spot_img
Monday, March 9, 2026
spot_img

ಹೆಸಕುತ್ತೂರು ಸರಕಾರಿ ಪ್ರಾಥಮಿಕ ಶಾಲೆ: ಸ್ಕ್ರಾಚ್ ಪ್ರೋಗ್ರಾಮಿಂಗ್ ತರಬೇತಿ

ಕುಂದಾಪುರ: “ಪ್ರಾಥಮಿಕ ಹಂತದ ವಿದ್ಯಾರ್ಥಿಗಳು, ಆಂಗ್ಲಭಾಷೆಯ ಸಹಾಯವಿಲ್ಲದೆ ಕನ್ನಡದಲ್ಲೇ ಕಂಪ್ಯೂಟರ್‌ ಪ್ರೋಗ್ರಾಂಗಳನ್ನು ಬರೆಯುವುದು ಸಾ‍ಧ್ಯವಿದೆ. ಇದಕ್ಕಾಗಿ ಗ್ರಾಮೀಣ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶ ನಮ್ಮದಾಗಿದೆ” ಎಂದು ಕರಾವಳಿ ವಿಕಿಪಿಡಿಯನ್‌ ಸ್ಥಾಪಕ ಕಾರ್ಯದರ್ಶಿ, ವಿಶ್ವ ಕನ್ನಡ ಫೌಂಡೇಶನ್ ನಿರ್ದೇಶಕರು, ವಿಜ್ಞಾನಿಗಳಾದ ಡಾ. ಯು.ಬಿ. ಪವನಜ ಇವರು ನುಡಿದರು.

ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸಕುತ್ತೂರು ಇಲ್ಲಿಯ ವಿದ್ಯಾರ್ಥಿಗಳಿಗೆ ಸ್ಕ್ರಾಚ್‌ ಪ್ರೋಗ್ರಾಮಿಂಗ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿಶ್ವ ಕನ್ನಡ ಫೌಂಡೇಶನ್ ನ ಇನ್ನೋರ್ವ ನಿರ್ದೇಶಕರು, ವಿಜ್ಞಾನಿಗಳಾದ ಆನಂದ ಸಾವಂತ ಇವರು ಇಡೀ ದಿನ ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಶಾಲೆಯ 7ನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಶಾಲೆಯ ಕಂಪ್ಯೂಟರ್‌ ಲ್ಯಾಬ್‌ನಲ್ಲಿ ನಡೆದ ಈ ತರಬೇತಿಯ ಪ್ರಯೋಜನವನ್ನು ಪಡೆದರು ಮತ್ತು ಉತ್ತಮ ಪ್ರತಿಕ್ರಿಯೆಯನ್ನು ನೀಡಿದರು.

ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ  ಸುಧಾಕರ ಕುಲಾಲ ಅಧ್ಯಕ್ಷತೆ ವಹಿಸಿದ್ದರು.

ಡಯೆಟ್ ಉಡುಪಿಯ ಪ್ರಾಂಶುಪಾಲರಾದ  ಅಶೋಕ ಕಾಮತ್, ಉಪನ್ಯಾಸಕರಾದ  ನಾಗರಾಜ್,  ಸುರೇಶ ಭಟ್, ಶಾಲಾ ಶಿಕ್ಷಕರಾದ ಸಂಜೀವ ಎಂ, ವಿಜಯಾ ಆರ್, ವಿಜಯ ಶೆಟ್ಟಿ, ಸ್ವಾತಿ ಬಿ ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕರಾದ  ಶೇಖರ ಕುಮಾರ ಸ್ವಾಗತಿಸಿದರು. ಸಹಶಿಕ್ಷಕಿ ವಿಜಯಾ ಆರ್ ವಂದಿಸಿದರು. ಮತ್ತು ಸಹಶಿಕ್ಷಕ ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!