spot_img
Monday, March 16, 2026
spot_img

ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ: ಸಿ.ಎ ತೇರ್ಗಡೆ ಹೊಂದಿದ ಸಂಘದ ಸಿಬ್ಬಂದಿ ಪುತ್ರನಿಗೆ ಸನ್ಮಾನ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಸಾಧನೆಗೆ ಶ್ರಮವೊಂದೆ ಸಾಕು. ದೃಢ ನಿಷ್ಠೆಯಿಂದ ಏನನ್ನಾದರೂ ಸಾಧಿಸಬಹುದು. ಏಕಲವ್ಯನಂತೆ ಸಾಧಿಸುವ ಹಠವೊಂದಿದ್ದರೆ ಸಾಕು ಎಂತಹ ಕಠಿಣ ಹಾದಿಯನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ರಕ್ಷಿತ್ ಕುಲಾಲ್ ಒಂದು ಉದಾಹರಣೆ. ಮನೆಯಲ್ಲಿ ಕುಳಿತು ಶ್ರಮಪಟ್ಟು ಓದಿದ ಫಲವಾಗಿ ಸಿ.ಎ ಪಾಸಾಗಲು ಸಾಧ್ಯವಾಯಿತು ಎಂದು ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸದಾನಂದ ಶೆಟ್ಟಿ ಕೆದೂರು ಹೇಳಿದರು.

ಅವರು ಗುರುವಾರ ಸಂಜೆ ಸಂಘದ ಸಿಬ್ಬಂದಿ, ಕಳೆದ ೩೫ ವರ್ಷಗಳಿಂದ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸುತ್ತಿರುವ, ಪ್ರಸ್ತುತ ಕೆದೂರು ಶಾಖೆಯ ವ್ಯವಸ್ಥಾಪಕರಾದ ನರಸಿಂಹ ಕುಲಾಲ ಅವರ ಪುತ್ರ ರಕ್ಷಿತ್ ಕುಮಾರ್ ಸಿ.ಎ ಉತ್ತೀರ್ಣರಾದ ಬಗ್ಗೆ ಸಂಘದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಗೋಪಾಲ ಪೂಜಾರಿ, ನಿರ್ದೇಶಕರಾದ ಎಂ.ಮೋಹನದಾಸ ಶೆಟ್ಟಿ, ಅಶೋಕ ಪೂಜಾರಿ ಬೀಜಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವೇಶ್ವರ ಐತಾಳ್ ಎಸ್ ಶುಭ ಹಾರೈಸಿದರು.

ರಕ್ಷಿತ್ ಕುಲಾಲ್ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪ ನೀಡಿ ಅಭಿನಂದಿಸಲಾಯಿತು. ಆಡಳಿತ ಮಂಡಳಿ ನಿರ್ದೇಶಕರಾದ ಶರತ್ ಕುಮಾರ್ ಹೆಗ್ಡೆ ಶಾನಾಡಿ, ಗೋಪಾಲ ಶೆಟ್ಟಿ ಎಚ್.ಕೊರ್ಗಿ, ನವೀನ್ ಕುಮಾರ್ ಹೆಗ್ಡೆ ಶಾನಾಡಿ, ಭರತ್ ಕುಮಾರ್ ಶೆಟ್ಟಿ ಕಾಳಾವರ, ರಮೇಶ ಸುವರ್ಣ ಬೀಜಾಡಿ, ಆಶಾಲತಾ ಶೆಟ್ಟಿ ವಕ್ವಾಡಿ, ಸುಶೀಲ ಕೋಟೇಶ್ವರ, ಸುರೇಶ ಕೆ.ವಿ ಕಾಳಾವರ, ಚಿಕ್ಕು ಅಸೋಡು, ವೃತ್ತಿಪರ ನಿರ್ದೇಶಕಿ ಅಶ್ವಿನಿ ಶೆಟ್ಟಿ,  ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಂದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಶ್ವೇಶ್ವರ ಐತಾಳ್ ಸ್ವಾಗತಿಸಿ, ಸಂಘದ ಮಾಜಿ ಅಧ್ಯಕ್ಷ ಶರತ್ ಕುಮಾರ್ ಹೆಗ್ಡೆ ಶಾನಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜಶೇಖರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!