spot_img
Tuesday, March 10, 2026
spot_img

ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಠಿಸಲಾರರು-ಪ್ರೊ.ಜಯರಾಮ್ ಶೆಟ್ಟಿಗಾರ್

ಕೋಟ: “ರಾಣಿ ಅಬ್ಬಕ್ಕನ ವಿರೋಜಿತವಾದ ಬದುಕು ಇಂದಿನ ಯುವಕ, ಯುವತಿಯರಿಗೆ ಪ್ರೇರಣೆಯಾಗಬಲ್ಲುದು.ಈ ನೆಲದ ಸ್ವಾತಂತ್ರ್ಯಾಕ್ಕಾಗಿ, ಸ್ವಾಭಿಮಾನಕ್ಕಾಗಿ ಪೋರ್ಚುಗೀಸರ ವಿರುದ್ದ ಕೆಚ್ಚೆದೆಯಿಂದ ಹೋರಾಡಿದ ರಾಣಿ ಅಬ್ಬಕ್ಕನ ಕುಶಾಗ್ರಮತಿ ವ್ಯಕ್ತಿತ್ವ ರೋಮಾಂಚನಕಾರಿಯಾದದ್ದು ಅವಳ ಸಾಹಸಗಾಥೆಯನ್ನು ಮನನ ಮಾಡುವುದರಿಂದ ನಮ್ಮ ಅಂತರಂಗದಲ್ಲಿಯೂ ಈ ನಾಡು, ನುಡಿ, ನೆಲದ ಕುರಿತಾದ ಅಭಿಮಾನ ಯಾವತ್ತೂ ಜಾಗ್ರತಾವಸ್ಥೆಯಲ್ಲಿ ಇರುವಂತಾಗುತ್ತದೆ. ಇಂತಹ ಸಾಹಸಗಾಥೆಯನ್ನು ಮೆರೆದ ಮಹಾನ್ ವ್ಯಕ್ತಿತ್ವ ಉಳ್ಳವರನ್ನು ಆಗಾಗ ಸ್ಮರಿಸುವುದು ಇಂದಿನ ತುರ್ತು” ಎಂದು ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇಲ್ಲಿನ ಸಂದರ್ಶಕ ಪ್ರಾಧ್ಯಾಪಕ, ಸಂಶೋಧಕ ಪ್ರೊ.ಜಯರಾಮ ಶೆಟ್ಟಿಗಾರ್ ಅಭಿಪ್ರಾಯಪಟ್ಟರು.

ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇತಿಹಾಸ ವಿಭಾಗ ಹಾಗೂ ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ, ಶಿಕ್ಷಕ ಸಂಘ ಮಂಗಳೂರು,ವಿಭಾಗಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ಅಬ್ಬಕ್ಕ @500 ಪ್ರೇರಣದಾಯಿ ಉಪನ್ಯಾಸದ ಸಂಪನ್ಮೂಲ ವ್ಯಕ್ಕಿಯಾಗಿ ಮಾತನಾಡಿದರು.

ಗೀತಾನಂದ ಪೌಂಢೇಶನ್, ಮಣೂರು ಪ್ರವರ್ತಕರಾದ ಆನಂದ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಣಿ ಅಬ್ಬಕ್ಕನನ್ನು ಸ್ಮರಿಸುವ ಈ ಮೂಲಕ ಇತಿಹಾಸವನ್ನು ಮನನ ಮಾಡುವುದು ಇಂದಿನ ಯುವ ಪೀಳಿಗೆಗೆ ಪ್ರೇರಣಾಧಾಯಕವಾದುದು ಎಂಬ ಆಶಯ ವ್ಯಕ್ತ ಪಡಿಸಿದರು. ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕ ಸಂಘ(ರಿ) ಉಡುಪಿ ವಿಭಾಗ ಅಧ್ಯಕ್ಷರಾದ ಡಾ.ಸುರೇಂದ್ರ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೌಪರ್ಣಿ ಮತ್ತು ತಂಡ ತೃತೀಯ ಬಿ.ಕಾಂ ಪ್ರಾರ್ಥಿಸಿದರು, ಇತಿಹಾಸ ವಿಭಾಗದ ಉಪನ್ಯಾಸಕ ಶಾಂತೇಶ ತಳವಾರ ಸ್ವಾಗತಿಸಿದರು, ಇಂಗ್ಷೀಷ ಉಪನ್ಯಾಸಕಿ ಕು.ಸುಷ್ಮಾ ವಂದಿಸಿದರು ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!