spot_img
Wednesday, March 11, 2026
spot_img

ಪುರಸಭೆ ಸದಸ್ಯರ ಸರ್ವಾನುಮತದ ನಿರ್ಣಯದ ಮೂಲಕವೇ ಬೀದಿ ವ್ಯಾಪಾರಿಗಳ ತೆರವು-ಮೋಹನದಾಸ ಶೆಣೈ

ಕುಂದಾಪುರ: ಕಳೆದ ಹದಿನೈದು ದಿನಗಳಿಂದ ಕುಂದಾಪುರ ಬೀದಿ ವ್ಯಾಪಾರಿಗಳ ತೆರವು ವಿಷಯದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದ್ದು, ಇದು ಏಕಪಕ್ಷೀಯ ನಿರ್ಧಾರವಲ್ಲ. ಪುರಸಭೆಯ ಸದಸ್ಯರ ಸರ್ವಾನುಮತದ ನಿರ್ಣಯದ ಮೂಲಕವೇ ಸಾರ್ವಜನಿಕರಿಗೆ, ಸಂಚಾರ ವ್ಯವಸ್ಥೆಗೆ ತೊಡಕಾಗುತ್ತಿದ್ದ ಬೀದಿ ವ್ಯಾಪಾರಿಗಳ ತೆರವಿಗೆ ಮುಂದಲಾಗಿದೆ ಎಂದು ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಹೇಳಿದರು.
ಅವರು ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಬೀದಿ ವ್ಯಾಪಾರಿಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದ ೫-೬ ತಿಂಗಳಿಂದ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ರಸ್ತೆಗೇ ಕೆಲವೊಂದು ಗೂಡಂಗಡಿಗಳು ಚಾಚಿಕೊಂಡಿದ್ದು ಸಂಚಾರ ಸಮಸ್ಯೆಯಾಗುತ್ತದೆ ಎನ್ನುವ ದೂರುಗಳು ಕೇಳಿ ಬರುತ್ತಿದ್ದವು. ಆಹಾರ ತಿಂಡಿ ತಿನಿಸು ಮಾರಾಟ ಮಾಡುವ ಗೂಡಂಗಡಿಗಳಲ್ಲಿನ ಆಹಾರದ ಗುಣಮಟ್ಟದ ಬಗ್ಗೆಯೂ ದೂರುಗಳು ಕೇಳಿ ಬಂದಿದ್ದವು. ಈ ಹಿಂದೆ ನೆಹರೂ ಮೈದಾನದ ಗೂಡಂಗಡಿಗಳ ತೆರವು ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೇ ಇದನ್ನು ಸ್ಪಷ್ಟವಾಗಿ ಹೇಳಿದ್ದರು. ಕರೋನಾ ಸಂದರ್ಭದಲ್ಲಿ ೭೫ಕ್ಕೂ ಹೆಚ್ಚು ಗೂಡಂಗಡಿಗಳು ಆರಂಭಗೊಂಡಿದ್ದವು. ಆದರೆ ಇತ್ತೀಚೆಗೆ ಪಾನಿಪುರಿ ಮೊದಲಾದ ಪಾಸ್ಟ್‌ಪುಡ್ ಅಂಗಡಿಗಳ ಸಂಖ್ಯೆ ಮಿತಿಮೀರಿ ಹೆಚ್ಚಳವಾಗಿದೆ. ಬೀದಿಬದಿ ವ್ಯಾಪಾರಿಗಳಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ, ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಮಾಹಿತಿ ನೀಡಿದರು ಅವರು ಕೇಳುವ ಸ್ಥಿತಿಯಲ್ಲಿಲ್ಲ. ಇನ್ನೊಂದು ಅಂಶವೆಂದರೆ ಬೀದಿಬದಿ ವ್ಯಾಪಾರಿಗಳಲ್ಲೇ ಗೊಂದಲವಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪುರಸಭೆಯ ನಿರ್ಣಯದ ಆಧಾರದ ಮೇಲೆ ಹತ್ತು ಗೂಡಂಗಡಿಗಳನ್ನು ಈಗ ಇರುವ ಸ್ಥಳದಿಂದ ತೆರವು ಮಾಡಲಾಗಿದೆ. ಇದರಲ್ಲಿ ಶಾಸಕರಾಗಲಿ, ಸಂಸದರಾಗಲಿ, ಪಕ್ಷದ ಯಾವುದೇ ಪಾತ್ರವಿಲ್ಲ ಎಂದರು.

ಈಗ ತೆರವು ಮಾಡಿರುವ ಬೀದಿ ಬದಿ ವ್ಯಾಪಾರಿಗಳಿಗೂ ಮುಂದೆ ಪರ್ಯಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಯೋಚಿಸಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!