spot_img
Thursday, March 12, 2026
spot_img

ಮೂಡಗಲ್ ಕೇಶವನಾಥ ದೇವಸ್ಥಾನದಲ್ಲಿ ‘ಬ್ಯೂಟಿ ‘ಸಿನಿಮಾದ ಮುಹೂರ್ತ ಹಾಗೂ ಚಿತ್ರೀಕರಣ

ಕುಂದಾಪುರ: ಕೆರಾಡಿ ಸಮೀಪದ ಮೂಡಗಲ್ ಕೇಶವನಾಥ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ಕನ್ನಡದ ಹೊಸ ಸಿನಿಮಾ ‘ಬ್ಯೂಟಿ’ ಸಿನಿಮಾದ ಮುಹೂರ್ತ ನಡೆಯಿತು.
31ಡೇಸ್ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಹೊಸ ಸಿನಿಮಾ ಪ್ರಾರಂಭಿಸಿದ ನಿರ್ದೇಶಕ ರಾಜ ರವಿಕುಮಾರ್ ಕಲ್ಪವೃಕ್ಷ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ತನುಜಾ ಮುರುಳಿ ಕೃಷ್ಣ ನಿರ್ಮಾಣದ ರಾಜ ರವಿಕುಮಾರ್ ನಿರ್ದೇಶನದ ವಿ. ಮನೋಹರ್ ಸಂಗೀತ ನೀಡುತ್ತಿರುವ “ಬ್ಯೂಟಿ” ಸಿನಿಮಾದ ಹಾಡುಗಳ ರೆಕಾರ್ಡಿಂಗ್ ಅರ್ಚನಾ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ನಡೆದಿದ್ದು ವಿ ಮನೋಹರ್ ಅವರ ಅದ್ಬುತ ಹಾಡುಗಳಿಗೆ ಚಿತ್ರತಂಡ ಸಂತೋಷ ವ್ಯಕ್ತ ಪಡಿಸಿದ್ದಾರೆ.
ಸೆಪ್ಟೆಂಬರ್ 23 ರಿಂದ ಚಿತ್ರೀಕರಣ ಪ್ರಾರಂಭವಾಗಿದೆ. ‘ಬ್ಯೂಟಿ’ ಸಿನಿಮಾದ ನಾಯಕ ನಟರಾಗಿ ಮಂಗಳೂರಿನ ಪ್ರತಿಭೆ ರವಿಕಾಂತ್ ನಟಿಸುತ್ತಿದ್ದು, ನಾಯಕಿಯಾಗಿ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ.
ಈ ಚಿತ್ರದಲ್ಲಿ ವಿ. ಮನೋಹರ್, ಅನ್ನಪೂರ್ಣ, ಚಂದ್ರಪ್ರಭಾ, ಅಂಜು ಮಲಯಾಳಿ, ಇನ್ನು ಹಲವಾರು ಕಲಾವಿದರು ನಟಿಸುತ್ತಿದ್ದಾರೆ. ಈ ಸಿನಿಮಾ ಗೆ ವೀರೇಶ್ ಕುಮಾರ್ ಛಾಯಾಗ್ರಾಹಣ, ಮಧು ತುಂಬರೆಕೆರೆ ಸಂಕಲನ, ಹೇಮಂತ್ ಕುಮಾರ್ ನಿರ್ಮಾಣ ನಿರ್ವಹಣೆ, ಕುಮಾರ್ ವಸ್ತ್ರಲಂಕಾರ, ನಾಗೇಶ್ ವರ್ಣಲಂಕಾರ, ಮಹೇಶ್ ನೃತ್ಯ ನಿರ್ದೇಶನ, ರಾಘುವೀರ್ ಸುರಗ್ ಕಾರ್ಯಕಾರಿ ನಿರ್ಮಾಪಕ, ಸಿದ್ದಾರ್ಥ್ ಕರಟಾಗಿ ಸಹ ನಿರ್ದೇಶನವಿದ್ದು ಸಿನಿಮಾದ ಚಿತ್ರೀಕರಣವನ್ನು ಮೂಡಗಲ್ ಕೇಶವನಾಥ ದೇವಸ್ಥಾನ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!