ  ಪೂರ್ವಾಹ್ನ ಗಂಟೆ 9 ಗಂಟೆಗೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಮಂಗಳಾರತಿ, ರಾತ್ರಿ ಘಂಟೆ 10-30ಕ್ಕೆ ಗೆಂಡಸೇವೆ ನಡೆಯಲಿದೆ.

ಜನವರಿ ೧೫ ಗುರುವಾರ ಪೂರ್ವಾಹ್ನ ೯.೩೦ಕ್ಕೆ ಮಹಾಮಂಗಳಾರತಿ, ತದನಂತರ ಮಂಡಲಸೇವೆ ನಡೆಯಲಿದೆ.
ಜನವರಿ  16 ಶುಕ್ರವಾರ ಪೂರ್ವಾಹ್ನ 9.30ಕ್ಕೆ ಮಹಾಮಂಗಳಾರತಿ, ತದನಂತರ ಮಂಡಲಸೇವೆ, ರಾತ್ರಿ 8 ಘಂಟೆಗೆ ಕಡಬು ನೈವೇದ್ಯ, ಮಹಾಮಂಗಳಾರತಿ, ರಾತ್ರಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳದವರಿಂದ ಯಕ್ಷಗಾನ ಸೇವೆ ಆಟ ಜರಗಲಿದೆ.

ಜನವರಿ 17 ಶನಿವಾರ ಪೂರ್ವಾಹ್ನ 10 ಗಂಟೆಗೆ ಸಂಪ್ರೋಕ್ಷಣೆ ನಡೆಯಲಿದೆ. ಸೇವಂತಿಗೆ ಪುಷ್ಪ ಪ್ರಿಯ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಮಕರ ಸಂಕ್ರಮಣ ಉತ್ಸವ ಸಹಸ್ರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯಲ್ಲಿ ಅದ್ದೂರಿಯಾಗಿ ನಡೆಯುತ್ತದೆ. ನಂಬಿದವರ ಇಷ್ಟಾರ್ಥ ಈಡೇರಿಸುವ, ಭಕ್ತರ ಸದಾ ಬೆಂಬಿಡದೆ ಪೊರೆಯುವ ಬ್ರಹ್ಮಲಿಂಗೇಶ್ವರ ಸ್ವಾಮಿಗೆ ಸೇವೆ ಸಲ್ಲಿಸುವ ಆಗಮಿಸುವ ಭಕ್ತ ಸಂದೋಹ, ರಾತ್ರಿ ಕೆಂಡಸೇವೆ ಸಲ್ಲಿಸಿ ಪುನೀತರಾಗುವ ಭಕ್ತ ಸಾಗರ, ಮಂಡಲ ಸೇವೆಯನ್ನು ಕಣ್ತುಂಬಿಕೊಳ್ಳಲು ಭಕ್ತಾದಿಗಳ ಸಾಗರವೇ ಮಾರಣಕಟ್ಟೆಗೆ ಆಗಮಿಸುತ್ತದೆ. ಮಾರಣಕಟ್ಟೆಯ ಮಕರ ಸಂಕ್ರಮಣ ಜಾತ್ರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಜಾತ್ರೆಯಾಗಿ ಜನಜನಿತವಾಗಿದೆ. ಇದೇ ಜನವರಿ 14ರಿಂದ ನಡೆಯುವ ಮಾರಣಕಟ್ಟೆ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!