spot_img
Monday, March 9, 2026
spot_img

ಬಿಲ್ಲವ ಸಮಾಜ ಸೇವಾ ಸಂಘ ಕೊಡೇರಿ: ವಿಜೃಂಭಣೆಯಿಂದ ಜರಗಿದ 79ನೇ ವರ್ಷದ ಕಂಬಳೋತ್ಸವ

ಬಿಲ್ಲವ ಸಮಾಜ ಸೇವಾ ಸಂಘ (ರಿ) ಕೊಡೇರಿ ಇದರ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ ವಾರ್ಷಿಕ ಕಂಬಳೋತ್ಸವವು ನವೆಂಬರ್  21 ರಂದು ಕೊಡೇರಿಯಲ್ಲಿ ಬಲು ವಿಜೃಂಭಣೆಯಿಂದ ಜರಗಿತು. ಸಾಂಪ್ರದಾಯಕವಾಗಿ ನೆಡೆದು ಬಂದ ಈ ಕಂಬಳಕ್ಕೆ ಬಿಲ್ಲವ ಸಮಾಜ ಸೇವಾ ಸಂಘವು ಊರ ಹಾಗೂ ಪರವೂರ ದಾನಿಗಳ ನೆರವಿನಿಂದ ಆಕರ್ಷಕ ಬಹುಮಾನಗಳನ್ನು ನೀಡಿ ಕೋಣಗಳ ಮಾಲಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸುಮಾರು 67 ಜೋಡಿ ಕೋಣಗಳು ಈ ಕಂಬಳೋತ್ಸವದಲ್ಲಿ ಬಾಗಿಯಾಗಿದ್ದು ಕನಿಷ್ಠ ಅವಧಿಯಲ್ಲಿ ನಿಗದಿತ ಗುರಿ ತಲುಪಿದ ಕೋಣಗಳ ಮಾಲಕರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗಿದ್ದು ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಮುಂಬೈ ಉದ್ಯಮಿ ಮಹಾದೇವ ಪೂಜಾರಿಯವರು ಸಂಘದ ಪದಾಧಿಕಾರಿಗಳು ಹಾಗೂ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ 79ನೇ ವರ್ಷದ ಕೊಡೇರಿ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ ವಾರ್ಷಿಕ ಕಂಬಳೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಬಳಿಕ ಕೋಣಗಳ ವಯೋಮಿತಿಗೆ ಅನುಗುಣವಾಗಿ ಸಬ್ ಜ್ಯೂನಿಯರ್, ಹಗ್ಗ ಕಿರಿಯ, ಹಗ್ಗ ಹಿರಿಯ ಮತ್ತು ಹಲಗೆ (ಮುಕ್ತ) ಹೀಗೆ ನಾಲ್ಕು ವಿಭಾಗಗಳಿಗೆ ಸ್ಪರ್ಧಾ ಓಟ ಆರಂಭಿಸಲಾಯಿತು
ಕೋಣಗಳ ಓಟದ ಸಮಯ ಗುರುತಿಸಲು ಸೆನ್ಸಾರ್ ಅಳವಡಿಸಲಾಗಿದ್ದು ತನ್ನ ಸವಾರನೊಂದಿಗೆ ನಿಗದಿತ ಗುರಿ ತಲುಪಿದ ಕೋಣಗಳ ಮಾಲಕರಿಗೆ ನಗದು ಬಹುಮಾನ ಹಾಗೂ ಶಾಶ್ವತ ಫಲಕಗಳನ್ನು ನೀಡಿ ಗೌರವಿಸಲಾಯಿತು.
 79 ನೇ ವರ್ಷದ ಕಂಬಳದ ಫಲಿತಾಂಶ : 
1. ಸಬ್ ಜೂನಿಯರ್ ವಿಭಾಗ
 ಪ್ರಥಮ – ಶ್ರೀ ಸ್ಕಂದ ಆರ್ವಿನ್ ಪ್ರದೀಪ್ ಉಳ್ಳೂರು ಕಂದಾವರ (10.13)
 ದ್ವಿತೀಯ -ಸಮೃದ್ಧಿ, ಪ್ರಸಿದ್ಧಿ ದೇವಾಡಿಗ ದುರ್ಗಾ ಫ್ರೆಂಡ್ಸ್ ಕಂಚಿಕಾನ್ (10.24)
 ತೃತೀಯ -ಸಂಜೀವ ಪೂಜಾರಿ ಕಳಿಹಿತ್ಲು ಕೆರ್ಗಾಲ್ (10.26)
 ಹಗ್ಗ ಕಿರಿಯ ವಿಭಾಗ
 ಪ್ರಥಮ-ವಿಶ್ವನಾಥ ದೇವಾಡಿಗ ನರಿಗುಡಿ ನಾಯ್ಕನಕಟ್ಟೆ (9.50).
 ದ್ವಿತೀಯ -ಶ್ರೀ ಮಾಸ್ತಿಯಮ್ಮ ಮಾಸ್ತಿಕಟ್ಟೆ (10.16)
 ತೃತೀಯ -ಶ್ರೀ ಮಹಾದೇವ ಪೂಜಾರಿ, ಕೆಳಾಮೊಳೆಬೈಲು ಕೊಡೇರಿ. (10.23)
ಹಗ್ಗ ಹಿರಿಯ ವಿಭಾಗ
 ಪ್ರಥಮ -ವೆಂಕಟ ಪೂಜಾರಿ ಸಸಿಹಿತ್ಲು ಬೈಂದೂರು (9.63)
ದ್ವಿತೀಯ -ಶ್ರೀ ಪನ್ನಗ ಹೆಬ್ಬಾರ್ ಭಟ್ಕಳ (10.01)
 ತೃತೀಯ -ದಿಶಾ ಶ್ರೇಯಸ್, ನಾರಾಯಣ ದೇವಾಡಿಗ ಮಿಯ್ಯಣಿ (10.17)
ಹಲಗೆ ವಿಭಾಗ 
ಪ್ರಥಮ -ಅಧ್ವಿನ್ ರವಿರಾಜ್ ಶೆಟ್ಟಿ ನೆರಳಕಟ್ಟೆ ಕೊಡ್ಲಾಡಿ (10.18)
 ದ್ವಿತೀಯ -ಆನಂದ ದೇವಾಡಿಗ ತೆಕ್ಕಟ್ಟೆ ಮೆಲ್ ಗುಡ್ಡೆ ಮನೆ (10.53)
 ತೃತೀಯ -ಮೊಳೆಬೈಲು ಶುಕ್ರ ಪೂಜಾರಿ ಕೊಡೇರಿ ಕಿರೀಮಂಜೇಶ್ವರ (10.65)
ಅದೃಷ್ಟ ಕೋಣಗಳು 
ಕೋಟಿ ಚನ್ನಯ್ಯ ಯಶ್ವಿನ್ ಮಂಜುನಾಥ್ ಪೂಜಾರಿ ಕಾಮನಮನೆ.
ಕೊಡೇರಿ ಹಕ್ರೆಮಠ ಕಂಬಳೋತ್ಸವಕ್ಕೆ ತಮ್ಮ ಬಾಬ್ತು ಓಟದ ಕೋಣಗಳೊಂದಿಗೆ ಆಗಮಿಸಿದ ಕೋಣಗಳ ಮಾಲಕರನ್ನು ಸಾಂಪ್ರದಾಯಕವಾಗಿ ವೀಳ್ಯ ನೀಡಿ ಸ್ವಾಗತಿಸಲಾಯಿತು.
ಸಂಘದ ಆಶ್ರಯದಲ್ಲಿ ದಿನವಿಡಿ ಜರಗಿದ ಕಂಬಳೋತ್ಸವ ಸಂಜೆ ಸಂಪನ್ನಗೊಂಡ ಬಳಿಕ ಸಮಾರೋಪ ಸಮಾರಂಭ ಆಯೋಜಿಸಿ ವಿಜೇತ ಕೋಣಗಳ ಮಾಲಕರಿಗೆ ಬಹುಮಾನ ವಿತರಿಸಲಾಯಿತು.
ಬೈಂದೂರು ತಾಲೂಕು ಕಂಬಳ ಸಮಿತಿಯ ವತಿಯಿಂದ ಬಿಲ್ಲವ ಸಮಾಜ ಸೇವಾ ಸಂಘ ಕೊಡೇರಿ ಇದರ ಗೌರವಾಧ್ಯಕ್ಷರಾದ ಮಹಾದೇವ ಪೂಜಾರಿ ಅವರನ್ನು ಸನ್ಮಾನಿಸಲಾಯಿತು ಹಾಗೇಯೇ ಈ ಕಂಬಳೋತ್ಸವದ ವೇದಿಕೆಯಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತವಾದ ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ ಪೂಜಾರಿ ಬೀಜಾಡಿ, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗಂಗಾಧರ ಕೋಡಿ, ಪಂಜರ ಕೃಷಿ ಮೀನು ಸಾಕಾಣಿಕೆಯ ಸಾಧಕರಾದ ರಮೇಶ್ ಖಾರ್ವಿ, ಹಲವಾರು ಕಂಬಳಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದ ಸುರೇಶ ಪೂಜಾರಿ ಇವರುಗಳನ್ನು ಅತಿಥಿಗಳು ಸತ್ಕರಿಸಿ ಅವರ ಮುಂದಿನ ಸಾಧನೆಗಳಿಗೆ ಶುಭ ಕೋರಿದರು.
ಬಿಲ್ಲವ ಸಂಘದ ಆಶ್ರಯದಲ್ಲಿ ಜರಗಿದ ಕೊಡೇರಿ ಹಕ್ರೆಮಠ ಜೈನಜಟ್ಟಿಗೇಶ್ವರ ಕಂಬಳೋತ್ಸವ ದಲ್ಲಿ ಸಂಘದ ಗೌರವಾಧ್ಯಕ್ಷರಾದ ಮಹಾದೇವ ಪೂಜಾರಿ, ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ, ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ ಪೂಜಾರಿ ಬೀಜಾಡಿ, ಪ್ರಧಾನ ಕಾರ್ಯದರ್ಶಿ ಯೋಗೇಶ್ ಪೂಜಾರಿ ಕೋಡಿ, ಗೌರವ ಕೋಶಾಧಿಕಾರಿ ವಿನಯ್ ಪೂಜಾರಿ ಬನ್ನಾಡಿ, ಸುನೀಲ್ ಪೂಜಾರಿ ಕೋಡಿ, ಗಂಗಾಧರ ಪೂಜಾರಿ ಕೋಡಿ, ಕಿರಿಮಂಜೇಶ್ವರ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಶೇಖರ ಖಾರ್ವಿ, ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷರಾದ ಮಂಜು ಪೂಜಾರಿ ಸಸಿಹಿತ್ಲು, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ತಾಲೂಕು ಪಂಚಾಯಿತ್ ಮಾಜಿ ಅಧ್ಯಕ್ಷರಾದ ಮಹೇಂದ್ರ ಪೂಜಾರಿ, ಮೂರ್ತೆದಾರರ ಸೇವಾ ಸಹಕಾರಿ  ಸಂಘ ಉಪ್ಪುಂದ ಹಾಗೂ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಮೋಹನ ಪೂಜಾರಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬೈ ಇದರ ಮಾಜಿ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಾಬು ಹೆಗ್ಡೆ, ಬೆಂಗಳೂರು ಉದ್ಯಮಿಗಳಾದ ಆಳೊಳ್ಳಿ ಗಣೇಶ ಪೂಜಾರಿ ಮತ್ತು ನಾರಾಯಣ ಪೂಜಾರಿ,ರಾಜೇಶ್ ಕೃಷ್ಣ ಪೂಜಾರಿ, ರೈತರ ಸಂಘದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ,ನರಸಿಂಹ ಪೂಜಾರಿ ಉಪ್ಪುಂದ, ವಾಸುದೇವ ಪೂಜಾರಿ ಉಪ್ಪುಂದ, ಮೀನುಗಾರಿಕಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಸಿ. ಎಸ್. ಖಾರ್ವಿ, ಹಾಲು ಉತ್ಪಾದಕರ ಸಹಕಾರಿ ಸಂಘ ಕಿರಿಮಂಜೇಶ್ವರದ ಅಧ್ಯಕ್ಷರಾದ ಸುಬ್ಬಣ್ಣ ಶೆಟ್ಟಿ, ಕೊಡೇರಿ  ಮೀನುಗಾರರ ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷರಾದ ಡಿ. ಚಂದ್ರ ಖಾರ್ವಿ,  ವೆಂಕಟೇಶ ಪೂಜಾರಿ, ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ಪೂಜಾರಿ ಕಾಡ್ಕೇರಿ, ಕೋಶಾಧಿಕಾರಿ ರಾಘವೇಂದ್ರ ಪೂಜಾರಿ  ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಪೂಜಾರಿ ಸರ್ವರನ್ನು ಸ್ವಾಗತಿಸಿದರೆ ಗ್ರಾಮ ಪಂಚಾಯಿತ್ ಸದಸ್ಯರಾದ ಆನಂದ ಪೂಜಾರಿ ಕೊಡೇರಿ ನಿರೂಪಿಸಿದರು ಪ್ರಧಾನ ಕಾರ್ಯದರ್ಶಿ ಸುಧೀರ್ ಪೂಜಾರಿ ಕಾಡ್ಕೇರಿ ವಂದನಾರ್ಪಣೆಗೈದರು.
ಕೃಷ್ಣ ಪೂಜಾರಿ, ವಿಜಯ್ ಪೂಜಾರಿ, ಚಂದ್ರ ಪೂಜಾರಿ, ಶೇಷು ಪೂಜಾರಿ ,  ಭಾಸ್ಕರ ಪೂಜಾರಿ,  ಶೇಖರ ಪೂಜಾರಿ, ರವಿರಾಜ್ ಪೂಜಾರಿ, ನಾಗರಾಜ್ ಪೂಜಾರಿ, ರಾಜು ಪೂಜಾರಿ, ಕಾರ್ತಿಕ್ ಪೂಜಾರಿ, ಅಶ್ವಿತ್ ಪೂಜಾರಿ,  ನಾಗೇಂದ್ರ ಪೂಜಾರಿ, ಅರವಿಂದ ಪೂಜಾರಿ, ರಿತಿಕ್ ಪೂಜಾರಿ, ಗೋವಿಂದ ಪೂಜಾರಿ,ಕಿಶೋರ್ ಪೂಜಾರಿ ಸಸಿಹಿತ್ಲು, ಗಣೇಶ ಕೊಠಾರಿ,ಗೋಪಾಲ ಪೂಜಾರಿ ಮತ್ತಿತರರು ಕಂಬಳೋತ್ಸವ ಯಶಸ್ವಿಯಾಗಲು ಸಹಕರಿಸಿದರು.
ಹೊಸ್ಮನೆ, ಮೇಲ್ ಮೊಳೆಬೈಲು, ಕೆಳಾಮೊಳೆಬೈಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮತ್ತು ಸಂಘದ ಸದಸ್ಯರ ಸಹಕಾರದಿಂದ ಕೊಡೇರಿ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ 79 ನೇ ವರ್ಷದ ವಾರ್ಷಿಕ ಕಂಬಳೋತ್ಸವವು ಬಲು ವಿಜೃಂಭಣೆಯಿಂದ ಜರಗಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!