spot_img
Wednesday, March 11, 2026
spot_img

ಕುಂದಾಪುರದ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಯ ದಿನದ 24 ಗಂಟೆ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕದ ಉದ್ಘಾಟನೆ

ಉನ್ನತ ಚಿಕಿತ್ಸೆ ಲಭ್ಯತೆ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ-ಡಾ.ಜಯಕರ ಶೆಟ್ಟಿ
ಜನಪ್ರತಿನಿಧಿ ವಾರ್ತೆ] ಕುಂದಾಪುರ, ಅ.26: ಕುಂದಾಪುರದಂತಹ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಿಗೆ ತುರ್ತು ಮತ್ತು ಅಪಘಾತ ಚಿಕಿತ್ಸಾ ಸೇವೆಗಳನ್ನು ವಿಸ್ತರಿಸುವುದು ಜೀವ ರಕ್ಷಣೆಯಲ್ಲಿ ಅತ್ಯಂತ ಪ್ರಮುಖ ಹೆಜ್ಜೆ. ತುರ್ತು ಪರಿಸ್ಥಿತಿಗಳಲ್ಲಿ ಸಮಯೋಚಿತ ವೈದ್ಯಕೀಯ ಪ್ರತಿಕ್ರಿಯೆ ಮತ್ತು ಉನ್ನತ ಚಿಕಿತ್ಸೆ ಲಭ್ಯತೆ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ ಶೆಟ್ಟಿ ಹೇಳಿದರು.
ಅ.26ರಂದು ಕುಂದಾಪುರದ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ, ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಈ ಪ್ರದೇಶದಲ್ಲಿ ರಸ್ತೆ ಅಪಘಾತಗಳು ಪ್ರಮುಖ ಸಮಸ್ಯೆಯಾಗಿದ್ದು, ಅತ್ಯಾಧುನಿಕ ತುರ್ತು ಚಿಕಿತ್ಸೆ ಲಭ್ಯವಾಗುವುದರಿಂದ ಅನೇಕ ಜೀವಗಳು ಉಳಿಯುತ್ತವೆ. ಕೆಎಂಸಿ ಆಸ್ಪತ್ರೆ ಮಂಗಳೂರಿನ ವತಿಯಿಂದ ನೀಡಲ್ಪಡುತ್ತಿರುವ ಟ್ರಾಫಿಕ್ ಬ್ಯಾರಿಕೇಡ್‍ಗಳೂ ರಸ್ತೆ ಸುರಕ್ಷತೆ ಬಲಪಡಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತವೆ ಎಂದರು.
ಶ್ರೀ ಸಾಯಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರಂಜನ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಎಂಸಿ ಆಸ್ಪತ್ರೆಯ ತುರ್ತು ವೈದ್ಯಕೀಯ ತಂಡವನ್ನು ಸ್ವಾಗತಿಸುವುದರಲ್ಲಿ ನಾವು ಸಂತೋಷ ವ್ಯಕ್ತಪಡಿಸುತ್ತೇವೆ. ಅವರ ಪರಿಣಿತಿ ಕುಂದಾಪುರ ಮತ್ತು ಸುತ್ತಮುತ್ತಲಿನ ಜನತೆಗೆ ಅಪಾರ ಪ್ರಯೋಜನ ತರಲಿದೆ. ಸ್ಟ್ರೋಕ್, ಹೃದಯಾಘಾತ, ವಿಷಸೇವನೆ, ಮಕ್ಕಳ ತುರ್ತು ಪ್ರಕರಣಗಳು ಮತ್ತು ರಸ್ತೆ ಅಪಘಾತಗಳು ನಮ್ಮಲ್ಲಿ ಸಾಮಾನ್ಯವಾಗಿವೆ. ಈ ಸಹಯೋಗವು ತುರ್ತು ಪ್ರತಿಕ್ರಿಯೆಯನ್ನು ಬಲಪಡಿಸುವುದರ ಜೊತೆಗೆ ಸಮುದಾಯದ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದರು.
ಕೆಎಂಸಿ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ ಸಲಹೆಗಾರ ಮತ್ತು ಕ್ಲಸ್ಟರ್ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣನ್ ಮಾತನಾಡಿ, ನಾವು ಈಗಾಗಲೇ ಪುತ್ತೂರು , ಕಕ್ಕಿಂಜೆ, ಬೆಳ್ತಂಗಡಿ ಮತ್ತು ಕೇರಳದಲ್ಲಿ ತುರ್ತು ಕೇಂದ್ರಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ. ಹೃದಯಾಘಾತ, ಸ್ಟ್ರೋಕ್, ಗಾಯ, ವಿಷಸೇವನೆ ಮತ್ತು ಮಕ್ಕಳ ತುರ್ತು ಚಿಕಿತ್ಸಾ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಕುಂದಾಪುರ ಕೇಂದ್ರದ ಪ್ರಾರಂಭದಿಂದ ಈ ಜೀವ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲವಾಗಲಿದೆ. ತುರ್ತು ಸಂದರ್ಭಗಳಲ್ಲಿ ತಕ್ಷಣದ ತ್ವರಿತ ಹಾಗೂ ನಿಪುಣ ಚಿಕಿತ್ಸೆಯಿಂದ ರೋಗಿಗಳ ಚೇತರಿಕೆ ಪ್ರಮಾಣವನ್ನು ಹೆಚ್ಚಿಸಬಹುದು. ಹೆಚ್ಚಿನ ತಜ್ಞ ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಉನ್ನತ ಮಟ್ಟದ ವೈದ್ಯಕೀಯ ಆರಕೈಗೆ ವರ್ಗಾಯಿಸಲಾಗುವುದು ಮತ್ತು ಅಲ್ಲಿ ಉತ್ತಮವಾದ ಬಹು ವಿಭಾಗದ ಆರಕೈಯನ್ನು ನೀಡಲಾಗುತ್ತದೆ ಎಂದರು.
ಕೆಎಂಸಿ ಆಸ್ಪತ್ರೆ, ಮಂಗಳೂರಿನ ಮಾರ್ಕೆಟಿಂಗ್ ವಿಭಾಗದ ಸೀನಿಯರ್ ಮ್ಯಾನೇಜರ್ ರಾಕೇಶ್ ಮಾತನಾಡಿ, ಈ ಸಹಭಾಗಿತ್ವವು ಕುಂದಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ಬೈಂದೂರು ಕೊಲ್ಲೂರು ಸಾಸ್ತಾನ ಸಾಲಿಗ್ರಾಮ, ತೆಕ್ಕಟ್ಟೆ, ಕುಂಭಾಶಿ, ತಳ್ಳೂರು ಮತ್ತು ಭಟ್ಕಳ ಪ್ರದೇಶಗಳಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಮಹತ್ವದ ಮೈಲಿಗಲ್ಲು. ಕೆಎಂಸಿ ಆಸ್ಪತ್ರೆಯ ತುರ್ತು ಸೇವಾ ಪರಿಣಿತಿಯನ್ನು ಶ್ರೀ ಸಾಯಿ ಆಸ್ಪತ್ರೆಗೆ ವಿಸ್ತರಿಸುವ ಮೂಲಕ, ಗ್ರಾಮೀಣ ಸಮುದಾಯಗಳಿಗೆ ವೇಗವಾದ ಮತ್ತು ಗುಣಮಟ್ಟದ ತುರ್ತು ಚಿಕಿತ್ಸೆ ಲಭ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಯೂನಿಯನ್ ಬ್ಯಾಂಕಿನ ಸತ್ಯಬ್ರುತು ಭಾತ್ರು, ಕುಂದಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಹಾಗೂ ಐಎಂಎ ಕುಂದಾಪುರ ಅಧ್ಯಕ್ಷ ಡಾ. ಬಾಲಕೃಷ್ಣ ಶೆಟ್ಟಿ,ಕೆಎಂಸಿಯ ಆಸ್ಪತ್ರೆಯ ದರ್ಶನ ಉಪಸ್ಥಿತರಿದ್ದರು,
ಸುಹಾಸ ಮಲ್ಯ ಪ್ರಾರ್ಥನೆ ಮಾಡಿದರು. ಶ್ರೀ ಸಾಯಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರಂಜನ್ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ರಾಜೇಶ ಕೆ.ಸಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಕೃತಿ ವಂದಿಸಿದರು.
ಹೊಸ ತುರ್ತು ಮತ್ತು ಅಪಘಾತ ಚಿಕಿತ್ಸಾ ಕೇಂದ್ರ 24×7 ಕಾರ್ಯನಿರ್ವಹಿಸುವಂತಿದ್ದು, ಹೃದಯಾಘಾತ, ಸ್ಟ್ರೋಕ್, ಗಾಯ, ವಿಷಸೇವನೆ ಮತ್ತು ಮಕ್ಕಳ ತುರ್ತು ಚಿಕಿತ್ಸಾ ನಿರ್ವಹಿಸಲು ಸಜ್ಜುಗೊಂಡಿದೆ. ತಕ್ಷಣದ ಸ್ಥಿರೀಕರಣ, ನಿಪುಣ ಹಸ್ತಕ್ಷೇಪ ಮತ್ತು ಹೆಚ್ಚಿನ ತಜ್ಞ ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಉನ್ನತ ಮಟ್ಟದ ವೈದ್ಯಕೀಯ ಆರಕೈಗೆ ವರ್ಗಾಯಿಸಲಾಗುವುದು ಮತ್ತು ಅಲ್ಲಿ ಉತ್ತಮವಾದ ಬಹು ವಿಭಾಗದ ಆರಕೈಯನ್ನು ನೀಡಲಾಗುತ್ತದೆ.
ಶ್ರೀ ಸಾಯಿ ಆಸ್ಪತ್ರೆ, ಕುಂದಾಪುರ ತುರ್ತು ಮತ್ತು ಕ್ರಿಟಿಕಲ್ ಕೇರ್ ಯುನಿಟ್, ಐಸಿಯು, ಶಸ್ತ್ರಚಿಕಿತ್ಸಾ ಕೊಠಡಿ, ಎಕ್ಸ್-ರೇ ಮತ್ತು ಡಯಗ್ನೋಸ್ಟಿಕ್ ಲ್ಯಾಬ್, ಫಿಸಿಯೋಥೆರಪಿ ವಿಭಾಗ, ಇಮೇಜಿಂಗ್ ಸೌಲಭ್ಯಗಳು, ವಿಶೇಷ ಹಾಗೂ ಡಿಲಕ್ಸ್ ವಾರ್ಡ್‍ಗಳು, ಪುರುಷ ಮತ್ತು ಮಹಿಳಾ ವಾರ್ಡ್‍ಗಳು, ಡೇ ಕೇರ್ ಯುನಿಟ್ ಮುಂತಾದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.
ಈ ಹೊಸ ಸಹಯೋಗದ ಮೂಲಕ, ಶ್ರೀ ಸಾಯಿ ಆಸ್ಪತ್ರೆಯಲ್ಲಿ ಈಗ 24 ಗಂಟೆಗಳ ತುರ್ತು ಚಿಕಿತ್ಸೆ ಸೌಲಭ್ಯವು ಕೆಎಂಸಿ ಆಸ್ಪತ್ರೆ ತಜ್ಞರ ಬೆಂಬಲದೊಂದಿಗೆ ಲಭ್ಯವಾಗಲಿದೆ. ಗೋಲ್ಡನ್ ಅವರ್ ಸಮಯದಲ್ಲಿ ತಕ್ಷಣದ ಚಿಕಿತ್ಸೆಯು ಜೀವ ಉಳಿಸುವ ಮತ್ತು ಚೇತರಿಕೆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಸಹಕಾರಿಯಾಗಲಿದೆ.
ಕೆಎಂಸಿ ಆಸ್ಪತ್ರೆ, ಮಂಗಳೂರು ಮತ್ತು ಶ್ರೀ ಸಾಯಿ ಆಸ್ಪತ್ರೆ, ಕುಂದಾಪುರ ನಡುವಿನ ಈ ಸಹಭಾಗಿತ್ವವು ತುರ್ತು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎನ್ನಲಾಗಿದೆ,

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!