spot_img
Monday, March 9, 2026
spot_img

ಎಸ್‌ಸಿಡಿಸಿಸಿ ಬ್ಯಾಂಕ್ ನೌಕರ ವರ್ಗದಿಂದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಅಭಿನಂದನೆ

ಮಂಗಳೂರು : ಕರಾವಳಿ ಕರ್ನಾಟಕದ ಸಾಮಾಜಿಕ – ಆರ್ಥಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ  ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಇತ್ತೀಚೆಗೆ ಬಹರೈನ್ ಹಾಗೂ ಬೆಂಗಳೂರುನಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಸ್ವೀಕರಿಸಿ , ಸೋಮವಾರ ಎಸ್‌ಸಿಡಿಸಿಸಿ ಬ್ಯಾಂಕಿಗೆ ಆಗಮಿಸಿದಾಗ ಅವರನ್ನು ಬ್ಯಾಂಕ್ ನೌಕರರು ಗೌರವಪೂರ್ವಕವಾಗಿ ಅಭಿನಂದಿಸಿದ್ದಾರೆ.

ಬಹರೈನ್ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಮೊದಲ ಬಾರಿ ನೀಡಿದ ಪ್ರತಿಷ್ಠಿತ ‘ ಸಹಕಾರಿ ಸಾರ್ವಭೌಮ’ ಪ್ರಶಸ್ತಿಯನ್ನು ನವೆಂಬರ್ -28ರಂದು ಬಹರೈನ್ ನಲ್ಲಿ  ಹಾಗೂ ಕರ್ನಾಟಕ ಮಾಧ್ಯಮ ಸಹಕಾರ ಹಾಗೂ ದಿ. ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಬೆಂಗಳೂರು ಇದರ ವತಿಯಿಂದ ನೀಡಲಾದ ಪ್ರತಿಷ್ಠಿತ  ‘ ವಿಶ್ವ ಜಾಗತಿಕ ಪ್ರಭಾವಿ ನಾಯಕತ್ವ ಶ್ರೇಷ್ಠತಾ ಪ್ರಶಸ್ತಿ ‘
ಯನ್ನು ನವೆಂಬರ್ -27ರಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಪ್ರದಾನ ಮಾಡಲಾಗಿತ್ತು.

ಅಭಿಮಾನ ಪೂರ್ವಕ ಗೌರವ : ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಈ ಎರಡು ಪ್ರತಿಷ್ಠಿತ ಪ್ರಶಸ್ತಿಗಳು ಸಹಕಾರಿ ರಂಗದ ಜನಪರ ಸೇವೆಗಳಿಗೆ ಒಲಿದು ಬಂದಿದೆ. ಎಸ್‌ಸಿಡಿಸಿಸಿ  ಬ್ಯಾಂಕ್‌  ಮೂಲಕ  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಕುಟುಂಬಗಳ ಆರ್ಥಿಕ ಶಕ್ತಿಯಾಗಿದ್ದ ಇವರು  ಎಸ್‌ಸಿಡಿಸಿಸಿ ಬ್ಯಾಂಕ್‌ನ್ನು ಕಳೆದ 31 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿ ಈ ಬ್ಯಾಂಕ್ ನ್ನು  ರಾಷ್ಟ್ರೀಕೃತ  ಬ್ಯಾಂಕುಗಳ ಸ್ಥಾನಮಾನಕ್ಕೇರಿಸಿದ್ದಾರೆ. ಇವರ ವಿಶಿಷ್ಟ ಕಾರ್ಯ ವೈಖರಿಯಿಂದ ಎಸ್ ಸಿಡಿಸಿಸಿ ಬ್ಯಾಂಕ್  ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳೊಂದಿಗೆ  ರಾಜ್ಯ , ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಹಾಗಾಗಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ದೊರೆತ ಈ ಎರಡು ಪ್ರಶಸ್ತಿಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್ ನೌಕರರು ಸಂತೋಷದಿಂದ ತಮ್ಮ ಅಧ್ಯಕ್ಷರನ್ನು  ಅಭಿಮಾನ ಪೂರ್ವಕವಾಗಿ ಅಭಿನಂದಿಸಿದ್ದಾರೆ .

ವಿವಿಧ ವಿಭಾಗಗಳ ಮೂಲಕ ಅಭಿನಂದನೆ :
ಎಸ್‌ಸಿಡಿಸಿಸಿ ಬ್ಯಾಂಕಿನ ವಸೂಲಾತಿ ವಿಭಾಗದ ಉಪ ಮಹಾಪ್ರಬಂಧಕರಾದ ನಿತ್ಯಾನಂದ ಶೇರಿಗಾರ್ , ಲೆಕ್ಕಪತ್ರ ವಿಭಾಗದ ಉಪ ಮಹಾಪ್ರಬಂಧಕರಾದ  ಶರ್ಮಿಳಾ ಎಸ್. ಭಟ್ , ಯೋಜನೆ , ಶಾಖೆ ನಿಯಂತ್ರಣ ವಿಭಾಗದ  ಉಪ ಮಹಾಪ್ರಬಂಧಕರಾದ ವಿದ್ಯಾ  ಕಾರ್ನಾಡ್ , ಸಹಾಯಕ  ಮಹಾಪ್ರಬಂಧಕರಾದ ರಾಜೇಶ್ ಶೆಟ್ಟಿ , ಕೊಡಿಯಾಲ್ ಬೈಲ್ ಶಾಖೆಯ
ಉಪ ಮಹಾಪ್ರಬಂಧಕರಾದ ಜ್ಯೋತಿ ಬಾಳಿಗ , ಆಡಳಿತ ವಿಭಾಗದ  ಸಹಾಯಕ  ಮಹಾಪ್ರಬಂಧಕರಾದ ಸಹನಾ ಬಿ. ಶೆಟ್ಟಿ ,  ಸಾಲ ವಿಭಾಗದ ಸಹಾಯಕ  ಮಹಾಪ್ರಬಂಧಕರಾದ  ಹೇಮಲತಾ ಕೆ., ಸುಜಾತ ಭಟ್ , ಕಂಪ್ಯೂಟರ್ ವಿಭಾಗದ ವ್ಯವಸ್ಥಾಪಕರಾದ ಸುನಿಲ್ ಕುಮಾರ್  ಸೇರಿದಂತೆ ವಿಭಾಗದ  ಎಲ್ಲಾ ಸಿಬ್ಬಂದಿಗಳು ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರನ್ನು ಅಭಿನಂದಿಸಿದ್ದಾರೆ.

ಇದೇ ಸಂದರ್ಭದಲ್ಲಿ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಹಾಗೂ ಸಿಬ್ಬಂದಿಗಳು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಎಂ.ವಾದಿರಾಜ ಶೆಟ್ಟಿ , ಎಸ್.ಎನ್.ಮನ್ಮಥ , ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ , ಸಹಕಾರ ಸಂಘಗಳ ಉಪ ನಿಬಂಧಕರಾದ ರಮೇಶ್ ಎಚ್.ಎನ್. ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!