spot_img
Wednesday, April 1, 2026
spot_img

ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿ ಮುಂಬಯಿ: ವಿಜೃಂಭಣೆಯ 95ನೇ ವರ್ಷದ ಗಣೇಶೋತ್ಸವ

ಮುಂಬಯಿ: ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿಯ ಆಶ್ರಯದಲ್ಲಿ 95 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಅ.27 ರಂದು ನಾನಾಚೌಕ್ ಸಮೀಪದಲ್ಲಿರುವ ಗಾಂವ್ದೇವಿಯ ಜೆ. ಕೆ. ಟವರ್ ಆವರಣದಲ್ಲಿ ಬಲು ಸಡಗರದಿಂದ ಜರಗಿತು. ಅಂದು ಬೆಳಿಗ್ಗೆ ಭವ್ಯವಾದ ಮೆರವಣಿಗೆಯಲ್ಲಿ ಶ್ರೀ ವಿಘ್ನೇಶ್ವರನ ಆಗಮನದ ನಂತರ ಪ್ರತಿಷ್ಠಾಪನೆ ಸೇರಿದಂತೆ ಹಲವಾರು ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.

ಸಾಂಪ್ರದಾಯಕವಾಗಿ ನಡೆದುಕೊಂಡು ಬಂದಂತೆ ಅಂದು ಸಂಜೆ ಗ್ರಾಮದೇವಿಯ ಸನ್ನಿಧಾನದಲ್ಲಿ ಪೂಜೆ ನೆಡೆದ ಬಳಿಕ ಭವ್ಯ ರಂಗ ಮಂಟಪದಲ್ಲಿ ರಾರಾಜಿಸುತ್ತಿರುವ ಸರ್ವಾಲಂಕೃತನಾದ ಶ್ರೀ ವಿಘ್ನೇಶ್ವರನಿಗೆ ಮಹಾಪೂಜೆ ನೆರವೇರಿತು.

ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷರಾದ ಮಹಾದೇವ ಪೂಜಾರಿ ಯವರ ನೇತೃತ್ವದಲ್ಲಿ ವೇದಮೂರ್ತಿ ನವೀನ್ ಭಟ್ ಪೂಜಾ ಕೈಂಕರ್ಯವನ್ನು ನೆರವೇರಿಸಿದರು ಬಳಿಕ ನೆರೆದ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ಪ್ರತಿವರ್ಷ ನಮ್ಮಲ್ಲಿ ಗೆಜ್ಜೆ ಸೇವೆಯ ಅಂಗವಾಗಿ ಸಂಪೂರ್ಣ ರಾತ್ರಿ ಯಕ್ಷಗಾನ ನೆಡೆಯುತ್ತಿತ್ತು ಆದರೆ ಸ್ಥಳಾವಕಾಶದ ಕೊರತೆಯಿಂದ ಕಳೆದ ಎರಡು-ಮೂರು ವರ್ಷಗಳಿಂದ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಸ್ಥಳಾವಕಾಶದ ಸಮಸ್ಯೆ ಬಗೆಹರಿದರೆ ಮುಂಬರುವ ದಿನಗಳಲ್ಲಿ ಮತ್ತೆ ಪುನ ಹಿಂದಿನಂತೆ ಯಕ್ಷಗಾನವನ್ನು ಆಯೋಜಿಸಲಿದ್ದೇವೆ ಎಂದು ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷರಾದ ಮಹಾದೇವ ಪೂಜಾರಿ ತಿಳಿಸಿದರು.

ಸಾವಿತ್ರಿ ಎಮ್. ಪೂಜಾರಿ, ಗ್ರೀಷ್ಮಾ ಎಮ್. ಪ್ರಜಾರಿ, ಲಲಿತಾ ಎಸ್. ದೇವಾಡಿಗ, ಸುಧಾಕರ ಪೂಜಾರಿ, ಜನಾರ್ದನ ನಾಯ್ಕನಕಟ್ಟೆ, ಮಹೇಶ ಪೂಜಾರಿ, ಸಜಿತ್ ಮಾರಣಕಟ್ಟೆ, ಅಣ್ಣಪ್ಪ ಚೆರುಮಕ್ಕಿ ಹಾಗೂ ಮತ್ತಿತರರು ಪೂಜಾ ಕೈಂಕರ್ಯದ ಪೂರ್ವ ತಯಾರಿಗೆ ನೆರವಾದರೆ ಮಿತ್ರ ಮಂಡಳಿಯ ಸದಸ್ಯರು ಹಾಗೂ ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿ ಗಜಾನನ ಕೃಪಾ ಕಟಾಕ್ಷಕ್ಕೆ ಪಾತ್ರರಾದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!