spot_img
Monday, March 9, 2026
spot_img

ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ ನೂತನ ಅಧ್ಯಕ್ಷರಾಗಿ ಅನ್ಸಾರ ಹೊಸಂಗಡಿ ಆಯ್ಕೆ

ಹೆಬ್ರಿ: ಬೆಳ್ವೆ ಶ್ರೀ ಸಂದೇಶ್ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ನಮ್ಮ ನಾಡ ಒಕ್ಕೂಟದ ಹೆಬ್ರಿ ಘಟಕದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯು ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ ಅಧ್ಯಕ್ಷ ಮೊಹಮ್ಮದ್ ರಫೀಕ್ ಅಜೆಕಾರು ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ೨೦೨೬-೨೭ ನೇ ಸಾಲಿನ ನೂತನ ಹೆಬ್ರಿ ಘಟಕದ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯನ್ನು ಜಿಲ್ಲಾ ಉಪಾಧ್ಯಕ್ಷ ಮುನಾವರ್ ಅಜೆಕಾರು , ಕುಂದಾಪುರ ತಾಲೂಕು ಅಧ್ಯಕ್ಷ ಜಮಾಲ್ ಗುಲ್ವಾಡಿ, ಜಿಲ್ಲಾ ಸಮಿತಿಯ ಸದಸ್ಯ ಹರೂನ್ ರಶೀದ್ ಸಾಸ್ತಾನ , ಶಾಕಿರ್ ಹಾವಂಜೆ, ಮುಸ್ತಫಾ ಕಾರ್ಕಳ ನೇತ್ರತ್ವದಲ್ಲಿ ನಡೆಯಿತು.

೨೦೨೬-೨೭ ನೇ ಸಾಲಿನ ಹೆಬ್ರಿ ಘಟಕದ ನೂತನ ಅಧ್ಯಕ್ಷರಾಗಿ ಅನ್ಸಾರ ಹೊಸಂಗಡಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಶರೀಫ್ ಸಾಹೇಬ್ ಬೆಳ್ವೆ , ಪ್ರಧಾನ ಕಾರ್ಯದರ್ಶಿಯಾಗಿ ಅರಾಫತ್ ಅಲ್ಬಾಡಿ ಕೋಶಾಧಿಕಾರಿಯಾಗಿ ಮೊಹಮ್ಮದ್ ರಯಾನ್, ಸಂಘಟನಾ ಕಾರ್ಯದರ್ಶಿಯಾಗಿ ಮುಸ್ತಾಕ್ ಹೆನ್ನಾಬೈಲ್,ಜೊತೆ ಕಾರ್ಯದರ್ಶಿ ಯಾಗಿ ಫಾರ್ಮ್ನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮೊಹಮ್ಮದ್ ರಫೀಕ್ ಅಜೆಕಾರು, ಅಬ್ದುಲ್ ಶುಕುರ್ ಬೆಳ್ವೆ, ಅಹಮ್ಮದ್ ಬ್ಯಾರಿ,ಮೊಹಮ್ಮದ್ ರಬಿ, ಜಾಸಿಂ , ಇಮ್ತಿಯಾಜ್ , ಸೈಯದ್ ರಫಿಕ್, ಅಬ್ದುಲ್ , ದಾದಫೀರ್, ರಜಬ್ ಜನ್ಸಾಲೆ,ಲತೀಫ್
ಆಯ್ಕೆಗೊಂಡಿದ್ದಾರೆ.

ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಫೀರ್ ಸಾಹೇಬ್ ಉಡುಪಿ,ನಮ್ಮ ನಾಡ ಒಕ್ಕೂಟದ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ ಉಪಸ್ಥಿರಿದ್ದರು.

ಅರಾಫತ್ ಸ್ವಾಗತಿಸಿದರು. ಮೊಹಮ್ಮದ್ ರಬಿ ಕಿರಾತ್ ಪಠಿಸಿದರು,ಹೆಬ್ರಿ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಶುಕುರ್ ಬೆಳ್ವೆ ಸಹಕರಿಸಿದರು. ಮೊಹಮ್ಮದ್ ರಬಿ ಕಿರಾತ್ ಪಠಿಸಿದರು.ರಯಾನ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು.ಬೆಳ್ವೆ ಜುಮ್ಮಾ ಮಸೀದಿಯ ಮೌಲಾನಾ ಮೊಹಮ್ಮದ್ ರಫೀಕ್ ಬೆಳ್ವೆ ದುವಾ ನೆರವೇರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!