spot_img
Thursday, April 2, 2026
spot_img

ಕುಂದಾಪುರದಲ್ಲಿ ಜು.20ಕ್ಕೆ ಲಗೋರಿ ಗ್ರಾಮೀಣ ಕ್ರೀಡಾ ಸಡಗರ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಸಾರಥ್ಯದಲ್ಲಿ ಗ್ರಾಮೀಣ ಕ್ರೀಡಾಸಡಗರ ಲಗೋರಿ ಜುಲೈ 20 ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ತನಕ ಕುಂದಾಪುರ ಬೋಡ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕರ್ಕಾಟಕ ಅಮವಾಸ್ಯೆ ದಿನ ಎಲ್ಲರೂ ಕುಂದಾಪುರ ಕನ್ನಡ ದಿನವನ್ನು ಆಚರಣೆ ಮಾಡಿದರೆ ನಮ್ಮ ಸಂಸ್ಥೆಯು ಕಳೆದ ವರ್ಷದಿಂದ ಭಾಷೆಯ ಹೆಸರಿನಲ್ಲಿ ಲಗೋರಿ ಎಂಬ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗಿ ಜಾತಿ ಮತ್ತು ಧರ್ಮದ ಹೆಸರಲ್ಲಿ ಕ್ರೀಡೆ ನಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಆದರೆ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಸಂಸ್ಥೆಯು ಭಾಷೆಯ ಹೆಸರಲ್ಲಿ ಕ್ರೀಡೆ ನಡೆಸುತ್ತಿದೆ. ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದೆ. ಭಾಷಾ ಪ್ರೇಮಿಗಳು ಒಗ್ಗೂಡಿಸಿ ಆಡಿಸುತ್ತಿದ್ದೇವೆ. ತೆರೆಯ ಮರೆಗೆ ಸರಿದ ಕ್ರೀಡೆಯನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಇದರಲ್ಲಿ ವೈಯಕ್ತಿಕ ವಿಭಾಗ, ಮುಕ್ತ ವಿಭಾಗ ಹಾಗೂ ಗುಂಪು ಆಟಗಳು ನಡೆಯಲಿವೆ. 12 ವರ್ಷದ ಕೆಳಗಿನ ಹುಡುಗ-ಹುಡುಗಿಯರಿಗೆ ಗುರಿ ಇಟ್ಟು ಹೊಡೆಯುವುದು, ಚಕ್ರವ್ಯೂಹ, ಗೋಣಿಚೀಲ ಓಟ, ಸೈಕಲ್ ಟಯರ್ ಓಟ, ನಿಮ್ಮ್ ಕಾಲ್ಗುಣ, 17 ವರ್ಷ ಮತ್ತು ಅದಕ್ಕಿಂತ ಕೆಳಗಿನ ಹುಡುಗ ಹುಡುಗಿಯರಿಗೆ ಉಪ್ಪು ಮುಡಿ, ಗೋಣಿಚೀಲ ಓಟ, ಗೂಟ ಸುತ್ತಿ ಓಟ, ಸೈಕಲ್ ಟಯರ್ ಓಟ, ಕಂಬಳ, ಮುಕ್ತ ವಿಭಾಗದಲ್ಲಿ ಪುರುಷರು ಮಹಿಳೆಯರಿಗೆ (65 ವರ್ಷ ಕೆಳಗಿನ ವಯೋಮಿತಿ) ಗೋಣಿಚೀಲ ಓಟ, ಕಂಬಳ, ಸೈಕಲ್ ಟಯರ್ ಓಟ, ಗೂಟ ಸುತ್ತಿ ಓಟ, ಉಪ್ಪು ಮುಡಿ, ಕಣ್ಣು ಕಟ್ಟಿ ಮಡಿಕೆ ಒಡೆಯುವುದು, ಗುಂಪು ಆಟಗಳಲ್ಲಿ ಲಗೋರಿ, ಚೆಂಡಾನ್ ಚೆಂಡು, ಹಗ್ಗ ಜಗ್ಗಾಟ (9ಜನರ ತಂಡ), ಮಹಿಳೆಯರಿಗೆ ಬೆನ್ಚೆಂಡು, ಡೊಂಕಾಲು, ಥ್ರೋಬಾಲು, ಹಗ್ಗಜಗ್ಗಾಟ ನಡೆಯಲಿದೆ. ಅಪರೂಪದ ಚೆನ್ನೆಮಣೆ, ಗುಡ್ನ, ಗೋಲಿ ಆಟ ಪ್ರದರ್ಶನ ಆಟಗಳು ನಡೆಯಲಿವೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ರಾಜೇಶ ಕಾವೇರಿ, ಕೆ.ಆರ್ ನಾಯ್ಕ್, ಸಾಯಿನಾಥ ಶೇಟ್, ವೆಂಕಟೇಶ್, ಜೋಯ್ ಕರ್ವೇಲ್ಲೊ, ಕಮಲ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!