spot_img
Thursday, March 12, 2026
spot_img

ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ | 63 ಕೋಟಿ ಠೇವಣಿ: 84 ಲಕ್ಷ ಲಾಭ : 11% ಡಿವಿಡೆಂಡ್ ಘೋಷಣೆ 

ಜನಪ್ರತಿನಿಧಿ ವಾರ್ತೆ] ಸಹಕಾರ ಕ್ಷೇತ್ರದಲ್ಲಿ ತನ್ನದೆಯಾದ ಸೇವೆಯ ಮೂಲಕ ಹೆಸರು ಗಳಿಸಿರುವ ನಮ್ಮ ಸಂಘವು ಯಶಸ್ಸಿನ ಪಥದಲ್ಲಿ ಮುನ್ನಡೆಯುತ್ತಿದ್ದು, 72 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿ ತನ್ನ ವಿಶಿಷ್ಠ ಸೇವಾ ಪರಂಪರೆಯಿಂದ ಮುನ್ನಡೆಯುತ್ತಿದೆ. ವರದಿ ವರ್ಷದ ಅಂತ್ಯಕ್ಕೆ 63,21,37,943.26 ಠೇವಣಾತಿ ಹೊಂದಿದ್ದು, ರೂ.84,89,791.71 ಲಾಭ ಗಳಿಸಿದೆ. ಸದಸ್ಯರಿಗೆ 11% ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸದಾನಂದ ಶೆಟ್ಟಿ ಹೇಳಿದರು.
ಅವರು ಸೆ.18ರಂದು ನಡೆದ ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘವು ವರದಿ ವರ್ಷದ ಅಂತ್ಯಕ್ಕೆ 2684 ಸಾಮಾನ್ಯ ಸದಸ್ಯರನ್ನು, 372 ಸಹ ಸದಸ್ಯರನ್ನು, 2037 ನಾಮ ಮಾತ್ರ ಸದಸ್ಯರನ್ನು ಹೊಂದಿದೆ. ‘ಎ’ ತರಗತಿ ಸದಸ್ಯರಿಂದ ರೂ.2,73,46,704, ಸಹ ಸದಸ್ಯರಿಂದ ರೂ.29,78,754, ನಾಮಮಾತ್ರ ಸದಸ್ಯರಿಂದ ರೂ.40,610 ಪಾಲು ಬಂಡವಾಳ ಹೊಂದಿದೆ. ವರದಿ ಸಾಲಿನಲ್ಲಿ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ರೂ,51,62,89,168 ಸಾಲ ಪಡೆದು ಸದಸ್ಯರಿಗೆ ನೀಡಲಾಗಿದೆ ಎಂದರು.

ಸದಸ್ಯರಿಗೆ ನೀಡಿದ ಕೃಷಿ ಮತ್ತು ಕೃಷಿಯೇತರ ಸಾಲಗಳ ಬಾಬ್ತು ವರ್ಷದ ಪ್ರಾರಂಭಕ್ಕೆ ರೂ.77,72,13,640 ಬಾಕಿ ಇದ್ದು, ವರದಿ ವರ್ಷದಲ್ಲಿ ರೂ.83,55,96,777 ಸಾಲ ವಿತರಿಸಿ ಹಾಗೂ ರೂ.79,05,16,254 ರಷ್ಟು ಸಾಲ ವಸೂಲಾತಿ ಬಂದಿದ್ದು, ವರ್ಷಾಂತ್ಯಕ್ಕೆ ರೂ.82,22,94,163 ಹೊರಬಾಕಿ ಇರುತ್ತದೆ ಎಂದರು.

ಸಂಘವು ಪಡಿತರ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ರೂ.5,80,013.65 ಲಾಭ ಬಂದಿದೆ. ವರದಿ ವರ್ಷದ ಅಂತ್ಯಕ್ಕೆ ರೂ.18,49,14,162.69ರಷ್ಟು ಹೂಡಿಕೆಗಳನ್ನು ಹೊಂದಿದೆ. ಸಂಘವು ವರ್ಷಾಂತ್ಯಕ್ಕೆ ರೂ.1,37,36,557.32 ಸ್ಥಿರಾಸ್ತಿಯನ್ನು ಹೊಂದಿದೆ. ಸಂಘವು ರೂ.3,30,65,473.74 ನಿಧಿಗಳನ್ನು ಹೊಂದಿದೆ ಎಂದು ಹೇಳಿದ ಅವರು ವರದಿ ಸಾಲಿನಲ್ಲಿ ಸಂಘದ 39 ಸದಸ್ಯರು ಮೃತರಾಗಿದ್ದು, ಮೃತ ಸದಸ್ಯರ ಉತ್ತರಾಧಿಕಾರಿಗಳಿಗೆ ರೂ.3,25,000 ಮರಣ ಪರಿಹಾರ ನೀಡಲಾಗಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ ಭಾಗವತ ವರದಿ ಮಂಡಿಸಿದರು.

ಸಂಘದ ಉಪಾಧ್ಯಕ್ಷರಾದ ಶೇಖರ ನಾಯ್ಕ, ನಿರ್ದೇಶಕರಾದ ನಾರಾಯಣ ರಾವ್ ಕೆ., ಎನ್.ಮಂಜಯ್ಯ ಶೆಟ್ಟಿ, ನರಸಿಂಹ ಶೆಟ್ಟಿ, ಸತೀಶ ಹೆಗ್ಡೆ, ಗೋಪಾಲ ಪೂಜಾರಿ, ತಿಮ್ಮಪ್ಪ, ದಿನೇಶ ಶೆಟ್ಟಿಗಾರ, ಅಕ್ಷತ್ ಕುಮಾರ್, ಶ್ರೀಮತಿ ಸುಜಯಾ ಹೆಗ್ಡೆ, ಶ್ರೀಮತಿ ರಾಧಿಕಾ, ಪ್ರವೀಣ ಕುಮಾರ್ ಬಿ., ಸಹ ನಿರ್ದೇಶಕರಾದ ರಘುಪತಿ ರಾವ್, ನಾಗರಾಜ ಪೂಜಾರಿ, ಆಂತರಿಕ ಲೆಕ್ಕಪರಿಶೋಧಕರಾದ ವಿಠಲ ಗೌಡ, ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಅಪ್ಪು ಪೂಜಾರಿ, ನಾರಾಯಣ ಗೌಡ, ನಾಗಯ್ಯ ಶೆಟ್ಟಿ, ರಾಜೀವ ಹೆಗ್ಡೆ, ವೆಂಕಟೇಶ ಇವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆಯ ವಿದ್ಯಾರ್ಥಿವೇತನ ವಿತರಿಸಲಾಯಿತು.

ಚೆನ್ನಪ್ಪ ಮತ್ತು ತಂಡದವರು ಪ್ರಾರ್ಥಿಸಿದರು, ನಿರ್ದೇಶಕ ನಾರಾಯಣ ರಾವ್ ಕೆ ಸ್ವಾಗತಿಸಿದರು. ನಿರ್ದೇಶಕ ಸತೀಶ ಹೆಗ್ಡೆ ವಂದಿಸಿದರು. ಈ ಸಂದರ್ಭದಲ್ಲಿ ಸರಕಾರಿ ವೈದ್ಯರಿಂದ ವೈದ್ಯಕೀಯ ಮಾಹಿತಿ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!