spot_img
Wednesday, March 11, 2026
spot_img

ಅ.26ಕ್ಕೆ ಅಂಕದಕಟ್ಟೆಯಲ್ಲಿ ಅದ್ದೂರಿಯ ಯಕ್ಷಗಾನ ‘ಕೃಷ್ಣಾಸ್ತು ಭಗವಾನ್ ಸ್ವಯಂ’

ಕುಂದಾಪುರ: ಮಯ್ಯ ಯಕ್ಷಬಳಗ ಟ್ರಸ್ಟ್ ಹಾಲಾಡಿ ಹಾಗೂ ಯಕ್ಷನಕ್ಷತ್ರ ಟ್ರಸ್ಟ್ ಕಿರಾಡಿ ಇವರ ಜಂಟಿ ಸಮಾಗಮದಲ್ಲಿ ಕುಂದಾಪುರ ಅಂಕದಕಟ್ಟೆ ಸಹನಾ ಕನ್ವನ್ಶನ್ ಹಾಲ್ ನಲ್ಲಿ ಅ.26, ಸಂಜೆ 6 ಗಂಟೆಯಿಂದ ‘ಕೃಷ್ಣಾಸ್ತು ಭಗವಾನ್ ಸ್ವಯಂ’ ತ್ರಿವಳಿ ಪೌರಾಣಿಕ ಆಖ್ಯಾನಗಳ ವೈಭವದ ರಂಗದರ್ಶನ ನಡೆಯಲಿದೆ.

‘ಮಹಾಮಲ್ಲ ಮಾಗಧ’ ಪ್ರಸಂಗದಲ್ಲಿ ಗಣೇಶ ಆಚಾರ್ ಬಿಲ್ಲಾಡಿ ಭಾಗವತಿಕೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಕುಮಾರ್ ಅಮೀನ್ ಕೊಕ್ಕರ್ಣೆ ಸಾಥ್ ನೀಡಲಿದ್ದಾರೆ.
ಮುಮ್ಮೇಳದಲ್ಲಿ ಮಾಗಧನ ಪಾತ್ರದಲ್ಲಿ ಪ್ರಕಾಶ್ ಕಿರಾಡಿ, ದೂತ-ಕಾರ್ತಿಕ್ ಪಾಂಡೇಶ್ವರ್, ಸತ್ಯಭಾಮೆ-ಮಾಧವ ನಾಗೂರು, ಭೀಮ-ರಾಘವೇಂದ್ರ ಪೇತ್ರಿ, ಅರ್ಜುನ-ವಿಜಯ ಮುದ್ದುಮನೆ, ಬ್ರಾಹ್ಮಣ-ಕಾರ್ತಿಕ್ ಪಾಂಡೇಶ್ವರ ನಿರ್ವಹಿಸಲಿದ್ದಾರೆ.

‘ವೀರ ಬರ್ಬರೀಕ’ ಪ್ರಸಂಗದಲ್ಲಿ ಗಣೇಶ ನಾಯ್ಕ್ ಯಡಮೊಗೆ ಅವರ ಭಾಗವತಿಕೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಎನ್.ಜಿ ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಕುಮಾರ್ ಅಮೀನ್, ಸುಜನ್ ಹಾಲಾಡಿ ಸಾಥ್ ನೀಡಲಿದ್ದಾರೆ.
ಮುಮ್ಮೇಳದಲ್ಲಿ ಬರ್ಬರೀಕ-ವಿಶ್ವನಾಥ ಹೆನ್ನಾಬೈಲು, ಬೀಮ-ಕೋಟ ಸುರೇಶ ಬಂಗೇರ, ಕೃಷ್ಣ-ರವಿ ಕೂಂಡ್ಲಿ, ಜಗಕರ್ಣ-ನಾರಾಯಣ ನಾಯ್ಕ್ ಉಳ್ಳೂರು, ಕಪಟಮುನಿ-ಸತೀಶ ಹಾಲಾಡಿ, ವತ್ಸಲೆ-ಗೋವಿಂದ ವಂಡಾರು, ಘಟೋತ್ಕಚ-ರಾಘವೇಂದ್ರ ಪೇತ್ರಿ, ಧರ್ಮರಾಯ-ಕೋಣಿ ಸುಬ್ರಹ್ಮಣ್ಯ, ಅರ್ಜುನ-ಸಂದೇಶ ಶೆಟ್ಟಿ ಕಕ್ಕುಂಜೆ, ನಕುಲ-ನವೀನ ಪೂಜಾರಿ ಕೋಡಿ, ಸಹದೇವ-ಅನೂಪ ಪಾತ್ರ ನಿರ್ವಹಿಸಲಿದ್ದಾರೆ.

‘ಗದಾಪರ್ವ’ ಆಖ್ಯಾನದಲ್ಲಿ ರಾಘವೇಂದ್ರ ಮಯ್ಯ ಹಾಲಾಡಿ ಅವರ ಭಾಗವತಿಕೆ, ಮದ್ದಳೆಯಲ್ಲಿ ಎನ್.ಜಿ ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಸುಜನ್ ಹಾಲಾಡಿ ಸಹಕರಿಸಲಿದ್ದಾರೆ.                                                                                     ಮುಮ್ಮೇಳದಲ್ಲಿ ಕೌರವ-ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಭೀಮ-ರಾಜೇಶ ಭಂಡಾರಿ ಗುಣವಂತೆ, ಬೇಹಿನಚರ-ರಮೇಶ ಭಂಡಾರಿ ಮೂರೂರು, ಧರ್ಮರಾಮ-ಕೋಣಿ ಸುಬ್ರಹ್ಮಣ್ಯ, ಅರ್ಜುನ-ಸಂದೇಶ ಶೆಟ್ಟಿ ಕಕ್ಕುಂಜೆ, ನಕುಲ-ನವೀನ ಪೂಜಾರಿ ಕೋಡಿ, ಸಹದೇವ-ಅನೂಪ, ಕೃಷ್ಣ-ಶ್ರೀನಿಧಿ ವಾರಂಬಳ್ಳಿ ಪಾತ್ರ ನಿರ್ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಬಡಗುತಿಟ್ಟು ಯಕ್ಷಗಾನ ಬಯಲಾಟ ರಂಗಭೂಮಿಯ ಸುಪ್ರಸಿದ್ಧ ಸ್ತ್ರೀವೇಷಧಾರಿ ಜಯಾನಂದ ಹೊಳೆಕೊಪ್ಪ ಇವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸುವಂತೆ ಮಯ್ಯ ಅಭಿಮಾನಿ ಬಳಗ ಹಾಗೂ ಗುರುರಾಜ್ ಅಡಿಗ ವಡ್ಡರ್ಸೆ (ಹೋಟೆಲ್ ಶ್ರೀ ಗಣೇಶ್ ಗ್ರ್ಯಾಂಡ್ ಆಗುಂಬೆ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!