spot_img
Friday, January 30, 2026
spot_img

ಅಭ್ಯುದಯ-2025: ಮದರ್ ತೆರೆಸಾ ಪಿ.ಯು. ಕಾಲೇಜಿನಲ್ಲಿ ಸಂಭ್ರಮದ ವಾರ್ಷಿಕೋತ್ಸವ

ಶಂಕರನಾರಾಯಣ: ಶಂಕರನಾರಾಯಣದ ಮದರ್ ತೆರೆಸಾ ಪಿ.ಯು. ಕಾಲೇಜಿನಲ್ಲಿ ‘ಅಭ್ಯುದಯ-2025’ ವಾರ್ಷಿಕ ಮಹೋತ್ಸವವು ನ.22ರಂದು ನಡೆಯಿತು. ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂಸ್ಥೆಯ ಪ್ರಗತಿಶೀಲ ಹಾದಿಯನ್ನು ಮೆಚ್ಚಿ ಶಿಕ್ಷಣದ ಮಹತ್ವ ಶಿಸ್ತು ಹಾಗೂ ದೊಡ್ಡ ಕನಸುಗಳನ್ನು ಬೆಳೆಸುವ ಅಗತ್ಯತೆಯ ಬಗ್ಗೆ ಪ್ರೇರಣೆದಾಯಕ ಸಂದೇಶ ನೀಡಿದರು.

ಸಂಸ್ಥೆಯ ಸಂಸ್ಥಾಪಕರಾದ ಕುಮಾರಿ ಶಮಿತಾ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಜೈಸನ್ ಲೂಯಿಸ್, ಉಪಪ್ರಾಂಶುಪಾಲರಾದ ಗೀತಾ, ಕಾಲೇಜು ನಾಯಕಿ ವರ್ಷಿಣಿ ಹಾಗೂ ನಾಯಕ ಪವನ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ಪರಿಷತ್ ಸದಸ್ಯರು ಸಾಂಸ್ಕೃತಿಕ ಮತ್ತು ಕ್ರೀಡಾ ವರದಿಯನ್ನು ನೀಡಿದರು. ಪ್ರಾಂಶುಪಾಲರು ಕಾಲೇಜಿನ ವಾರ್ಷಿಕ ವರದಿಯನ್ನು ಸರಳವಾಗಿ ಮಂಡಿಸಿದರು. ಈ ವರ್ಷ ಕ್ರೀಡೆ, ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ೨೦೨೫ರ ಅಂತಿಮ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕೂಡ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಂಶುಪಾಲರು ಸ್ಥಾಪಿಸಿದ ದತ್ತಿ ಪ್ರಶಸ್ತಿಯನ್ನು ಘೋಷಿಸಿ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಾದ ನಿಶಾ ನಾರಾಯಣ ತೋಳಾರ್ ಮತ್ತು ಅಕ್ಷಿತಾ ಇವರಿಗೆ ಪ್ರಶಸ್ತಿ ನೀಡಲಾಯಿತು.

ಅಧ್ಯಕ್ಷರಾದ ಸಂಸ್ಥಾಪಕರು ಕಾಲೇಜಿನ ಬೆಳವಣಿಗೆ ಮತ್ತು ವಿದ್ಯಾರ್ಥಿಗಳ ಸಾಧನೆಗಳನ್ನು ಶ್ಲಾಘಿಸಿದರು.

ವಿದ್ಯಾರ್ಥಿಗಳ ಪ್ರಾರ್ಥನೆ, ಮತ್ತು ಸ್ವಾಗತ ನೃತ್ಯದಿಂದ ಕಾರ್ಯಕ್ರಮಕ್ಕೆ ಶುಭಾರಂಭವಾಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಡೆಯಿದ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಪ್ರೇಕ್ಷಕರ ಮನಸೆಳೆದವು. ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ. ‘ಅಭ್ಯುದಯ-2025’ ಮಹೋತ್ಸವವು ಯಶಸ್ವಿಯಾಗಿ ನೆರವೇರಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!