spot_img
Wednesday, April 1, 2026
spot_img

ಭಂಡಾರ್ಕಾಸ್ ಕಾಲೇಜು: ‘ನಶೆ ಮುಕ್ತ ಭಾರತ ದತ್ತ ನಮ್ಮ ಚಿತ್ತ’ ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ: ಉಡುಪಿ ಜಿಲ್ಲೆಯ ಪೋಲೀಸ್ ಇಲಾಖೆ ಹಾಗೂ ಭಂಡಾರ್ ಕಾರ್ಸ್ ಪದವಿ ಪೂರ್ವ ಕಾಲೇಜು ಕುಂದಾಪುರ ಇದರ ಜಂಟಿ ಆಶ್ರಯದಲ್ಲಿ ನಡೆದಂತಹ “ನಶೆ ಮುಕ್ತ ಭಾರತ ದತ್ತ ನಮ್ಮ ಚಿತ್ತ” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಶ್ರೀ ಮಾತಾ ಆಸ್ಪತ್ರೆ, ಕುಂದಾಪುರ ಇದರ ಮನೋರೋಗತಜ್ಞರಾದ ಡಾ. ಪ್ರಕಾಶ್ ತೋಳಾರ್ ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಯುವಜನತೆ ಮತ್ತು ಮಾದಕ ವ್ಯಸನ“ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ, ದುಶ್ಚಟಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಜೀವನವನ್ನು ಮುಡಿಪಾಗಿಡಬೇಕೆಂದರು.

ಅತಿಥಿಗಳಾಗಿ ಆಗಮಿಸಿರುವ ಕುಂದಾಪುರ ಟೌನ್ ಪೋಲೀಸ್ ಠಾಣೆಯ ಎ.ಎಸ್.ಐ. ದರ್ಮೇಂದ್ರರವರು ಯುವಜನಾಂಗ ಸಮಾಜದ ಮುಖ್ಯವಾಹಿನಿಗೆ ಬಂದು ಮಾದಕ ವ್ಯಸನಕ್ಕೆ ಬಲಿಯಾಗದಂತೆ ತಮ್ಮನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಜಾಗೃತಿಯನ್ನು ಮೂಡಿಸಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಪ್ರಾಂಶುಪಾಲರಾದ ಡಾ. ಜಿ.ಎಂ.ಗೊಂಡ ಅವರು ಮಾದಕ ವಸ್ತುಗಳ ಬಳಕೆ ಹಲವು ಸಂಕಷ್ಟಗಳನ್ನು ತಂದೊಡ್ಡುತ್ತದೆ. ಸಾಹಸ, ದೈರ್ಯ, ಆತ್ಮಸ್ಥೆರ್ಯ, ವೀರತನ ಯುವಜನತೆಯಲ್ಲಿ ಭದ್ರವಾಗಿ ನೆಲೆಯಾಗಬೇಕು ಅದುವೇ ಜೀವನ ಎಂಬ ಮಾಹಿತಿಯನ್ನು ನೀಡಿದರು.

ಭಂಡಾರ್‌ಕಾರ್ಸ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿಯವರು ಶುಭಹಾರೈಸಿದರು.

ವಾಣಿಜ್ಯಶಾಸ್ತ್ರದ ಉಪನ್ಯಾಸಕರಾದ ವಿದ್ಯಾಧರ ಪೂಜಾರಿಯವರು ಸ್ವಾಗತಿಸಿ, ವಿದ್ಯಾರ್ಥಿಕ್ಷೇಮಪಾಲಾನಾ ಅಧಿಕಾರಿ ಡಾ. ಸರೋಜ ಎಂ ಕಾರ್ಯಯಕ್ರಮ ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!