spot_img
Friday, April 3, 2026
spot_img

ದ. ಕ. ಸಹಕಾರಿ ಸಕ್ಕರೆ ಕಾರ್ಖಾನೆ  ಬ್ರಹ್ಮಾವರದ ಆಡಳಿತ ಮಂಡಳಿ ಚುನಾವಣೆ: ಉಡುಪಿ ಜಿಲ್ಲಾ ರೈತರ ಸಂಘದ ಬೆಂಬಲಿತ ಗುಂಪಿಗೆ ಪೂರ್ಣ ಬಹುಮತ

ಬ್ರಹ್ಮಾವರ, ಆ. 17: ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ನಿಯಮಿತ ಇದರ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ  ಉಡುಪಿ ಜಿಲ್ಲಾ ರೈತರ ಸಂಘದ ಬೆಂಬಲಿತ ಗುಂಪು ಪೂರ್ಣ ಬಹುಮತ ಗಳಿಸಿದೆ.

ದಿನಾಂಕ 17-8-2025ರಂದು ನಡೆದ ಚುನಾವಣೆ ಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಭುಜಂಗ ಶೆಟ್ಟಿ ಬ್ರಹ್ಮಾವರ, ಸಂಜೀವ ಶೆಟ್ಟಿ ಸಂಪಿಗೇಡಿ, ಸತೀಶ್ ಕಿಣಿ ಬೆಳ್ವೆ, ಕೆ ದೋರು ಸದಾನಂದ ಶೆಟ್ಟಿ, ಹೆಚ್. ಹರಿಪ್ರಸಾದ್ ಶೆಟ್ಟಿ ಬಹುಮತದಿಂದ ಆಯ್ಕೆಯಾದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರ ದಿಂದ ಮಂಜುನಾಥ್ ಗಿಳಿಯಾರು, ಆಯ್ಕೆಯಾದರು.

ಈಗಾಗಲೇ ಅವಿರೋಧವಾಗಿ 5 ಜನ ಅಭ್ಯರ್ಥಿ ಗಳು ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ರಂಗನಾಯಕ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಶಿವರಾಮ್ ಹಾಲಾಡಿ, ಹಿಂದುಳಿದ  ವರ್ಗ ದಿಂದ ಭೋಜ ಕುಲಾಲ್ ಬೆಳಂಜೆ, ಹಿಂದುಳಿದ ಬಿ ಕ್ಷೇತ್ರದಿಂದ ಉದಯ ಕುಮಾರ್ ಶೆಟ್ಟಿ ಅಡಿಕೊಡ್ಲು, ಮಹಿಳಾ ಮೀಸಲು ಸ್ಥಾನದಿಂದ ಚೈತ್ರ ಅಡಪಾ, ಗಿರಿಜಾ ಪೂಜಾರ್ತಿ ಅಮಾಸೆಬೈಲ್, ಇವರುಗಳು ಅವಿರೋಧ ಆಯ್ಕೆಯಾದರು.

ಸಹಕಾರಿ ಸಂಘಗಳ ಉಪ ನಿಬಂಧಕ ಕಚೇರಿ ಸಹಾಯಕ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಸಿ. ಎಮ್. ಚುನಾವಣೆ ನಡೆಸಿಕೊಟ್ಟರು. ಸಹಕಾರಿ ಸಂಘದ ಉಪ ನಿಬಂಧಕರಾದ ಶ್ರೀಮತಿ ಲಾವಣ್ಯ ಕೆ. ಆರ್. ಚುನಾವಣೆಯ ಮೇಲ್ವಿಚಾರಣೆ  ನಡೆಸಿದರು.

ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ ಪ್ರತಾಪ್ ಚಂದ್ರ ಶೆಟ್ಟಿ ಅವರು ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!