Sunday, September 8, 2024

ಕಂದಾವರ ಗ್ರಾಮದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ

ಕುಂದಾಪುರ, ಡಿ.2: ಕಂದಾವರ ಗ್ರಾಮದ ಸಾಂತಾವರದಲ್ಲಿ ಕ್ರಿ.ಶ 15-16 ನೇ ಶತಮಾನದ ವಿಜಯನಗರ ಕಾಲದ ಶಾಸನ ಪತ್ತೆಯಾಗಿದೆ.

ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ ಸಾಂತಾವರ ಶ್ರೀ ವೀರಾಂಜನೇಯ ದೇವಾಲಯದ ಅಣತಿ ದೂರದ ಜನಾರ್ದನ ಸೇರೆಗಾರ್ ಇವರ ಆರವತ್ತು ಆನೆ ಗದ್ದೆ ಇಲ್ಲಿ ಕ್ರಿ.ಶ 15-16 ನೇ ಶತಮಾನದ ವಿಜಯನಗರ ಕಾಲದ ಶಾಸನ ಕಲ್ಲು ಪತ್ತೆಯಾಗಿದೆ.

ಶಾಸನದಲ್ಲಿ ಸೂರ್ಯ, ಚಂದ್ರ ಇರುವುದರೊಂದಿಗೆ ಸೂರ್ಯ, ಚಂದ್ರ ಇರುವ ತನಕ ಅಜರಾಮರವಾಗಿರಲಿ ಎನ್ನುವ ಸಂದೇಶದೋಂದಿಗೆ ಎಡ ಭಾಗದಲ್ಲಿ ನಂದಿ ವಿಗ್ರಹದ ಜೊತೆಗೆ ಶಿವಲಿಂಗವು ಕೂಡಾ ಇದೆ.ಶಿವಲಿಂಗದ ಬಲ ಭಾಗದಲ್ಲಿ ದೀಪಸ್ತಂಭವಿದೆ. ಇದರೊಂದಿಗೆ ರಾಜ ಶಾಸನವೆಂದೂ ತಿಳಿಸಲು ಖಡ್ಗವಿರುವುದು ಕಂಡು ಬಂದಿದೆ. ಶಾಸನ ಪಟ್ಯ ಅಸ್ಪಷ್ಠವಾಗಿ ಕಾಣಲ್ಪಟ್ಟಿದೆ.

ಈ ಶಾಸನ ಕ್ರಿ.ಶ 15-16ನೇ ಶತಮಾನದ ವಿಜಯನಗರ ಕಾಲದ  (ಸುಮಾರು 400-500 ವರ್ಷದ ಶಾಸನ) ಶಾಸನವೆಂದು ತಿಳಿದು ಬಂದಿದೆ.

ಈ ಶಾಸನವನ್ನು ಪ್ರದೀಪ ಕುಮಾರ ಬಸ್ರೂರು ಇವರು ಇತಿಹಾಸ ಸಂಶೋಧಕರಾದ ಡಾ|ಕಿಶೋರ್ ಕುಮಾರ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಪತ್ತೆ ಹಚ್ಚಲಾಗಿದೆ. ಇವರಿಗೆ ಭರತ್ ಗುಡಿಗಾರ , ಜನಾರ್ದನ  ಸೇರೆಗಾರ್ ಸಹಕಾರ ನೀಡಿದರು. ಶಾಸನದ ಅದ್ಯಯನ ವಾಗುತ್ತಿದ್ದು ಬಳಿಕವಷ್ಟೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.
ಕಂದಾವರ ಪರಿಸರದಲ್ಲಿ ವಿಜಯನಗರ ಕಾಲದ ಅಧಿಕ ಶಾಸನಗಳಿವೆ ಸಂರಕ್ಷಿಸಬೇಕಾದ ಅಗತ್ಯ ಇದೆ.

ಈ ಹಿಂದೆ ಅನತಿ ದೂರದಲ್ಲಿ ವಾಮನ ಮುದ್ರಿಕೆ ಕಲ್ಲು ಹಾಗೂ ವಿಜಯನಗರ ಕಾಲದ ಶಾಸನ ಕಲ್ಲುಗಳನ್ನು ಪ್ರದೀಪ ಕುಮಾರ ಬಸ್ರೂರು ಪತ್ತೆ ಹಚ್ಚಿ ವರದಿ ಮಾಡಲಾಗಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!