spot_img
Wednesday, March 11, 2026
spot_img

ಮಕ್ಕಳ ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಪೋಷಕರು ಸದಾ ಗಮನ ಹರಿಸಬೇಕು-ಡಾ.ಪಿ.ವಿ ಭಂಡಾರಿ

ಕುಂದಾಪುರ: ಪೋಷಕರು ತಮ್ಮ ಮಕ್ಕಳನ್ನು ದೈಹಿಕ ಆರೋಗ್ಯದ ಜೊತೆ ಬುದ್ಧಿಮತ್ತೆಯ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳ ವರ್ತನೆ, ಬಾಲ್ಯದಿಂದ ಪ್ರೌಢವಸ್ಥೆಯ ಬದಲಾವಣೆ, ಕಲಿಕೆಮಟ್ಟ, ದೈಹಿಕ ನ್ಯೂನ್ಯತೆ ಮತ್ತು ಆರೋಗ್ಯದ ಬಗ್ಗೆ ಸದಾ ನಿಗಾ ವಹಿಸಬೇಕು. ಮಕ್ಕಳೊಂದಿಗೆ ಅಗಾಗ ಸಮಾಲೋಚನೆ ನಡೆಸಿ ಸಾಂದರ್ಬಿಕ ಮಾಹಿತಿ ಸಲಹೆಯನ್ನು ನೀಡಬೇಕು. ಮೊಬೈಲ್ ಬಳಕೆಯ ದುಷ್ಪರಿಣಾಮದ ಬಗ್ಗೆ ತಿಳಿಸಬೇಕು, ದುಶ್ಚಟಗಳಿಂದ ದೂರವಿದ್ದು, ಓದು ಹಾಗೂ ಕ್ರೀಡೆಯ ಬಗ್ಗೆ ಹೆಚ್ಚು ಗಮನಹರಿಸುವಂತೆ ತಿಳಿಸಬೇಕು ಎಂದು ಉಡುಪಿಯ ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ.ಪಿ.ವಿ ಭಂಡಾರಿ ಪೋಷಕರಿಗೆ ಕಿವಿಮಾತು ಹೇಳಿದರು.

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿ ಡಿ.5ರಂದು ನಡೆದ  ಪೋಷಕರ ಸಭೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಡಾ.ಪೂರ್ಣಿಮಾ ಶೆಟ್ಟಿ ವಹಿಸಿದ್ದರು.

ಶಾಲೆಯ ಹಿರಿಯ ಮುಖ್ಯೋಪಾಧ್ಯಾಯರಾದ ಶಂಕರ್ ಇವರು ಶಾಲಾ ಶೈಕ್ಷಣಿಕ ಚಟುವಟಿಕೆಗಳು ಮತ್ತು ಶಾಲಾ ಅಭಿವೃದ್ಧಿಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳು, ಪೋಷಕರು, ದಾನಿಗಳು, ಶ್ರೀ ಮೂಕಾಂಬಿಕ ಚಾರಿಟೇಬಲ್ ಟ್ರಸ್ಟ್ ಪಾತ್ರ ಬಗ್ಗೆ ವಿವರಿಸಿದರು.
ಶ್ರೀ ಮೂಕಾಂಬಿಕ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವರ್ಧನ್ ಜೋಗಿ, ಸರಕಾರಿ ನೌಕರ ಸಂಘದ ಪ್ರತಿನಿಧಿ, ಶಿಕ್ಷಕ ಪ್ರತಾಪ್ ಕುಮಾರ್ ಶೆಟ್ಟಿ, ಎಸ್.ಡಿ‌ಎಂಸಿ ಸದಸ್ಯರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಶಿಕ್ಷಕ ಸೋಮರಾಯ ಜನ್ನು ಶಾಲಾ ವಾರ್ಷಿಕೋತ್ಸವ ಮತ್ತು ಶಾಲಾ ಶೈಕ್ಷಣಿಕ ಚಟುವಟಿಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ಶಿಕ್ಷಕರಾದ ಸದಾಶಿವ ಡಾ.ಪಿ.ವಿ ಭಂಡಾರಿ ಪರಿಚಯಿಸಿದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೆಗೈದರು. ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸೋಮರಾಯ ಜನ್ನು ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಯ ಬಗ್ಗೆ ಇಂಗ್ಲಿಷ್ ಭಾಷೆಯಲ್ಲಿ ಪ್ರಹಸನ ನಡೆಸಲಾಯಿತು.

ಮನೋವೈದ್ಯರಾದ ಡಾ.ಪಿವಿ ಭಂಡಾರಿ ಅವರು ಶಾಲಾ ವೀಕ್ಷಣೆಯನ್ನು ಮಾಡಿ ವಿದ್ಯಾರ್ಥಿಗಳ ಶಿಸ್ತು ಶಾಲಾ ಸ್ವಚ್ಛತೆ ಸರಕಾರಿ ಶಾಲೆಯ ಭೌತಿಕ ಅಭಿವೃದ್ದಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!