spot_img
Thursday, April 2, 2026
spot_img

ಚುನಾವಣೆಯ ಬಗ್ಗೆ ಕಲಿಯಲು ಶಾಲಾ ಚುನಾವಣೆಯು ಬಹುಮುಖ್ಯ ಪಾತ್ರ ವಹಿಸುತ್ತದೆ-ಅಶೋಕ್ ಕುಮಾರ್ 

ಅಮಾಸೆಬೈಲು: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವದ ತರಬೇತಿಯನ್ನು ನೀಡಬೇಕು. ಅದು ಇಂತಹ ಶಾಲಾ ಸಂಸತ್ತುನ್ನು ರಚನೆಯನ್ನು ಮಾಡಿ ಅವರಿಗೆ ತರಬೇತಿ ನೀಡಿದಾಗ ಅವರು ನಮ್ಮ ದೇಶದ ಮೌಲ್ಯಯುತ ಆಸ್ತಿಯಾಗಿ ರೂಪುಗೊಳ್ಳುತ್ತಾರೆ ಮತ್ತು ದೇಶದ ಚುನಾವಣೆಯ ಮಾದರಿ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ಅಮಾಸೆಬೈಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಅಶೋಕ್ ಕುಮಾರ್ ಅಭಿಪ್ರಾಯ ಪಟ್ಟರು.
ಅವರು ಅಮಾಸೆಬೈಲಿನ ಡ್ಯುಯಲ್ ಸ್ಟಾರ್ ಶಾಲೆಯ ವಿದ್ಯಾರ್ಥಿ ಸಂಸತ್ತಿನ ಉದ್ಧಾಟನೆಯನ್ನು ಮಾಡಿ ಭವಿಷ್ಯದ ಪ್ರಜೆಗಳಿಗೆ ಉತ್ತಮ ಮಾರ್ಗ ದರ್ಶನವನ್ನು ಶಿಕ್ಷಕರೊಂದಿಗೆ ಪೋಷಕರು ಮಾಡಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಪ್ರಾಂಶುಪಾಲರಾದ ವಡ್ಡರ್ಸೆ ಪ್ರಕಾಶ್ ಆಚಾರ್ಯ ವಹಿಸಿದ್ದರು. ಶಾಲಾ ಉಪಾಧ್ಯಕ್ಷರಾದ ಸಚ್ಚಿದಾನಂದ ಅಡಿಗ, ಶಾಲಾ ಸಂಚಾಲಕರಾದ ಶಶಿಧರ್ ದೇವಾಡಿಗ, ಗ್ರಾಮ ಪಂಚಾಯಿತಿ ಸದಸ್ಯ ಸುಮತಿ ಪೂಜಾರಿ, ಶಾಲಾ ಮುಖ್ಯ ಶಿಕ್ಷಕಿ ರಾಧಿಕಾ ರಾವ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಗಾಯತ್ರಿ ಅಡಿಗ, ಶಾಲಾ ಟ್ರಾನ್ಸ್ ಪೊರ್ಟ್ ಮೆನೇಜರ್ ರಮಕಾಂತ, ವಿದ್ಯಾರ್ಥಿ ಪರಿಷತ್ ನ ಮಾರ್ಗದರ್ಶಕರಾದ ವಿಘ್ನೇಶ್ ಜಿ.ಎಲ್ ದೇವಾಡಿಗ ಮತ್ತು ವಿದ್ಯಾರ್ಥಿ ನಾಯಕಿ ವೈಷ್ಣವಿ ಆರ್ ಶೆಟ್ಟಿ ಉಪಸ್ಥಿತರಿದ್ದರು.

ಚುನಾವಣೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿ, “ವಿದ್ಯಾರ್ಥಿಗಳು ದೇಶದ ಆಸ್ತಿ ಅವರಿಗೆ ಚಿಕ್ಕಂದಿರುವಾಗಲೇ ಉತ್ತಮ ದೇಶದ ನಾಯಕರಾಗುವ ಕನಸು ಮತ್ತು ಉತ್ತೇಜನ ಶಾಲಾ ಸಂಸತ್ತು ಒದಗಿಸಿಕೊಡುತ್ತದೆ” ಎಂದು ಅಮಾಸೆಬೈಲು ಗ್ರಾಮ ಪಂಚಾಯಿತಿನ ಸದಸ್ಯರಾದ ಶ್ರೀಮತಿ ಸುಮತಿ ಪೂಜಾರಿ ಅಭಿಪ್ರಾಯಪಟ್ಟರು.

ವಿದ್ಯಾರ್ಥಿ ನಾಯಕಿಯಾಗಿ ವೈಷ್ಣವಿ ಆರ್ ಶೆಟ್ಟಿ, ಉಪ ನಾಯಕಿಯಾದ ಮಾನ್ಯ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಥ್ವಿಕ್ ಶೇಖರ ಪೂಜಾರಿ, ಆರೋಗ್ಯ ಮತ್ತು ಸ್ವಚ್ಛತೆ ಕಾರ್ಯದರ್ಶಿಯಾಗಿ ಅಶ್ವಿನ್ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಝಾಯಿನ್ ಮೊಹಮ್ಮದ್ ಝಕ್ರಿಯರವರು ಪ್ರಮಾಣ ವಚನ ಸ್ವೀಕರಿಸಿದರು.

ಹತ್ತನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಕ್ರೀಡಾ ಕಾರ್ಯದರ್ಶಿಯಾದ ಪ್ರತ್ವಿಕ್ ಎಸ್ ಪೂಜಾರಿ ರವರು ಸ್ವಾಗತಿಸಿದರು, ವೈಷ್ಣವಿ ಆರ್ ಶೆಟ್ಟಿ ಯವರು ಉದ್ಘಾಟಕರನ್ನು ಪರಿಚಯಿಸಿದರು, ಮುಖ್ಯ ಶಿಕ್ಷಕಿ ರಾಧಿಕಾ ರಾವ್ ವಂದಿಸಿದರು. ಹೃಷಿಕ್ ಮತ್ತು ಕಾರ್ತಿಕ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!