spot_img
Tuesday, March 10, 2026
spot_img

ಶಂಕರಪ್ಪನಕೊಡ್ಲು ಶ್ರೀ ಲಕ್ಷ್ಮೀವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾ ಸಂಘದ ‘ದಶಮ ಸಂಭ್ರಮ’ ಉದ್ಘಾಟನೆ

 

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಪುರಾಣ ಜ್ಞಾನ, ಸಂಸ್ಕೃತಿಯ ಅರಿವು ನೀಡುವ ಯಕ್ಷಗಾನದ ಶಿಕ್ಷಣವನ್ನು ನೀಡುತ್ತಿರುವ ಈ ಯಕ್ಷಗಾನ ಕಲಾ ಸಂಘದ ಸಾಧನೆ ಶ್ಲಾಘನಾರ್ಹವಾದುದು, ಇದು ದಶಮಾನೋತ್ಸವಕ್ಕೆ ಸೀಮಿತವಾಗದೆ ಇನ್ನಷ್ಟು ಕಲಾ ಸೇವೆ ನೀಡುವ ಮೂಲಕ ಸುವರ್ಣಮಹೋತ್ಸವ, ಶತಮಾನೋತ್ಸವವನ್ನು ಆಚರಿಸಿಕೊಳ್ಳಲಿ. ದಶಮಿಯ ಶುಭ ಶುಕ್ರವಾರದಂದು ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಶ್ರೀ ಲಕ್ಷ್ಮೀವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾಸಂಘ ಅಜರಾಮರವಾಗಲಿ ಎಂದು ಪುರೋಹಿತರಾದ ವೇ.ಮೂ.ನೆಂಪು ನರಸಿಂಹ ಭಟ್ ಹೇಳಿದರು.

ಅವರು ನ.೧೪ರಂದು ಕೆಂಚನೂರು ಗ್ರಾಮದ ಶ್ರೀ ಕ್ಷೇತ್ರ ಶಂಕರಪ್ಪನಕೊಡ್ಲು ಮಠದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ವಠಾರದಲ್ಲಿ ನಡೆದ ಶ್ರೀ ಲಕ್ಷ್ಮೀವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾ ಸಂಘ ರಿ., ಶಂಕರಪ್ಪನಕೊಡ್ಲು ಮಠ ಇದರ ದಶಮ ಸಂಭ್ರಮ ಹೆಜ್ಜೆ ಗೆಜ್ಜೆ ಉದ್ಘಾಟಿಸಿ ಮಾತನಾಡಿದರು.

ದೇವಸ್ಥಾನದ ತಂತ್ರಿಗಳು, ಜ್ಯೋತಿಷ್ಯರಾದ ವೇ.ಮೂ. ರಾಮಕೃಷ್ಣ ಭಟ್ ಶಾರ್ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಧಾರ್ಮಿಕ ಕ್ಷೇತ್ರದಲ್ಲಿ ಯಕ್ಷಗಾನ ಕಲೆಯನ್ನು ಕಲಿಸುತ್ತಾ, ಕಲೆಯನ್ನು ಬೆಳೆಸುತ್ತಿರುವ ಕಾರ್ಯ ಮಾದರಿಯಾದುದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಮಾತನಾಡಿ ಯಕ್ಷಗಾನ ಕಲೆ ಇವತ್ತು ಮನೋರಂಜನಾ ಮಾಧ್ಯಮವಾಗಿ ಉಳಿದಿಲ್ಲ. ಪುರಾಣ, ಸಂಸ್ಕೃತಿ, ಆಚಾರ ವಿಚಾರವನ್ನು ತಿಳಿಸುವ ಪ್ರಬಲ ಮಾಧ್ಯಮವಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಯಕ್ಷಗಾನ ಕಲಿಯುವ ಆಸಕ್ತರಿಗೆ ಉಚಿತ ತರಬೇತಿ ನೀಡಿ ಕಲಾವಿದರನ್ನಾಗಿ ರೂಪಿಸುತ್ತಿರುವುದು ಶ್ಲಾಘನಾರ್ಹವಾದುದು ಎಂದರು.

ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ ಮಾತನಾಡಿ, ಇವತ್ತು ಯಕ್ಷಗಾನ ಮೇಳಗಳು ಇರುವ ದೇವಸ್ಥಾನಗಳು ಮಾಡಬೇಕಾದ ಕೆಲಸವನ್ನು ಶಂಕರಪ್ಪನಕೊಡ್ಲು ದೇವಸ್ಥಾನ ಮಾಡುತ್ತಿದೆ. ಇವತ್ತು ಕಲಾವಿದರನ್ನು ಸೃಷ್ಟಿಸುವ ಕೆಲಸ ಮಾಡಬೇಕು, ಯಕ್ಷಗಾನವನ್ನು ಕಲಿಸಿ, ಹೊಸ ಕಲಾವಿದರನ್ನು ರೂಪಿಸುವ ಜವಬ್ದಾರಿ ಇದೆ. ಮೇಳದ ತಿರುಗಾಟದ ಸಮಯದಲ್ಲಿ ಕಲಾವಿದರನ್ನು ಹುಡುಕುವ ಬದಲು ಹೊಸ ಕಲಾವಿದರ ಸೃಷ್ಟಿಗೆ ಒತ್ತು ಕೊಡಬೇಕು, ಲಕ್ಷ್ಮೀವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾ ಸಂಘ ಮುಂದೆ ಮೇಳವಾಗಿ ಪರಿವರ್ತನೆಯಾಗಲಿ ಎಂದರು.

ಚಿತ್ತೂರು ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಡಾ.ರಾಜೇಶ ಬಾಯರಿ ಹಾಗೂ ಹಿರಿಯ ಭಾಗವತರಾದ ರಾಘವೇಂದ್ರ ಮಯ್ಯ ಹಾಲಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅನಂತ ಪದ್ಮನಾಭ ಭಟ್ ಶಂಕರಪ್ಪನಕೊಡ್ಲು, ಅರ್ಚಕರಾದ ವೇ.ಮೂ.ಸುಬ್ರಹ್ಮಣ್ಯ ಭಟ್ ಶಂಕರಪ್ಪನಕೊಡ್ಲು, ಆಡಳಿತ ಮಂಡಳಿ ಸದಸ್ಯರಾದ ಸೋಮಶೇಖರ ಶೆಟ್ಟಿ ಕೆಂಚನೂರು, ಸುಧಾ ಧಾರೇಶ್ವರ, ಕಿರಿಮಂಜೇಶ್ವರ, ನಾಗರಾಜ ಮಂಜ ಶ್ರೀ ಕ್ಷೇತ್ರ ಮಾರಣಕಟ್ಟೆ, ಸಂಘದ ಗುರುಗಳಾದ ನವೀನ್ ಕೋಟ ಉಪಸ್ಥಿತರಿದ್ದರು.

ಶ್ರೀ ಲಕ್ಷ್ಮೀವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಗುರುರಾಜ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಂಘದ ವ್ಯವಸ್ಥಾಪಕ ಪ್ರವೀಣ್ ಎಮ್ ಬಾಳಿಕೆರೆ ವಂದಿಸಿದರು. ರಾಘವೇಂದ್ರ ಉಡುಪ ನೇರಳಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಹೂವಿನ ಕೋಲು, ಯಕ್ಷಗಾನ ಪೂರ್ವರಂಗ, ತಾಳಮದ್ದಳೆ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!