spot_img
Monday, February 16, 2026
spot_img

ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

ಕುಂದಾಪುರ: ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಗ್ರಾಮದ ಹಾಲಾಡಿ-ಶಂಕರನಾರಾಯಣ ರಾಜ್ಯ ಹೆದ್ದಾರಿಯ ಕಟ್ಟೆಮಕ್ಕಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವು ಅತಿ ಪೌರಾಣಿಕ ಹಿನ್ನಲೆಯನ್ನು ಹೊಂದಿರುವ ಕ್ಷೇತ್ರವಾಗಿದೆ. ಪ್ರಸ್ತುತ ಹೆದ್ದಾರಿಯ ವಿಸ್ತರಣಾ ಕಾರ್ಯ ಮುಗಿದಿದ್ದು, ದೇವಸ್ಥಾನವು ಸಂಪೂರ್ಣ ಹೆದ್ದಾರಿಯ ಪಾಶ್ವಕ್ಕೆ ಬಂದಿರುವುದರಿಂದ, ಅಂದಾಜು 80 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಕ್ಕೆ ಸಂಕಲ್ಪಿಸಲಾಗಿದ್ದು, ನೂತನ ಶಿಲಾಮಯ ಗರ್ಭಗುಡಿ, ಪರಿವಾರ ದೈವಗಳಿಗೆ ನೂತನ ಆಲಯ, ತಡೆಗೋಡೆ ನಿರ್ಮಾಣ, ಆವರಣ ಗೋಡೆ, ಆಡಳಿತ ಕಚೇರಿ, ಸಂಗ್ರಹಣಾ ಕೊಠಡಿ, ಅಡುಗೆ ಕೊಠಡಿ, ಭದ್ರತಾ ಹುಂಡಿ, ಸುತ್ತು ಪ್ರಾಕಾರ ನಿರ್ಮಾಣ ಸೇರಿದಂತೆ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಾಗಿದ್ದು, ಈಗಾಗಲೇ ಜೋತಿಷ್ಯ ವಿದ್ವಾನ್ ಟಿ. ವಾಸುದೇವ ಜೋಯಿಸರ ನೇತೃತ್ವದಲ್ಲಿ ಆರೂಢ ಪ್ರಶ್ನಾ ಚಿಂತನೆಯನ್ನು ನಡೆಸಲಾಗಿದ್ದು, ಜು.12-2025 ಶನಿವಾರ ಕೆಸರು ಕಲ್ಲು ಮಹೂರ್ತ ಮತ್ತು ಮುಷ್ಟಿ ಕಾಣಿಕೆ ಸಮರ್ಪಣೆ ಕ್ಷೇತ್ರದ ಪುರೋಹಿತರಾದ ವೇದಮೂರ್ತಿ ಸೂರ್ಯನಾರಾಯಣ ಬಾಯರಿಯವರ ಧಾರ್ಮಿಕ ಮಾರ್ಗದರ್ಶನದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಬಂಟಕೋಡು ಗಣಪಯ್ಯ ಶೆಟ್ಟಿ, ನಾರಾಯಣ ನಾಯ್ಕ, ಕ್ರೋಡ ಶ್ರೀ ಶಂಕರನಾರಾಯಣ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀ ಲಕ್ಷ್ಮೀನಾರಾಯಣ ಉಡುಪ, ಶಂಕರನಾರಾಯಣ ಶ್ರೀ ವೀರ ಕಲ್ಲುಕುಟಿಗ ದೇವಸ್ಥಾನದ ಆಡಳಿತ ಧರ್ಮದರ್ಶಿ ಮಂಜುನಾಥ ಶೇಟ್, ಹಾಲಾಡಿ ಶ್ರೀ ಮರ್ಲುಚಿಕ್ಕು ದೈವಸ್ಥಾನದ ಆಡಳಿತ ಧರ್ಮದರ್ಶಿ ಅಮರನಾಥ ಶೆಟ್ಟಿ ಹಾಲಾಡಿ, ಹಾಲಾಡಿ ಮಾರಿಕಾನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾದ ಜ್ಞಾನೇಶ ಶೆಟ್ಟಿ, ಲಕ್ಕೊಳ್ಳಿ ಶ್ರೀ ಗಣಪತಿ ದೇವಸ್ಥಾನದ ಅಭಿವೃದ್ಧಿ ಕಮಿಟಿಯ ಅಧ್ಯಕ್ಷರಾದ  ಎಂ.ವಿಶ್ವನಾಥ ಶೆಟ್ಟಿ,ಹೆಬ್ಬಾಡಿ. ಉಳ್ಳೂರು ಶ್ರೀ ಬನಶಂಕರಿ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾದ ಕಳ್ಗಿ  ಸುಧಾಕರ ಶೆಟ್ಟಿ, ಸೌಡ ಮೆಟ್ಕಲ್ ಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಎಂ.ಸುಧಾಕರ ಶೆಟ್ಟಿ, ಕೊಳನಕಲ್ಲು ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕನ್ನಡಜಡ್ಡು ಪ್ರದೀಪಚಂದ್ರ ಶೆಟ್ಟಿ, ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ರಾಜಗೋಪಾಲ ಅಡಿಗ, ಖಜಾಂಚಿ ಎಂ. ಸುಧೀರ್ ರಾವ್ ಮತ್ತು ಸಮಿತಿಯ ಸದಸ್ಯರು, ಬಂಟಕೋಡು ಕೋಟೆರಾಯ ದೇವಸ್ಥಾನದ ಕಾರ್ಯಾಧ್ಯಕ್ಷರಾದ ಶಂಕರ ಶೆಟ್ಟಿ ಬಂಟಕೋಡು, ಸಂಪಿಗೇಡಿ ಸುಕುಮಾರ ಶೆಟ್ಟಿ, ಹಾಲಾಡಿ-ಬಿದ್ಕಲ್ಕಟ್ಟೆ ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷರು ಹಾಗೂ ನಿವೃತ್ತ ಅಧ್ಯಾಪಕರಾದ ಚಂದ್ರಶೇಖರ ಶೆಟ್ಟಿ ಮಣಿಗೇರಿ, ಅಗ್ರಹಾರ ಶ್ರೀ ಸಾಂಬ ಸದಾಶಿವ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸದಸ್ಯರು, ಮುಂಬಯಿ ಉದ್ಯಮಿಗಳಾದ ಕುತ್ಯಾರು ನಾರಾಯಣ ಶೆಟ್ಟಿ ಗಾವಳಿ, ಶಂಕರನಾರಾಯಣ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರವಿ ಕುಲಾಲ್, ಹಾಲಿ ಸದಸ್ಯರಾದ ಪಾಂಡು ನಾಯ್ಕ್ ತಲ್ಲಾರಿ. ಸಿದ್ದಾಪುರ ಹಿರಿಯ ನಾಗರೀಕರ ವೇದಿಕೆಯ ಉಪಾಧ್ಯಕ್ಷ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಭೋಜ ಶೆಟ್ಟಿ ಸಿದ್ದಾಪುರ, ಹಾಗೂ ಸದಸ್ಯರು, ಕಾಪು ಶ್ರೀ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಪ್ರಮುಖರಾದ ರಮೇಶ ಶೆಟ್ಟಿ ಕಾಪು, ಜನಜಾಗೃತಿ ವೇದಿಕೆಯ ಸದಸ್ಯರಾದ ಸೂರ್ಯಪ್ರಕಾಶ ದಾಮ್ಲೆ ಹಾಗೂ ಸ್ಥಳ ವಂದಿಗರಾದ ಸಂಜೀವ ಮಡಿವಾಳ, ಶಂಕರನಾರಾಯಣ ಅರಣ್ಯ ಸಂರಕ್ಷಣಾಧಿಕಾರಿ ಜೀವನ ಶೆಟ್ಟಿ, ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ದಿನಕರ ತೋಳಾರ್, ಕಾರ್ಯದರ್ಶಿ ಆನಂದ ನಾಯ್ಕ ಹಾಗೂ ಸಮಿತಿಯ ಸರ್ವಸದಸ್ಯರು, ಸೇವಾ ಕಾರ್ಯಕರ್ತರು ಹಾಗೂ ಊರ, ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!