spot_img
Sunday, March 15, 2026
spot_img

ಎಕ್ಸಲೆಂಟ್ ಕುಂದಾಪುರ : ವರಮಹಾಲಕ್ಷ್ಮೀ ಪೂಜೆಯ ಸಂಭ್ರಮ

ಕುಂದಾಪುರ: ಕುಂದಾಪುರದ ಎಕ್ಸಲೆಂಟ್ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಕ್ಯಾಂಪಸ್ ಅಂಗಳದ ವಿದ್ಯಾಮಂದಿರದಲ್ಲಿ ವರಮಹಾಲಕ್ಷ್ಮೀ ಪೂಜೆಯನ್ನು ಬಹಳ ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಆ ದಿನ ಬೆಳಗಿನ ಶುಭ ಮುಹೂರ್ತದಲ್ಲಿ ಮೊದಲು ಸತ್ಯನಾರಾಯಣ ಪೂಜೆಯೊಂದಿಗೆ ವಿದ್ವಾಂಸರಾದ ಗಣೇಶ ಭಟ್ಟರ ನೇತೃತ್ವದಲ್ಲಿ ಆರಂಭಗೊಂಡು ನಂತರ ಸಾಂಗವಾಗಿ ವರಮಹಾಲಕ್ಷ್ಮೀಯ ಮಹಾಪೂಜೆಯನ್ನು ವಿದ್ಯಾರ್ಥಿ-ಉಪನ್ಯಾಸಕರ ಭಕ್ತಿ ಸಂಗಮದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ಪುರೋಹಿತರ ನೇತೃತ್ವದಲ್ಲಿ ನಡೆದ ಈ ವರಮಹಾಲಕ್ಷ್ಮೀ ಮಹಾಪೂಜೆಯು ಈ ವಿದ್ಯಾಮಂದಿರದ ವಿದ್ಯಾಕೇಂದ್ರದಲ್ಲಿ ಶ್ರೀವಿದ್ಯಾಲಕ್ಷ್ಮೀಯ ಸರ್ವ ಅಲಂಕಾರದೊಂದಿಗೆ ಪುರೋಹಿತರ ಮಂತ್ರ ಘೋಷಗಳೊಂದಿಗೆ ಶಾಸ್ತ್ರಬದ್ಧವಾಗಿ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಸಂಸ್ಕೃತ ವಿದ್ವಾನರಾದ ಗಣೇಶಭಟ್ಟರು ವಿದ್ಯಾರ್ಥಿಗಳಿಗೆ ಈ ಪೂಜೆಯ ಮಹತ್ವವನ್ನು ಕಥೆಯ ಮೂಲಕ ಪ್ರಚುರಪಡಿಸುತ್ತಾ, ವಿಜ್ಞಾನಕ್ಕಿಂತಲೂ ಈ ನಮ್ಮ ಸನಾತನ ಧರ್ಮದ ಸಂಸ್ಕೃತಿಯೂ ಮಿಗಿಲಾಗಿದ್ದು, ವಿಜ್ಞಾನವೂ ಕಂಡಂತಹ “ಪ್ರಣಾಳ ಶಿಶು”ವಿನ ಸಂಶೋಧನೆಯು ಮಹಾಭಾರತದ ಯುಗದಲ್ಲಿ ಕೌರವರ ಸೃಷ್ಟಿಯಕಾಲದಲ್ಲಿ ಆಗಿದೆ ಎನ್ನುವ ಸುಂದರ ನಿದರ್ಶನಗಳೊಂದಿಗೆ ಸನಾತನ ಧರ್ಮದ ಮಹತ್ವ ಹಾಗೂ ವರಮಹಾಲಕ್ಷ್ಮೀ ಹಬ್ಬದ ಮಹತ್ವದ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಎಂ.ಎಂ. ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ ನ ಅಧ್ಯಕ್ಷರಾದ ಎಂ.ಮಹೇಶ್ ಹೆಗ್ಡೆಯವರು ಎಲ್ಲಾ ಪೂಜಾವಿಧಿಗಳಲ್ಲಿ ಸಂಸಾರ ಸಮೇತರಾಗಿ ಭಾಗವಹಿಸಿದ್ದರು. ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ಹಾಗೂ ಹೈಸ್ಕೂಲಿನ ಮುಖ್ಯಶಿಕ್ಷಕಿಯಾದ ಸರೋಜಿನಿ ಪಿ ಆಚಾರ್ಯ ಉಪಸ್ಥಿತರಿದ್ದರು. ಎಕ್ಸಲೆಂಟ್ ಕಾಲೇಜಿನ ಸರ್ವ ಉಪನ್ಯಾಸಕರು, ಸಹಶಿಕ್ಷಕರು, ವಿದ್ಯಾರ್ಥಿ-ವೃಂದದವರು, ಬೋಧಕೇತರ ಸಿಬ್ಬಂದಿಗಳು ಸಹ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಬಹಳ ಶೃದ್ಧಾಭಕ್ತಿಯಿಂದ ಶ್ರೀವರಮಹಾಲಕ್ಷ್ಮೀ ಪೂಜೆಯನ್ನು ಸಡಗರದಿಂದ ಆಚರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!