spot_img
Wednesday, March 18, 2026
spot_img

ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ 12ನೇ ವಾರ್ಷಿಕ ಮಹಾಸಭೆ | ಶೇ.15 ಡಿವಿಡೆಂಡ್ ಘೋಷಣೆ 

ಸಾಸ್ತಾನ: ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಕೋಡಿ ಕನ್ಯಾಣದ ಸರಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸೆ.20ರಲ್ಲಿ ಜರುಗಿತು.

ಸಂಸ್ಥೆಯ ಅಧ್ಯಕ್ಷರಾದ ಶಂಭು ಪೂಜಾರಿ ಸ್ವಾಗತಿಸಿ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಒಟ್ಟು 100 ಕೋಟಿಗೂ ಅಧಿಕ ವ್ಯವಹಾರ ನಡೆಸಿ ಸುಮಾರು 16 ಲಕ್ಷಕ್ಕೂ ಅಧಿಕ ಲಾಭ ಗಳಿಸಿ ಸದಸ್ಯರಿಗೆ ಶೇಕಡಾ 15 ರಷ್ಟು ಡಿವಿಡೆಂಡ್ ವಿತರಿಸಿರುಹುದಕ್ಕೆ ಬಹಳಷ್ಟು ಸಂತೋಷವಾಗುತ್ತಿದೆ . ಇದಕ್ಕೆ ಕಾರಣೀಕರ್ತರದ ಸಂಸ್ಥೆಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ವಾರ್ಷಿಕ ಮಹಾಸಭೆಯ ಆಡಳಿತ ವರದಿಯನ್ನು ಸಂಸ್ಥೆಯ ವ್ಯವಸ್ಥಾಪಕಿ ಶ್ರೀಮತಿ ಪ್ರತಿಮಾರವರು ವಾಚಿಸಿದರು. ಲೆಕ್ಕಪಾರಿಶೋಧನ ವರದಿಯನ್ನು ವ್ಯವಸ್ಥಾಪಕರಾದ ಸಂದೀಪ್ ಕರ್ಕೇರ ವಾಚಿಸಿದರು. ಸಂಸ್ಥೆಯ ಮುಂದಿನ ಕಾರ್ಯ ಯೋಜನೆಯ ಬಗ್ಗೆ ವಿವರವಾಗಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ರಾಘವೇಂದ್ರ ಕರ್ಕೇರ ಮಂಡಿಸಿದರು.

ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇದರ ಉಡುಪಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ ಎಸ್ ಸಂಸ್ಥೆಯ ಗೌರವ ಸನ್ಮಾನವನ್ನು ಸ್ವೀಕರಿಸಿ ಸಂಸ್ಥೆಯ ಬೆಳವಣಿಗೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾಡುತ್ತಿರುವ ಸಮಾಜ ಸೇವೆಗಳ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡುಹುದರ ಮೂಲಕ ಸಹಕಾರಿ ರಂಗಕ್ಕೆ ಸೌಹಾರ್ದ ಸಹಕಾರಿಗಳ ಕೊಡುಗೆಯ ಬಗ್ಗೆ ವಿವರಿಸಿದರು.

ಈ ವೇಳೆ ಸಂಸ್ಥೆಯ ಎಲ್ಲಾ ನಿರ್ದೇಶಕರಾದ ಭಾಸ್ಕರ ಕಾಂಚನ್, ದಯಾನಂದ ಕರ್ಕೇರ, ಲಕ್ಷ್ಮಣ ಖಾರ್ವಿ, ರಾಘವೇಂದ್ರ ಸುವರ್ಣ, ಉದಯ ಕಾಂಚನ್, ಜಯಕುಮಾರ್ ಎ ಎಸ್, ರೋನಾಲ್ಡ್ ಡಿ ಸೋಜಾ, ಶ್ರೀಮತಿ ಆಶಾ ಉಪಾಧ್ಯ, ಶ್ರೀಮತಿ ಜಯಂತಿ ಎಸ್ ಮೊಗವೀರ ಉಪಸ್ಥಿತರಿದ್ದರು.

ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ ಯು ಸಿ ವಿಭಾಗದಲ್ಲಿ ಶೇಕಡ 80 ಕ್ಕೂ ಅಧಿಕ ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಆಗಮಿಸಿದ ಎಲ್ಲಾ ಉಡುಪಿ ಜಿಲ್ಲಾ ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು ಮತ್ತು ಸಿ.ಇ.ಓಗಳನ್ನು ಸಂಸ್ಥೆಯ ಅಧ್ಯಕ್ಷರು ಗುರುತಿಸಿ ಗೌರವಿಸಿದರು. ಸಂಸ್ಥೆಯ ವ್ಯವಸ್ಥಾಪಕ ಸಂದೀಪ್ ಕರ್ಕೇರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!