spot_img
Monday, January 19, 2026
spot_img

ಶಾಲೆಯಲ್ಲಿ ವಿದ್ಯೆಯ ಜೊತೆಗೆ ಪ್ರತಿಭೆಯ ಅನಾವರಣವಾಗಬೇಕು-ರಾಧಿಕಾ ರಾವ್

ಅಮಾಸೆಬೈಲು: ಶಾಲೆಯಲ್ಲಿ ವಿದ್ಯೆಯು ಗುಣಾತ್ಮಕದೊಂದಿಗೆ ಪ್ರತಿಭೆಯನ್ನು ಹುಡುಕಿ ಅನಾವರಣಗೊಳ್ಳುವಂತಹ ವಾತಾವರಣವನ್ನು ನಿರ್ಮಿಸಬೇಕು ಎಂದು ಡ್ಯುಯಲ್ ಸ್ಟಾರ್ ಶಾಲೆಯ ಮುಖ್ಯೋಪಾಧ್ಯಾಯಿನಿ ರಾಧಿಕಾ ರಾವ್ ಅಭಿಪ್ರಾಯ ಪಟ್ಟರು.

ಅವರು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಇಲ್ಲಿ ಪ್ರತಿಭಾ ಪ್ರದರ್ಶನವನ್ನು ಉದ್ಘಾಟಿಸಿ ಮಕ್ಕಳಲ್ಲಿ ಪ್ರತಿಭೆ ಇರುತ್ತದೆ ಇದನ್ನು ಗುರುತಿಸುವ ಜ್ಞಾನ ಶಿಕ್ಷಕರಲ್ಲಿ ಇರಬೇಕು. ಇದನ್ನು ನಮ್ಮ ಶಾಲೆ ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಉಪಾಧ್ಯಕ್ಷರಾದ ಸಚ್ಚಿದಾನಂದ ಅಡಿಗ ವಹಿಸಿದ್ದರು ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಶಶಿಧರ್ ದೇವಾಡಿಗ, ಶಾಲೆಯ ಟ್ರಾನ್ಸ್ಪೋರ್ಟ್ ಮ್ಯಾನೇಜರ್ ರಮಾಕಾಂತ ಪೂಜಾರಿ, ಶಾಲಾ ನಾಯಕಿ ವೈಷ್ಣವಿ, ಸಾಂಸ್ಕೃತಿಕ ಕಾರ್ಯದರ್ಶಿ ಝಾಯಿನ್ ಮೊಹಮ್ಮದ್ ಝಕ್ರಿಯ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!