spot_img
Friday, April 3, 2026
spot_img

ಮಕ್ಕಳ ಮುಗ್ದ ಹೃದಯದಲ್ಲಿ ದೇವರು,ಭಕ್ತಿಯ ಕಲ್ಪನೆಯನ್ನು ಮೂಡಿಸಬೇಕು- ರಾಜಾರಾಮ ಗುರೂಜಿ

ಅಮಾಸೆಬೈಲು: ಮಕ್ಕಳು ದೇವರಿಗೆ ಸಮಾನ ಅವರ ಮುಗ್ಧತೆಯಲ್ಲಿ ದೇವರನ್ನು ಕಾಣಬಹುದು. ಅವರಿಗೆ ಭಕ್ತಿಯ ಅರಿವನ್ನು ಮೂಡಿಸಬೇಕು ಅದಕ್ಕೆ ಇದು ಸರಿಯಾದ ವೇದಿಕೆ ಎಂದು ರಾಜಾರಾಮ ಗುರೂಜಿ ಯಡಮೊಗೆಯವರು ಅಭಿಪ್ರಾಯಪಟ್ಟರು.

ಅವರು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲಿನಲ್ಲಿ ಮುದ್ದು ಕೃಷ್ಣ ವೇಷ ಸ್ಪರ್ಧೆಯನ್ನು ದೀಪ ಬೆಳಗಿಸಿ ಉದ್ಘಾಟನೆಯನ್ನು ಮಾಡಿ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಭಕ್ತಿಯ ಚಿಂತನೆಯನ್ನು ಮೂಡಿಸಬೇಕು ಆಗ ತನ್ನಿಂದ ತಾನಾಗಿಯೇ ಹಿರಿಯರಿಗೆ ಗೌರವ ಕೊಡುವ ಸಂಪ್ರದಾಯ ಪ್ರಾರಂಭವಾಗುತ್ತದೆ ಎಂದು ಹೇಳಿದರು.

ಶ್ರೀ ಕೃಷ್ಣ ವೇಷಧಾರಿ ಮಗುವಿಗೆ ನಮ್ರತಾ ಯು. ಶೆಟ್ಟಿಯವರು ಮುಖ ವರ್ಣಿಕೆಯನ್ನು ಬರೆಯುವುದರ ಮೂಲಕ ಸ್ಪರ್ಧೆಗೆ ಚಾಲನೆಯನ್ನು ನೀಡಿದರು .

ಸಭೆಯ ಅಧ್ಯಕ್ಷತೆಯನ್ನು ವಡ್ಡರ್ಸೆ ಪ್ರಕಾಶ್ ಆಚಾರ್ಯ ರವರು ವಹಿಸಿದ್ದರು ವೇದಿಕೆಯಲ್ಲಿ ಶಾಲಾ ಟ್ರಸ್ಟ್ ನ ಉಪಾಧ್ಯಕ್ಷರಾದ ಸಚ್ಚಿದಾನಂದ ಅಡಿಗ, ಶಾಲಾ ಸಂಚಾಲಕರಾದ ಶಶಿಧರ್ ದೇವಾಡಿಗ, ಶಾಲಾ ಮುಖ್ಯೋಪಾಧ್ಯಾಯಿನಿ ರಾಧಿಕಾ ರಾವ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶಂಕರ್ ನಾಯ್ಕ ಪಡು ಕೆಮ್ಮಣ್ಣು, ಕಾರ್ಯದರ್ಶಿ ಶ್ರೀಮಾ ಹೆಮ್ಮಣ್ಣ ಯಡಮೊಗೆ, ಶೇಡಿಮನೆ , ಉಪಾಧ್ಯಕ್ಷರಾದ ಸುಪರ್ಣ ಹೆಮ್ಮಣ್ಣ, ಜೊತೆ ಕಾರ್ಯದರ್ಶಿ ಸುಮತಿ ಪೂಜಾರಿ, ಮಮತಾ ಬಾಳಿಗ, ಸಂತೋಷ ಶೇಡಿಮನೆ, ಸಾಂಘವಿ ಚಕ್ಕರ್ ಮಕ್ಕಿ, ಅಮೃತಾ ತೊಂಬಟ್ಟು, ಶಕೀರಾ ಬಾನು ಹೆನ್ನಾಬೈಲು, ಸುಮನಾ ಹೆಂಗವಳ್ಳಿ, ವಿದ್ಯಾರ್ಥಿ ನಾಯಕಿ ವೈಷ್ಣವಿ ಶೆಟ್ಟಿ, ಟ್ರಾನ್ಸ್ ಪೋರ್ಟ್ ಮೆನೇಜರ್ ರಮಾಕಾಂತ್ ಪೂಜಾರಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿ ಬೃಂದಾ ಪ್ರಾರ್ಥಿಸಿದರು, ಅರ್ಚನಾ ಸ್ವಾಗತಿಸಿದರು. ಪೂರ್ಣಿಮಾ ಮೇಡಂ ವಂದಿಸಿದರು. ಸುಷ್ಮಾ  ಕಾರ್ಯಕ್ರಮ ನಿರೂಪಿಸಿದರು
ಒಟ್ಟು60ಕ್ಕಿಂತಲೂ ಹೆಚ್ಚಿನ ಪುಟಾಣಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!