spot_img
Thursday, March 12, 2026
spot_img

ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ | ರೂ.54 ಕೋಟಿ ಠೇವಣಾತಿ: 1.04 ಕೋಟಿ ಲಾಭ : 15% ಡಿವಿಡೆಂಡ್ ಘೋಷಣೆ

ಜನಪ್ರತಿನಿಧಿ ವಾರ್ತೆ[ ಕುಂದಾಪುರ: ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘವು ಸದಸ್ಯರು ಹಾಗೂ ಗ್ರಾಹಕರಿಗೆ 67 ವರ್ಷಗಳ ಸಾರ್ಥಕ ಸೇವೆಯನ್ನು ನೀಡಿ 68ನೇ ವರ್ಷದಲ್ಲಿ ಯಶಪ್ರದವಾಗಿ ಮುನ್ನೆಡೆಯುತ್ತಿದೆ. ಸಂಘದ ಪ್ರಗತಿಪೂರ್ಣ ಬೆಳವಣಿಗೆಯಲ್ಲಿ ಸದಸ್ಯರುಗಳ ಸಂಪೂರ್ಣ ಸಹಕಾರದಿಂದ ಸಂಘವು ವರದಿ ವರ್ಷದ ಅಂತ್ಯಕ್ಕೆ ರೂ.54,58,17,835.64 ಠೇವಣಾತಿ ಹೊಂದಿದ್ದು, ವರ್ಷಂತ್ಯಕ್ಕೆ ರೂ.1,04,57,493.55 ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇಕಡ 15 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ತಿಳಿಸಿದರು.

ಅವರು ಸೆ.23ರಂದು ವಂಡ್ಸೆಯ ಶ್ರಿಯಾ ಕನ್ವೆನ್‍ಷನ್ ಹಾಲ್‍ನಲ್ಲಿ ನಡೆದ ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘವು ವರ್ಷಂತ್ಯಕ್ಕೆ 5,883 ‘ಅ’ ತರಗತಿ ಸದಸ್ಯರು, 5,654 ‘ಕ’ ತರಗತಿ ಸದಸ್ಯರನ್ನು ಹೊಂದಿದೆ. ಒಟ್ಟು ಸದಸ್ಯರಿಂದ ರೂ.3,36,97,395 ಪಾಲು ಬಂಡವಾಳವನ್ನು ಹೊಂದಿದೆ. ಸಂಘವು ಸದಸ್ಯರಿಗೆ ಅನುಕೂಲವಾಗುವಂತೆ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ರೂ.46,35,21,920 ಸಾಲ ಪಡೆಯಲಾಗಿದೆ. ವರದಿ ವರ್ಷದಲ್ಲಿ ರೂ.91,17,03,282 ಸಾಲ ನೀಡಲಾಗಿದೆ. ಸರಕಾರ ರೂಪಿಸಿದ ಕಿಸಾನ್ ಕ್ರೆಡಿಟ್ ಸಾಲ ಯೋಜನೆಯಲ್ಲಿ 2,190 ರೈತ ಸದಸ್ಯರಿಗೆ ರೂ.40,30,21000ರಷ್ಟು ಮುಂಗಡ ನೀಡಲಾಗಿದೆ ಎಂದರು.

ಸಂಘದ ಸೇವೆ ಮತ್ತು ಪೂರೈಕೆ ವಿಭಾಗದ ಅಂಗವಾಗಿ ಆರು ನ್ಯಾಯಬೆಲೆ ಅಂಗಡಿಗಳನ್ನು ಹೊಂದಿ ಪಡಿತರ ಸಾಮಗ್ರಿ ಮತ್ತು ರೈತ ಸದಸ್ಯರುಗಳಿಗೆ ರಸಗೊಬ್ಬರವನ್ನು ವಿತರಿಸಲಾಗುತ್ತಿದೆ. ಸಂಘವು ಕೆರಾಡಿ, ಇಡೂರು-ಕುಂಜ್ಞಾಡಿ, ಚಿತ್ತೂರು ಮತ್ತು ಹೊಸೂರಿನಲ್ಲಿ ಪೂರ್ಣ ಪ್ರಮಾಣದ ಶಾಖೆಯನ್ನು ಹೊಂದಿದೆ ಎಂದರು.

ವರ್ಷಾಂತ್ಯಕ್ಕೆ ಸಂಘದ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಒಟ್ಟು ಮೊತ್ತವು ರೂ.2,11,05,524.55 ಆಗಿದೆ. ರೂ.3,24,000 ಸಹಾಯಧನ ನೀಡಲಾಗಿದೆ. ರೂ.5,58,67,071.98 ನಿಧಿಗಳು, ರೂ.86,07,882.32 ಇತರೆ ನಿಧಿಗಳು, ರೂ.59,32,604.91 ಸವಕಳಿ ನಿಧಿಯನ್ನು ಹೊಂದಿದೆ. ವರದಿ ವರ್ಷದ ಅಂತ್ಯಕ್ಕೆ ವಿನಿಯೋಗವು 20,64,51,087.26 ಆಗಿದೆ ಎಂದರು.

ಸಂಘದ ಎಲ್ಲಾ ಶಾಖೆಗಳು ಸ್ವಂತ ಕಟ್ಟಡ ಹೊಂದಬೇಕು ಎನ್ನುವುದು ನಮ್ಮ ಅಭಿಲಾಸೆಯಾಗಿದ್ದು, ಚಿತ್ತೂರು ಶಾಖೆಗೆ ಸ್ವಂತ ಕಟ್ಟಡ ನಿರ್ಮಾಣದ ಬಗ್ಗೆ ಚಿಂತನೆ ನಡೆಯುತ್ತಿದೆ. ಹಾಗೂ ಪ್ರಧಾನ ಕಚೇರಿ ಕಟ್ಟಡವನ್ನು ಇವತ್ತಿನ ಕಾಲಘಟ್ಟಕ್ಕೆ ತಕ್ಕಂತೆ ಮಾಡುವ ಬಗ್ಗೆ ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಈಗಾಗಲೇ ರೈತ ಸದಸ್ಯರ ಆಶೋತ್ತರಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಸಂಘ ಮಾಡುತ್ತಿದೆ. ಈಗ 3 ಲಕ್ಷದ ತನಕ ಶೂನ್ಯ ಬಡ್ಡಿದರದಲ್ಲಿ ಕೃಷಿಸಾಲ ನೀಡುತ್ತಿದ್ದು ಸರ್ಕಾರ ಘೋಷಿಸಿರುವ 5 ಲಕ್ಷದ ತನಕ ನಿಬಡ್ಡಿ ಕೃಷಿ ಸಾಲವನ್ನು ಸರ್ಕಾರ ಹಣ ಬಿಡುಗಡೆ ಮಾಡದೆ ಇರುವುದರಿಂದ ನೀಡಲು ಸಾಧ್ಯವಾಗುತ್ತಿಲ್ಲ. ಕೆಲವೊಂದು ಬಲಿಷ್ಠ ವ್ಯವಸಾಯಿಕ ಸಂಘಗಳ ತಮ್ಮ ಸ್ವಂತ ಸಂಪನ್ಮೂಲ ಬಳಸಿ ನೀಡುತ್ತಿವೆ. ಸರಕಾರ ಹಣ ಬಿಡುಗಡೆ ಮಾಡಿದ ಬಳಿಕ ನಾವು ನೀಡುತ್ತೇವೆ ಎಂದರು.

ಸಿಬ್ಬಂದಿಗಳ ಕೊರತೆಯ ನಡುವೆ ಇರುವ ಸಿಬ್ಬಂದಿಗಳೇ ಉತ್ತಮ ಸೇವೆ ನೀಡುತ್ತಿದ್ದಾರೆ. ಯಾವ ಸದಸ್ಯರಿಗೂ ಸಮಸ್ಯೆಯಾಗಿಲ್ಲ. ಸಿಬ್ಬಂದಿಗಳ ನೇಮಕಾತಿಯ ಬಗ್ಗೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸಮಸ್ಯೆಯಾಗಿದೆ. ಶೀಘ್ರ ಸಿಬ್ಬಂದಿ ನೇಮಕಾತಿಗೆ ಅನುವು ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗುವುದು ಎಂದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸಂಜೀವ ಪೂಜಾರಿ ವಂಡ್ಸೆ, ನಿರ್ದೇಶಕರಾದ ಜಗನ್ನಾಥ ಶೆಟ್ಟಿ ಹೊಸೂರು, ರಾಮಚಂದ್ರ ಮಂಜ ಚಿತ್ತೂರು, ರಾಜಾರಾಮ ಶೆಟ್ಟಿ ಇಡೂರು-ಕುಂಜ್ಞಾಡಿ, ಶೇಖರ ಶೆಟ್ಟಿ ಬೆಳ್ಳಾಲ, ಪ್ರಭಾಕರ ಶೆಟ್ಟಿ ಕೆರಾಡಿ, ಗುಂಡು ಜಿ.ಪೂಜಾರಿ ವಂಡ್ಸೆ, ಅರುಣ್ ಕುಮಾರ್ ಶೆಟ್ಟಿ ಹೊಸೂರು, ಶ್ರೀಮತಿ ಜಲಜಾಕ್ಷಿ ಶೆಡ್ತಿ ಹೊಸೂರು, ಶ್ರೀಮತಿ ಅಂಬಿಕಾ ಶೆಡ್ತಿ ವಂಡ್ಸೆ, ರಾಜು ನಾಯ್ಕ ಇಡೂರು-ಕುಂಜ್ಞಾಡಿ, ಸಂತೋಷ ನಾಯ್ಕ ಕೆರಾಡಿ, ವೃತ್ತಿಪರ ನಿರ್ದೇಶಕರಾದ ವಂಡಬಳ್ಳಿ ಜಯರಾಮ ಶೆಟ್ಟಿ, ಕರುಣಾಕರ ಶೆಟ್ಟಿ ಹೆಟ್ನಬೈಲು, ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೈನುಗಾರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಜನಾಕ್ಷಿ ಶೆಟ್ಟಿ ಹೊಸೂರು ಇವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ, ಪಿಯುಸಿ, ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ವೈದ್ಯಕೀಯ ನೆರವು ಹಸ್ತಾಂತರಿಸಲಾಯಿತು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸುಮತಿ ಶೆಟ್ಟಿ ವಿದ್ಯಾರ್ಥಿವೇತನ, ಆರೋಗ್ಯ ಸಹಾಯಧನ ಫಲಾನುಭವಿಗಳ ಪಟ್ಟಿ ವಾಚಿಸಿದರು. ಸಂಘದ ಸಿಬ್ಬಂದಿಗಳಾದ ಶೃತಿ ಮತ್ತು ಜ್ಯೋತಿ ಪ್ರಾರ್ಥನೆ ಮಾಡಿದರು. ವೃತ್ತಿಪರ ನಿರ್ದೇಶಕರಾದ ವಂಡಬಳ್ಳಿ ಜಯರಾಮ ಶೆಟ್ಟಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಸಂಜೀವ ಪೂಜಾರಿ ವಂಡ್ಸೆ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!