spot_img
Tuesday, March 10, 2026
spot_img

ಭಾರತ ಬದಲಾದರು ವಂದೇ ಮಾತರಂ ಬದಲಾಗಲಿಲ್ಲ :ಕೋಟ ಶ್ರೀನಿವಾಸ್ ಪೂಜಾರಿ

ಗಣಿತನಗರ : ಭಾರತ‌ಆರ್ಥಿಕವಾಗಿ, ಉದ್ಯಮರಂಗದಲ್ಲಿ, ಕೈಗಾರಿಕಾರಂಗದಲ್ಲಿ ವಿವಿಧಕ್ಷೇತ್ರದಲ್ಲಿ ಸಮರ್ಥವಾಗಿ, ಸಮೃದ್ಧವಾಗಿ, ಸ್ವಾಭಿಮಾನಿಯಾಗಿ ಹಾಗೂ ಶಕ್ತಿಶಾಲಿಯಾಗಿ ಬೆಳೆದುನಿಂತಿದೆ. ಇಂದುಭಾರತ ಬದಲಾದರು, ವಂದೇ ಮಾತರಂ ಬದಲಾಗದೆಕೋಟಿಕೋಟಿ ಭಾರತೀಯರಲ್ಲಿ‌ಇಂದಿಗೂ ಅನುರಣಿಸುತ್ತಿದೆ‌ಉಡುಪಿ-ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ವಂದೇ ಮಾತರಂ -೧೫೦ ಐತಿಹಾಸಿಕ ಕಾರ್ಯಕ್ರಮದ‌ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯರಾದ ಶ್ರೀಮತಿ ಶ್ಯಾಮಲಾಕುಂದರ್‌ಮಾತನಾಡಿ, ದೇವರ ಬಗ್ಗೆ ಭಜನೆ ಭಕ್ತಿಗೀತೆ ಹೇಗೆ ಮುಖ್ಯವಾಗುವುದೋ, ಅದೇರೀತಿದೇಶದ ಬಗ್ಗೆ ಭಕ್ತಿ ಬೇಕು ಅಂದರೆ ವಂದೇ ಮಾತರಂಗೀತೆಯನ್ನು ಹೃದಯಪೂರ್ವಕವಾಗಿ ನಮಗೆ ನಾವೇ ಅರ್ಪಿಸಿಕೊಳ್ಳಬೇಕು. ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ವಂದೇ ಮಾತರಂಗೀತೆ ನಮ್ಮದ್ವನಿಯಾಗಿದೆ.ಕೋಟ್ಯಾಂತರ ಭಾರತೀಯರ ಮಂತ್ರ ಶಕ್ತಿಯಾಗಿದೆ‌ಎಂದರು.

ಇದೇ ಸಂದರ್ಭ‌ಎಲ್ಲಾ ವಿದ್ಯಾರ್ಥಿಗಳು ವಂದೇ ಮಾತರಂನ್ನು ಸಾಮೂಹಿಕವಾಗಿ ಹಾಡಿ, ಸ್ವದೇಶಿ ಮಂತ್ರ ಪ್ರಮಾಣ ವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ‌ಅಜೆಕಾರ್ ಪದ್ಮಗೋಪಾಲ್‌ಎಜುಕೇಶನ್‌ಟ್ರಸ್ಟ್‌ನ‌ಅಧ್ಯಕ್ಷರಾದಡಾ.ಸುಧಾಕರ್ ಶೆಟ್ಟಿಯವರು ಉಪಸ್ಥಿತರಿದ್ದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ ಉಪಸ್ಥಿತರಿದ್ದರು.

ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಗೀತಾಕುಲಾಲ್‌ಕಾರ್ಯಕ್ರಮ ನಿರೂಪಿಸಿ, ಪಿ.ಆರ್.ಒ ಶ್ರೀಮತಿ ಜ್ಯೋತಿಪದ್ಮನಾಭ ಭಂಡಿ ವಂದಿಸಿ, ಉಪನ್ಯಾಸಕ ಸಂತೋಷ್ ನೆಲ್ಲಿಕಾರು ಸ್ವಾಗತಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!