spot_img
Wednesday, April 1, 2026
spot_img

ಉಳ್ಳೂರು-74 ಕೊರಗರ ಮನೆ ನಿರ್ಮಾಣ: ಡಾ. ಎಚ್.ಎಸ್ ಶೆಟ್ಟಿ ಇವರಿಂದ ಕಾಮಗಾರಿ ವೀಕ್ಷಣೆ

ಸಿದ್ಧಾಪುರ: ಪೇಜಾವರ ಶ್ರೀಗಳ ಅಪೇಕ್ಷೆಯಂತೆ ಉಡುಪಿ ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗ ಕುಟುಂಬಗಳ ಶಿಥಿಲಾವಸ್ಥೆಯಲ್ಲಿರುವ ನೂರು ಮನೆಗಳ ಮರು ನಿರ್ಮಾಣಕ್ಕೆ ಸಂಕಲ್ಪ ತೊಟ್ಟ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಧ್ಯಕ್ಷರು ಬೆಂಗಳೂರಿನ ಉದ್ಯಮಿ ಡಾ.ಏಚ್.ಎಸ್.ಶೆಟ್ಟಿ ಇವರು ಈಗಾಗಲೇ ಜನ್ನಾಡಿಯಲ್ಲಿ ಹದಿನಾಲ್ಕು ಮನೆಗಳನ್ನು ಕೊರಗರಿಗೆ ನಿರ್ಮಿಸಿ ಕೊಟ್ಟು, 74ನೇ ಉಳ್ಳೂರುನ ಕೊರಗರ ಕಾಲೋನಿಯಲ್ಲಿ ಹದಿನಾಲ್ಕು ಕುಟುಂಬಗಳ ಎಲ್ಲಾ ಹದಿನಾಲ್ಕು ಮನೆಗಳನ್ನು ತಲಾ ಹದಿನೈದು ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಿ ಕೊಡುವ ಯೋಜನೆ ಹಾಕಿಕೊಂಡಿದ್ದರು.

ಈ ಯೋಜನೆ ಕುರಿತು ಪೇಜಾವರ ಶ್ರೀ ಗಳಿಂದ ಏಪ್ರಿಲ್ ಏಳನೇ ತಾರೀಕು ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಜರುಗಿದ್ದು, ಹದಿನಾಲ್ಕು ಮನೆಗಳ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ.

ಮುಂಬರುವ ಡಿಸೆಂಬರ್ ತಿಂಗಳಲ್ಲಿ ಈ ಮನೆಗಳ ಉದ್ಘಾಟನೆ ಮತ್ತು ಹಸ್ತಾಂತರವನ್ನು ಪೇಜಾವರ ಶ್ರೀ ಗಳು ನಡೆಸಲಿದ್ದು ಈ ಹಿನ್ನಲೆಯಲ್ಲಿ ಡಾ.ಎಚ್.ಎಸ್ ಶೆಟ್ಟಿ ಇವರು ಉಳ್ಳೂರಿನ ಕೊರಗರ ಕಾಲೋನಿಯ ಮನೆಗಳ ಕಾಮಗಾರಿ ಹಾಗೂ ಪ್ರಗತಿಯನ್ನು ವೀಕ್ಷಿಸಿದರು.

ಫಲಾನುಭವಿ ಕೊರಗ ಕುಟುಂಬವು ಮನೆಗಳ ಕಾಮಗಾರಿಯನ್ನು ಎಚ್.ಎಸ್. ಶೆಟ್ಟಿಯವರಿಗೆ ತೋರಿಸಿದ್ದು ಕೆಲಸದ ಗುಣಮಟ್ಟದ ಬಗ್ಗೆ ತಮ್ಮ ಸಂತೃಪ್ತಿಯನ್ನು ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಡಾ.ಎಚ್.ಎಸ್.ಶೆಟ್ಟಿ ಇವರ ಜೊತೆ ಸ್ಥಳೀಯರು ಹಾಗೂ ಸಾಮಾಜಿಕ ಹೋರಾಟಗಾರ ಚಿಟ್ಟೆ ರಾಜಗೋಪಾಲ ಹೆಗ್ಡೆ ಉಳ್ಳೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಕಟ್ಟಿನಬೈಲ ಕಟ್ಟಡ ಗುತ್ತಿಗೆದಾರ ಹಾಲಾಡಿ ಉದಯಕುಮಾರ್ ಶೆಟ್ಟಿ ,ಆಶಿಶ್ ಶೆಟ್ಟಿ ಮುಂತಾದವವರು ಜೊತೆಗೂಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!