spot_img
Thursday, March 12, 2026
spot_img

ಶ್ರೀ ಶನೇಶ್ವರ ದೇವಸ್ಥಾನದಲ್ಲಿ ‘ಹೆಜ್ಜೆ’ ಯಕ್ಷಗಾನ ತರಗತಿಯ ಉದ್ಘಾಟನೆ

ಕುಂದಾಪುರ: ಸರ್ವಾಂಗೀಣ ಕಲೆಯಾದಂತಹ ಯಕ್ಷಗಾನವು ಒಂದು ಶ್ರೀಮಂತ ಕಲೆಯಾಗಿದೆ ಅದನ್ನು ಈಗಿನ ಮಕ್ಕಳು ಕರಗತ ಮಾಡಿಕೊಂಡು ಭವಿಷ್ಯದ ಉತ್ತಮ ಪ್ರಜೆಯಾಗಬೇಕು ಎಂದು ಯಕ್ಷ ಅಭಿಮಾನಿ ಕೃಷ್ಣ ಪೂಜಾರಿ ಚಕ್ರಮಕ್ಕಿ ಅಭಿಪ್ರಾಯಪಟ್ಟರು.

ಅವರು ಸ್ವರ್ಣನೂಪುರ ಯಕ್ಷಗಾನ ಮಂಡಳಿ ಕುಂದಾಪುರ ಇದರ ವತಿಯಿಂದ ಹಂಗಳೂರು ಶ್ರೀ ಶನೇಶ್ವರ ದೇವಸ್ಥಾನ ಇಲ್ಲಿ ‘ಹೆಜ್ಜೆ’ ತರಗತಿಯ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕರಾವಳಿಯ ಶ್ರೇಷ್ಠ ಕಲೆಯಾದ ಯಕ್ಷಗಾನವನ್ನು ಪ್ರಸ್ತುತ ಕಾಲಘಟ್ಟಮಾನದ ವಿದ್ಯಾರ್ಥಿಗಳು ಕಲಿತು ತಾವು ಕರಾವಳಿ ಸಂಸ್ಕೃತಿಯತ್ತ ಚಿಂತನೆಯನ್ನು ನಡೆಸಬೇಕು ಮತ್ತು ಪುರಾಣ ಕಥೆಗಳ ತಿಳುವಳಿಕೆ ಮಾಡಿಕೊಳ್ಳಬೇಕು. ಎಂದು ಅಭಿಪ್ರಾಯಪಟ್ಟರು.

ತಾ.ಪಂ. ಮಾಜಿ ಸದಸ್ಯ ಮಂಜು ಬಿಲ್ಲವ, ಹವ್ಯಾಸಿ ಭಾಗವತ ರಾಜೇಶ್ ಕರ್ಕೇರಾ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವರ್ಣನೂಪರ ಯಕ್ಷಗಾನ ಮಂಡಳಿ ಕುಂದಾಪುರ ಇದರ ವ್ಯವಸ್ಥಾಪಕರು ಹಾಗೂ ಸಿವಿಲ್ ಇಂಜಿನಿಯರ್ ಗಣೇಶ್ ಗುನಗ ವಹಿಸಿದ್ದರು. ಸಂಸ್ಥೆಯ ಗುರುಗಳಾದ ವಿಘ್ನೇಶ್ ದೇವಾಡಿಗ ಹರ್ತಟ್ಟು, ಹವ್ಯಾಸಿ, ಮದ್ದಳೆ ವಾದಕರಾದ ವಿಶ್ವನಾಥ್ ಕುಲಾಲ್ ಐರೋಡಿ ಮತ್ತು ಪೋಷಕರಾದ ಶೇಖರ್ ಪೂಜಾರಿ ಹುಣ್ಸೆಮಕ್ಕಿ ಉಪಸ್ಥಿತರಿದ್ದರು.

ಈ ಸುಸಂದರ್ಭದಲ್ಲಿ ಹವ್ಯಾಸಿ ಕಲಾವಿದರನ್ನು ಪ್ರೇರೇಪಿಸುವ ಸಲುವಾಗಿ ಅದ್ವಿತೀಯ ಹವ್ಯಾಸಿ ಕಲಾವಿದರು ಎನಿಸಿದ ಅಕ್ಷಯ್ ಕೋಟೇಶ್ವರ ಮತ್ತು ಶೋಭಿತ್ ಐರೋಡಿ ಇವರನ್ನು ಸನ್ಮಾನಿಸಲಾಯಿತು.

ಮನಸ್ವಿ ಪ್ರಾರ್ಥನೆ ಮತ್ತು ಸ್ವಾಗತಿಸಿದರು. ಗೋಪಾಲ್ ಪೂಜಾರಿ ವಂದಿಸಿದರು. ಹವ್ಯಾಸಿ ಭಾಗವತೆ ಪೂಜಾ ಆಚಾರ್ಯ ತೆಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!