spot_img
Wednesday, November 19, 2025
spot_img

ನೇರಂಬಳ್ಳಿ ನಾರಾಯಣ ರಾವ್ ಯಕ್ಷಗಾನ ವಸ್ತು ಸಂಗ್ರಹಾಲಯ ಉದ್ಘಾಟನೆ| ಕುಂದಾಪುರ : ಎನ್.ಜಿ ಹೆಗಡೆಯವರಿಗೆ ಡಾ. ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ ಪ್ರದಾನ

ಕುಂದಾಪುರ, ನ.೧: ಯಕ್ಷಗಾನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪುರಾತನ ಕಲೆ ಯಕ್ಷಗಾನ ಅದನ್ನು ಉಳಿಸಿ ಬೆಳೆಸಬೇಕು ಎಂದು ಮಾಹೆ, ಮಣಿಪಾಲದ ಉಪಕುಲಪತಿಗಳಾದ ಡಾ.ಹೆಚ್.ಎಸ್.ಬಲ್ಲಾಳ್ ಹೇಳಿದರು.

ಅವರು ನವೆಂಬರ್ ೧ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ “ಸುವರ್ಣಾಕ್ಷ” ಎಂಬ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ ಮತ್ತು ಡಾ.ಹೆಚ್ ಶಾಂತಾರಾಮ್ ಯಕ್ಷಗಾನ ಪುರಸ್ಕಾರ ಮತ್ತು ನೇರಂಬಳ್ಳಿ ನಾರಾಯಣ ರಾವ್ ಯಕ್ಷಗಾನ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನವನ್ನು ಪ್ರೋತ್ಸಾಹಿಸಲು ಈ ಸಂಸ್ಥೆ ಮುಂಚೂಣಿಯಲ್ಲಿರುವುದು ಹೆಮ್ಮೆ ಮತ್ತು ಅಭಿನಂದನಾರ್ಹ. ಯಕ್ಷಗಾನವನ್ನು ಪ್ರೋತ್ಸಾಹಿಸಲು ಯಕ್ಷಗಾನ ಶಿಕ್ಷಣ ನೀಡುವುದಕ್ಕೆ ಮಾಹೆಯಲ್ಲಿ ಸರ್ಟಿಫಿಕೇಟ್ ಕೋರ್ಸ್ ನ್ನು ಆರಂಭಿಸಲಾಗಿದೆ ಎಂದರಲ್ಲದೆ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಶ್ರೇಷ್ಠರಾಗುತ್ತಾರೆ ಎಂದು ಹೇಳಿದರು.

ಉದ್ಯಮಿ ರಾಘವೇಂದ್ರ ರಾವ್ ನೇರಂಬಳ್ಳಿ ಅವರು ಮಾತನಾಡಿ ಸಾಮಾಜಿಕ ಸೇವೆಯಲ್ಲಿ ಸದಾಕಾಲ ನನ್ನ ಕುಟುಂಬದವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಬಗ್ಗೆ ಹೆಮ್ಮೆ ಇದೆ. ಅಲ್ಲದೆ ದಿನದ ಒಂದು ಗಂಟೆಯಾದರೂ ಸಾಮಾಜಿಕ ಕ್ಷೇತ್ರದ ಕುರಿತು ಯೊಚಿಸಿ ಮತ್ತು ದುಡಿಮೆಯ ಸ್ವಲ್ಪ ಹಣ ಮೀಸಲಿಡಿ ಎಂದು ಹೇಳಿದರು.

ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರವನ್ನು ಪ್ರದಾನ ಮಾಡಿ ಮಾತನಾಡಿದ ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ್ ಸಿ.ಕುಂದರ್ ಮಾತನಾಡಿ ಕರಾವಳಿ ಭಾಗದಲ್ಲಿ ಯಕ್ಷಗಾನ ಗಂಡುಕಲೆ. ಸುಲಲಿತ ಕನ್ನಡ ಭಾಷೆಯನ್ನು ಬಳಸುತ್ತಿರುವ ಕಲಾ ಪ್ರಕಾರ ಯಕ್ಷಗಾನ ಎನ್ನುವುದು ಹೆಮ್ಮೆಯ ವಿಚಾರ. ಇದು ನಾಡು ನುಡಿಯನ್ನು ಉಳಿಸುವ ಕಲೆ ಯಕ್ಷಗಾನ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ ಶಾಂತಾರಾಮ್ ಪ್ರಭು ಕೃತಜ್ಞತಾ ಪೂರ್ವಕ ಮಾತುಗಳನ್ನಾಡಿದರು.

ಡಾ. ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಎನ್.ಜಿ.ಹೆಗಡೆ ಕಾಲೇಜಿನ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆಗೆ ಪರಂಪರೆ ಇದೆ. ಈ ಪುರಸ್ಕಾರ ದೊರೆತಿರುವುದು ಪುಣ್ಯವೇ ಸರಿ ಎಂದು ಹೇಳಿದರು.

ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್.ಟಿ.ಸೋನ್ಸ್ ಶುಭಾಸಂಶನೆಗೈದರು. ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಿಶನ್ ಹೆಗ್ಡೆ, ಪಳ್ಳಿ ಅಭಿನಂದನಾ ಮಾತುಗಳನ್ನಾಡಿದರು.

ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ ಅವರು ಅಭಿನಂದನಾ ಭಾಷಣ ಮಾಡಿದರು. ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಸದಸ್ಯರಾದ ಡಾ.ರಂಜಿತ್.ಕುಮಾರ್ ಶೆಟ್ಟಿ, ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್, ಸದಾನಂದ ಚಾತ್ರ ಜಯಕರ ಶೆಟ್ಟಿ ಉಪಸ್ಥಿತರಿದ್ದರು.

ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಮ್ ಗೊಂಡ ವಂದಿಸಿದರು. ಕಾಲೇಜಿನ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪ್ರ ೮೯.೬ ಎಫ್.ಎಮ್ ಇದರ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!