spot_img
Wednesday, March 25, 2026
spot_img

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುದರ್ಶನ ಉರಾಳರಿಗೆ ಹುಟ್ಟೂರ ಅಭಿನಂದನೆ

ಕೋಟ: ಯಕ್ಷಗಾನದ ಮದ್ದಲೆ ವಾದಕರಾಗಿ, ಪ್ರಸಾದನ ಕಲಾವಿದರಾಗಿ, ವೇಷದಾರಿಯಾಗಿ, ಅಪ್ರತಿಮ ಸಂಘಟಕರಾಗಿ, ರಂಗಭೂಮಿ ಹಿಮ್ಮೇಳ ಕಲಾವಿದರಾಗಿ, ಹವ್ಯಾಸಿ ಪತ್ರಕರ್ತರಾಗಿ, ವಿಮರ್ಶ – ಪರಿಚಯ ಲೇಖನಗಳ ಬರಹಗಾರರಾಗಿ, ಅಂಕಣಕಾರರಾಗಿ ಮೂವತ್ತು ದಶಕಗಳಿಗೂ ಹೆಚ್ಚು ಕಾಲ ಸಾಂಸ್ಕøತಿಕವಾಗಿ, ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡ ಬಹುಮುಖ ಪ್ರತಿಭೆ ಸುದರ್ಶನ ಉರಾಳರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ತಾನಾಗಿ ಒಲಿದು ಬಂದಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಪ್ರತಿಭೆಗಳಿಗೆ ಊರ ಪರವೂರ ಕಣ್ಮಣಿಗಳ ಬೆಂಬಲದ ಅಭಿಮಾನದ ಮಹಾಪೂರವು ಪ್ರಶಸ್ತಿಯ ಪಕ್ವತೆಯನ್ನು ಎತ್ತಿ ಹಿಡಿದಿದೆ. ನಿಜಕ್ಕೂ ಉರಾಳರಿಗೆ ಸಿಕ್ಕಿದ ಪ್ರಶಸ್ತಿಯ ಗರಿ ಅರ್ಥಪೂರ್ಣ ಎಂದು ಬ್ರಹ್ಮಾವರ ಎಸ್. ಎಮ್. ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಚ್. ವಿ. ಸೋಮಯಾಜಿ ಹೇಳಿದರು.

ನವಂಬರ್ 8ರಂದು ಕೋಟ ಹಂದೆ ಮಹಾಗಣಪತಿ ಮಹಾವಿಷ್ಣು ದೇವಸ್ಥಾನದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಕೋಟ ಸುದರ್ಶನ ಉರಾಳರಿಗೆ ಹಮ್ಮಿಕೊಂಡ ಹುಟ್ಟೂರ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಭಿನಂದನಾ ನುಡಿಗಳನ್ನಾಡಿದರು.
ಹಂದೆ ಶ್ರೀ ಮಹಾಗಣಪತಿ ಮಹಾವಿಷ್ಣು ದೇವಸ್ಥಾನ ಹಂದಟ್ಟು-ಕೋಟ, ಶ್ರೀ ವಿಶ್ವವಿನಾಯಕ ವಿವಿದೋದ್ಧೇಶ ಸಹಕಾರಿ ಸಂಘ ಕೋಟ, ಕಾಮದೇನು ವಿವಿದೋದ್ಧೇಶ ಸಹಕಾರಿ ಸಂಘ, ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ, ಇಂದಿರಾ ಕ್ಲೀನಿಕಲ್ ಲ್ಯಾಬೋರೇಟರಿ ಕೋಟ, ಕಟ್ಟೆ ಗೆಳೆಯರು ಹಂದೆ ದೇವಸ್ಥಾನ, ಗೆಳೆಯರ ಬಳಗ ಯುವಕ ಸಂಘ ಹಂದಟ್ಟು ಕೋಟ, ಅಭಿಮಾನ್ ಫ್ರೆಂಡ್ಸ್ ಹಂದಟ್ಟು, ಪಾಂಚಜನ್ಯ ಯುವಕ ಮಂಡಲ ಪಾರಂಪಳ್ಳಿ ಹಂದಟ್ಟು, ಹಂದಟ್ಟು ಮಹಿಳಾ ಬಳಗ ಹಂದಟ್ಟು, ಓಂ ಸ್ಟಾರ್ ಫ್ರೆಂಡ್ಸ್ ಗೊಬ್ಬರಬೆಟ್ಟು ಕೋಟ ಈ ಎಲ್ಲಾ ಸಂಸ್ಥೆಗಳ ವತಿಯಿಂದ ಹುಟ್ಟೂರ ಅಭಿನಂದನೆಯನ್ನು ಸಲ್ಲಿಸಲಾಯಿತು.

ಕೋಟ ಹಂದೆ ಮಹಾಗಣಪತಿ ಮಹಾವಿಷ್ಣು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಅಮರ್ ಹಂದೆ, ಕಟ್ಟೆ ಗೆಳೆಯರು ಹಂದೆ ದೇವಸ್ಥಾನದ ಸುರೇಶ್, ಪಾಂಚಜನ್ಯ ಯುವಕ ಮಂಡಲದ ಕೃಷ್ಣಮೂರ್ತಿ, ಕೋಟದ ಇಂದಿರಾ ಕ್ಲೀನಿಕಲ್ ಲ್ಯಾಬೊರೇಟರಿಯ ವಿಷ್ಣುಮೂರ್ತಿ ಉರಾಳ, ಅಭಿಮಾನ್ ಫ್ರೆಂಡ್ಸ್‍ನ ಮಂಜುನಾಥ ಉರಾಳ, ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸುಜಾತ ಬಾಯಿರಿ, ಹಂದಟ್ಟು ಮಹಿಳಾ ಬಳಗದ ಪುಷ್ಪ ಉಪಸ್ಥಿತರಿದ್ದರು. ಕೋಟ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿ, ರೋಟರಿ ಕ್ಲಬ್ ಅಧ್ಯಕ್ಷ ವಿಷ್ಣುಮೂರ್ತಿ ಉರಾಳ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!