spot_img
Friday, January 30, 2026
spot_img

ದೀಪೇಶ್ ದೀಪಕ್ ಶಣೈ ಅವರಿಗೆ ಹೊಯ್ಸಳ ಶೌರ್ಯ ಪ್ರಶಸ್ತಿ

ಕುಂದಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯ ಬೆಂಗಳೂರು ಇವರು ಐ.ಸಿ.ಡಿ.ಎಸ್ ಯೋಜನೆಯ ಸುವರ್ಣ ಮಹೋತ್ಸವ ಹಾಗೂ ಮಕ್ಕಳ ದಿನಾಚರಣೆ-೨೦೨೫ರ ಸಲುವಾಗಿ ಕೊಡಮಾಡುವ ರಾಜ್ಯ ಮಟ್ಟದ ಹೊಯ್ಸಳ ಶೌರ್ಯ ಪ್ರಶಸ್ತಿ ಉಡುಪಿ ಬಡಗುಬೆಟ್ಟು, ಕುಕ್ಕಿಕಟ್ಟೆಯ ನಿವಾಸಿ ದೀಪಕ್ ಶಣೈ ಕೆ ಅವರ ಪುತ್ರ ದೀಪೇಶ್ ದೀಪಕ್ ಶಣೈ ಅವರಿಗೆ ಲಭಿಸಿದೆ.

ನ.28ರಂದು ಅವರಿಗೆ ಬೆಂಗಳೂರಿನ ಆರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಾಲಕ ದೀಪೇಶ್ ದೀಪಕ್ ಶೆಣೈ ಮನೆಗೆ ಹಾವು ನುಗ್ಗಿದ ಸಂದರ್ಭ ತನ್ನ ಜೀವದ ಹಂಗು ತೊರೆದು ಅಜ್ಜಿ, ತಾಯಿ ಹಾಗೂ ತಮ್ಮನನ್ನು ರಕ್ಷಿಸಿದ್ದ. ಈತನ ಸಮಯಪ್ರಜ್ಞೆ, ಸಾಹಸಿ ಪ್ರೌಢಿಮೆ ಗುರುತಿಸಿ ಸರಕಾರ ಪ್ರಶಸ್ತಿ ನೀಡಿ ಗೌರವಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!